ಈಗಾಗಲೇ ಚೀನಾ ಸೃಷ್ಟಿಸಿದ ಕೊರೋನಾ ಸೋಂಕು ವಿಶ್ವವನ್ನು ತಲ್ಲಣಗೊಳಿಸಿದೆ. ಮತ್ತೊಂದು ಕಡೆ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ಕೂಡಾ ಆತಂಕಕ್ಕೆ ಕಾರಣವಾಗಿದೆ. ಈ ಎಲ್ಲದರ ನಡುವೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ( Democratic Republic of the Congo) ದಲ್ಲಿ ನಿಗೂಢ ರೋಗವೊಂದು ಕಾಣಿಸಿಕೊಂಡಿದ್ದು ಭೀತಿ ಹುಟ್ಟಿಸಿದೆ.
ಕಳೆದ ಆಗಸ್ಟ್ ತಿಂಗಳಿನಿಂದ ಈ ನಿಗೂಢ ರೋಗಕ್ಕೆ 165 ಮಕ್ಕಳು ಬಲಿಯಾಗಿದ್ದು, ಕಾಂಗೋದ ನೈರುತ್ಯ ಭಾಗದ ಗುಂಗು ( Gungu) ಪ್ರದೇಶದಲ್ಲೇ 5 ವರ್ಷದ ಒಳಗಿನ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ.
ರೋಗ ಸೋಂಕಿತ ಮಕ್ಕಳಲ್ಲಿ ಮಲೇರಿಯಾದ ಚಿಹ್ನೆಗಳಿವೆ ( Malaria symptims) ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ರಕ್ತ ಪರೀಕ್ಷೆಯಲ್ಲೂ ಮಲೇರಿಯಾ ಪಾಸಿಟಿವ್ ಎಂದು ಬಂದಿದೆ. ಆದರೆ ಮಕ್ಕಳಲ್ಲಿ ರಕ್ತ ಹೀನತೆ ಕಾಣಿಸಿಕೊಂಡಿರುವ ಕಾರಣ ಇದು ಮಲೇರಿಯಾ ಮಾತ್ರವಲ್ಲ ಅಂದಿದೆ.
ಈ ಬಗ್ಗೆ ಸ್ಥಳೀಯ ಆರೋಗ್ಯ ಇಲಾಖೆ ರೋಗದ ಮೂಲ ಪತ್ತೆಗೆ ನಿರ್ಧರಿಸಿದ್ದು, ಸಂಶೋಧನೆ ಮುಂದುವರಿದಿದೆ.
Discussion about this post