ಶವಗಾರದಲ್ಲಿ ವಿಕೃತಿ ಮೆರೆದು ಮೃತದೇಹಗಳ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವಿಕೃತ ಕಾಮಿಗೆ ಲಂಡನ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೀತ್ ಫೀಲ್ಡ್ ನಿವಾಸಿಯಾಗಿರುವ ಡೇವಿಡ್ ಫುಲ್ಲರ್ 1989 ರಲ್ಲಿ ಸಸೆಕ್ಸ್ ಆಸ್ಪತ್ರೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆಸ್ಪತ್ರೆಯ ಶವಾಗಾರಕ್ಕೆ ಬರುತ್ತಿದ್ದ ಹೆಣ್ಣುಮಕ್ಕಳ ಮೃತದೇಹಗಳ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.
ಇದಾದ ಬಳಿಕ ಮಹಿಳೆಯರನ್ನು ಕೊಲೆ ಮಾಡಿ ಅವರ ಮೃತದೇಹಗಳನ್ನು ತನ್ನ ಲೈಂಗಿಕ ತೃಷೆಗಾಗಿ ಬಳಸಲಾರಂಭಿಸಿದ. ಹೀಗೆ ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಇವನ ಮೇಲಿದೆ. ಇದಾದ ಬಳಿಕ ತನಿಖೆ ನಡೆಸಿದ ಪೊಲೀಸರು ಸೂಕ್ತ ಸಾಕ್ಷಿಗಳೊಂದಿಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆಯ ಬಳಿಕ ಇದೀಗ 67ರ ಹರೆಯದಲ್ಲಿರುವ ಡೇವಿಡ್ ಪುಲ್ಲರ್ ಗೆ ಶಿಕ್ಷೆ ಪ್ರಕಟಿಸಲಾಗಿದೆ. ಇಬ್ಬರು ಮಹಿಳೆಯರನ್ನು ಕೊಂದ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಇದೀಗ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
Discussion about this post