ಕೊಟ್ಟಕ್ಕಲ್ ಆಯುರ್ವೇದ ಶಾಲೆಯ ಟ್ರಸ್ಟಿ ಹಾಗೂ ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದ ಪಿ.ಕೆ. ವಾರಿಯರ್ ಇಂದು ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 12-30ರಲ್ಲಿ ಕೊಟ್ಟಕ್ಕಲ್ ನಲ್ಲಿ ಅವರು ಕೊನೆಯುಸಿರೆಳೆದರು. ಜೂನ್ 8 ರಂದು ಅವರಿಗೆ 100 ವರ್ಷ ತುಂಬಿತ್ತು.
ವಯೋ ಸಹಜ ಅನಾರೋಗ್ಯದಿಂದಾಗಿ ಅವರು ಕೊಟ್ಟಕ್ಕಲ್ ನ ಆರ್ಯ ವೈದ್ಯ ಶಾಲೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿಗಷ್ಟೇ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಕೊರೋನಾ ಗೆದ್ದು ಬಂದಿದ್ದರು.
1944ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಪಿಎಸ್ ವಾರಿಯರ್ ಮೃತಪಟ್ಟಿದ್ದರು. ಈ ವೇಳೆ ಸಂಸ್ಥೆಯಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಆಗಿ ಪಿಕೆ ವಾರಿಯರ್ ಕೆಲಸ ಮಾಡುತ್ತಿದ್ದರು. 1954ರಲ್ಲಿ ಇವರು ಕೊಟ್ಟಕ್ಕಲ್ ಆಯುರ್ವೇದ ಶಾಲೆಯ ಟ್ರಸ್ಟಿಯಾಗಿ ನೇಮಕಗೊಂಡು ಸಂಸ್ಥೆಯನ್ನು ಮುನ್ನಡೆಸಿದ್ದರು.
ವಿಶೇಷ ಅಂದ್ರೆ ಪಿಕೆ ವಾರಿಯರ್ ಅವರ ದಿನಚರಿ. ನಿತ್ಯಕರ್ಮದ ಬಳಿಕ ಪಿಎಸ್ ವಾರಿಯರ್ ಸ್ಥಾಪಿಸಿದ್ದ ದೇವಸ್ಥಾನ ಹಾಗೂ ಪಿಎಸ್ ವಾರಿಯರ್ ಅವರ ಸಮಾಧಿಗೆ ನಮಿಸದ ಹೊರತು ಉಳಿದ ಕೆಲಸಗಳಿಗೆ ತೊಡಗುತ್ತಿರಲಿಲ್ಲ.
Discussion about this post