ಕೇರಳ : ಕೆಲವೊಮ್ಮೆ ಕೆಲವರಿಗೆ ಅದೃಷ್ಟ ಅನ್ನುವುದು ಹೇಗೆ ಹುಡುಕಿಕೊಂಡು ಬರುತ್ತದೆ ಅನ್ನುವುದನ್ನು ಹೇಳಲಾಗದು.ಅದರಲ್ಲೂ ಕೇರಳದಲ್ಲಿ ಅದೃಷ್ಟ ಶೂರರು ಒಂದಿಷ್ಟು ಹೆಚ್ಚಿದ್ದಾರೆ ಅಂದ್ರೆ ತಪ್ಪಿಲ್ಲ. ಲಾಟರಿ ಟಿಕೆಟ್ ಗಳಲ್ಲಿ ಬಂಪರ್ ಹೊಡೆದವರ ಕಥೆಗಳೇ ಇದಕ್ಕೆ ಸಾಕ್ಷಿ.
ಹೀಗೆ ಕೇರಳ ಮೂಲದ ರಂಜಿತ್ ಸೋಮರಾಜನ್ ದುಬೈ ನಲ್ಲಿ ಕಾರು ಚಾಲಕನಾಗಿದ್ದು, ಇತ್ತೀಚೆಗೆ ಸೋಮರಾಜನ್ ಹಾಗೂ 9 ಜನ ಸ್ನೇಹಿತರು ತಲಾ 2000 ರೂಪಾಯಿ ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ಇದೀಗ ಈ ಟಿಕೆಟ್ ಗೆ 40 ಕೋಟಿ ಬಹುಮಾನ ಬಂದಿದೆ.
ಇನ್ನು ಬಹುಮಾನ ಗೆದ್ದಿರುವ ಕುರಿತಂತೆ ಮಾತನಾಡಿರುವ ರಂಜಿತ್, ಕಳೆದ 3 ವರ್ಷಗಳಿಂದ ನಾನು ಟಿಕೆಟ್ ಖರೀದಿಸುತ್ತಿದ್ದೆ. ಒಂದಲ್ಲ ಒಂದು ದಿನ ಲಾಟರಿ ಹೊಡೆಯಬಹುದು ಅನ್ನುವ ನಿರೀಕ್ಷೆ ಇತ್ತು. ಆದರೆ ಬಂಪರ್ ಬಹುಮಾನದ ನಿರೀಕ್ಷೆ ಇರಲಿಲ್ಲ.ಎರಡು ಅಥವಾ ಮೂರನೇ ಬಹುಮಾನ ಬರಬಹುದು ಎಂದು ನಿರೀಕ್ಷೆ ಪಟ್ಟಿದ್ದೆ ಅಂದಿದ್ದಾರೆ.
ಇದೀಗ ತಂಡಕ್ಕೆ 40 ಕೋಟಿ ಬಂದ ಹಿನ್ನಲೆಯಲ್ಲಿ ಎಲ್ಲರಿಗೂ ತಲಾ 4 ಕೋಟಿ ಹಣ ಸಿಗಲಿದೆ.
Discussion about this post