ಮಂಗಳೂರು: ನ್ಯೂ ಮಂಗಳೂರು ಬಂದರಿನಲ್ಲಿ ಲಾರಿಯೊಂದು ಸಮುದ್ರಕ್ಕೆ ಬಿದ್ದ ಪರಿಣಾಮ ಇಬ್ಬರು ನೀರು ಪಾಲಾದ ಘಟನೆ ನಡೆದಿದೆ.
ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ರಾತ್ರಿ 10.30ರ ಸುಮಾರಿಗೆ NMPTಯ 14ನೇ ಬರ್ತ್ ನಲ್ಲಿ ನಿಲ್ಲಿಸಿದ್ದ ಲಾರಿ ಸಮುದ್ರಕ್ಕೆ ಬಿದ್ದಿದೆ. ದುರ್ಘಟನೆಯಲ್ಲಿ ಚಾಲಕ ರಾಜೇಸಾಬ್ ಹಾಗೂ ಕ್ಲೀನರ್ ಭೀಮಪ್ಪ ಸಮುದ್ರ ಪಾಲಾಗಿದ್ದಾರೆ.
ಹಡಗಿನಿಂದ ಕಬ್ಬಿಣದ ಅದಿರು ತುಂಬುವ ಸಲುವಾಗಿ ಡೆಲ್ಟಾ ಕಂಪನಿಯ ಲಾರಿ ಬಂದರಿಗೆ ಬಂದಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಸಮುದ್ರಕ್ಕೆ ಬಿದ್ದ ಬೆನ್ನಲ್ಲೇ ದುರಂತದ ಹಡಗು ಪೈಲಟ್ ಸಂಚಾರ ನಿರ್ವಹಣಾ ವ್ಯವಸ್ಥೆ ಗೆ ಮಾಹಿತಿ ನೀಡಿದ್ದಾರೆ. ತಕ್ಷಣ CISFನ QRT ಪಡೆಯ ಗಸ್ತು ತಂಡ ಟಗ್ ಬೋಟ್ನಲ್ಲಿ ಅಪಘಾತದ ಸ್ಥಳವನ್ನು ತಲುಪುವ ಹೊತ್ತಿಗೆ ಇಬ್ಬರೂ ನಾಪತ್ತೆಯಾಗಿದ್ದರು. ಬಳಿಕ ಶೋಧ ಕಾರ್ಯ ನಡೆಸಿದಾಗ ರಾಜೇಸಾಬ್ ಶವವಾಗಿ ಪತ್ತೆಯಾಗಿದ್ದಾರೆ. ಕ್ಲೀನರ್ ಭೀಮಪ್ಪ ಅವರಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ.
Discussion about this post