ನವದೆಹಲಿ : ಕೊರೋನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾಡಿಕೊಂಡ ತಪ್ಪಿಗೆ ಕೋರ್ಟ್ ಗಳು ಹಿಗ್ಗಾಮುಗ್ಗಾ ಜಾಡಿಸುತ್ತಿದೆ. ಪಾಪ ಕೋರ್ಟ್ ಗಳ ಆದೇಶದಿಂದ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಸಮಸ್ಯೆ ಎದುರಿಸುತ್ತಿದೆ ಅಂದ್ರೆ ಕೇಂದ್ರ ಸಚಿವರೊಬ್ಬರು ನೇಣು ಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೇ1 ರಿಂದ ವಯಸ್ಕರೆಲ್ಲಾರಿಗೆ ಲಸಿಕೆ ಎಂದು ಘೋಷಿಸಿದ್ದು ನೇಣು ಹಾಕಿಕೊಳ್ಳಲು ಹೊರಟ ಸಚಿವರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ಅವರು ಪ್ರಧಾನಿಗಳು ಕೊಟ್ಟ ಭರವಸೆ ಹುಸಿಯಾದ ಕಾರಣದಿಂದಲೇ ಇವತ್ತು ನ್ಯಾಯಾಲಯಗಳು ಚಾಟಿ ಬೀಸುತ್ತಿದೆ.
ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಚಾಟಿ ಬೀಸಿರುವ ದೆಹಲಿ ಹೈಕೋರ್ಟ್ ಜನರಿಗೆ ಹಂಚಲು ನಿಮ್ಮ ಬಳಿ ಲಸಿಕೆಯೇ ಇಲ್ಲ, ಅಂದ ಮೇಲೆ ಲಸಿಕೆ ಪಡೆಯಿರಿ ಅನ್ನುವ ರಿಂಗ್ ಟೋನ್ ಯಾಕೆ ಎಂದು ಪ್ರಶ್ನಿಸಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್, ಸೋಂಕಿನಿಂದ ರಕ್ಷಿಸಲು ಜನರಿಗೆ ನೀಡಲು ನಿಮ್ಮಲ್ಲಿ ಲಸಿಕೆಗಳೇ ಇಲ್ಲ, ಅಂದ ಮೇಲೆ ಯಾರಿಗೆ ಕರೆ ಮಾಡಿದರೂ ಲಸಿಕೆ ಪಡೆಯಿರಿ ಅನ್ನುವ ಕಿರಿ ಕಿರಿ ರಿಂಗ್ ಟೋನ್ ಬೇಕಾ ಎಂದು ಪ್ರಶ್ನಿಸಿದೆ.
ಲಸಿಕೆಗಳೇ ಇಲ್ಲ ಅಂದ ಮೇಲೆ ಲಸಿಕೆ ಪಡೆಯಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಕೊರೋನಾದಿಂದ ಪಾರಾಗಲು ಲಸಿಕೆ ಅತೀ ಅವಶ್ಯಕ ಅನ್ನುವ ಸಂದೇಶ ಯಾಕೆ ಎಂದು ನ್ಯಾಯಾಲಯ ಕಿಡಿ ಕಾರಿದೆ. ಪಾಪ ಈ ಮಾತು ಕೇಳಿದ ಮೇಲೆ ಮತ್ಯಾವ ಸಚಿವರು ನೇಣು ಹಾಕಿಕೊಳ್ಳಬೇಕಾ ಎಂದು ಕೇಳದಿದ್ರೆ ಸಾಕು.
Discussion about this post