ದೆಹಲಿಯಲ್ಲಿ ಸಿಕ್ಕ ಹಣದ ಕುರಿತಂತೆ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ, ಇದೀಗ ಡಿಕೆಶಿ ಸಾಮಾಜ್ಯವನ್ನೇ ತನಿಖೆಗೆ ಒಳಪಡಿಸುವ ಲಕ್ಷಣ ಗೋಚರಿಸುತ್ತಿದೆ.
ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನನ್ನ ಕಕ್ಷಿದಾರರನ್ನು ಇಡಿ ಕಸ್ಟಡಿಗೆ ಕೊಡಬೇಡಿ ಎಂದು ಹಲವು ರೀತಿಯಲ್ಲಿ ಮನವಿ ಮಾಡಿದರೂ ಅದಕ್ಕೆ ಸೂಕ್ತ ಫಲಿತಾಂಶ ಸಿಕ್ಕಿಲ್ಲ. ಆರೋಗ್ಯದ ಕಾರಣವನ್ನೂ ಕೊಟ್ಟರೂ ಜಾಮೀನು ಪಡೆಯುವ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.
ಈ ನಡುವೆ 8.5 ಕೋಟಿ ಬಗ್ಗೆ ತನಿಖೆ ನಡೆಸುತ್ತಿದ್ದ ಇಡಿ, ಡಿಕೆಶಿ ಜನ್ಮ ಜಾಲಾಡಲು ಸಿದ್ದತೆ ನಡೆಸಿದಂತಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಿದೇಶಿ ಬ್ಯಾಂಕ್ ಖಾತೆಗಳ ವಿಷಯವನ್ನು ಇಡಿ ವಕೀಲರು ಪ್ರಸ್ತಾಪಿಸಿರುವುದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಜೊತೆಗೆ 800 ಕೋಟಿ ಬೇನಾಮಿ ಆಸ್ತಿಯನ್ನು ಡಿಕೆಶಿ ಹೊಂದಿದ್ದಾರೆ ಎಂದು ಇಡೀ ಪರ ವಕೀಲರು ಹೇಳಿದ್ದಾರೆ.
ಮಾತ್ರವಲ್ಲದೆ 370 ಕೋಟಿ ಹಣವನ್ನು ಆಪ್ತರ ಮೂಲಕ ವರ್ಗಾಯಿಸಿದ್ದಾರೆ ಅನ್ನುವ ವಾದವನ್ನು ಕೂಡಾ ಇಡಿ ವಕೀಲರು ಮಾಡಿದ್ದಾರೆ. 8.5 ಕೋಟಿ ಬಗ್ಗೆ ಆಸ್ತಿ ಬಗ್ಗೆ ದಾಖಲೆ ಇದೆ, ಆದರೆ ಉಳಿದ ವಿಷಯಗಳ ಕುರಿತಂತೆ ಇನ್ನೂ ದಾಖಲೆ ಸಂಗ್ರಹಿಸೋದು ಬಾಕಿ ಇದೆ. ಬ್ಯಾಂಕ್ ವಿವರಗಳನ್ನು ಪಡೆಯಬೇಕಾಗಿದೆ ಎಂದು ಕೋರ್ಟ್ ಗೆ ಮನವರಿಕೆ ಇಡಿ ವಕೀಲರು ಮನವರಿಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ‘ಈ ಪ್ರಕರಣ’ ಮೀರಿ ತನಿಖೆ ಮಾಡ್ತೀರಾ ಎಂದು ನ್ಯಾಯಾಧೀಶರು ಇಡಿ ವಕೀಲರನ್ನು ಪ್ರಶ್ನಿಸಿದಾಗ, ಹೌದು ನಾವು ಈ ಪ್ರಕರಣ ಮೀರಿ ತನಿಖೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಇದೊಂದು ದೊಡ್ಡ ಪ್ರಕರಣವಾಗಿದೆ.ಕೆಲವೊಮ್ಮೆ ಚಿಕ್ಕ ಉತ್ತರ ಕೊಡುತ್ತಾರೆ, ಮತ್ತೆ ಕೆಲವೊಮ್ಮೆ ಸುದೀರ್ಘ ಉತ್ತರ ಕೊಡುತ್ತಾರೆ.ಮತ್ತೆ ಹಲವು ಸಲ ನಿದ್ದೆಗೆ ಜಾರುತ್ತಾರೆ. ಹೀಗಾಗಿ ಕಾಲಮಿತಿಯಲ್ಲಿ ತನಿಖೆ ಕಷ್ಟ ಸಾಧ್ಯ ವಿಸ್ಕೃತ ತನಿಖೆಯ ಅಗತ್ಯವಿದೆ ಎಂದು ಇಡಿ ಪರ ವಕೀಲರು ಹೇಳಿರುವುದನ್ನು ನೋಡಿದರೆ, ಡಿಕೆ ಶಿವಕುಮಾರ್ ಅವರ ಎಲ್ಲಾ ಆದಾಯದ ಮೂಲಗಳಿಗೂ ಇಡಿ ಕೈ ಹಾಕುವುದು ಖಚಿತವಾಗಿದೆ.
ಹಾಗಂತ ಇಡಿಗೆ ತನಿಖೆಯ ಅಧಿಕಾರವಿದೆಯೇ, ಈಗಾಗಲೇ ಆದಾಯ ತೆರಿಗೆ ಇಲಾಖೆ ಈ ಸಂಬಂಧ ತನಿಖೆ ನಡೆಸುತ್ತಿರುವುದರಿಂದ ಮತ್ಯಾವ ದಿಕ್ಕಿನಲ್ಲಿ ಇಡಿ ತನಿಖೆ ಪ್ರಾರಂಭಿಸಲಿದೆ ಅನ್ನುವುದೇ ಕುತೂಹಲ.
Discussion about this post