ಕುಂದಿರುವ ಪಕ್ಷದ ವರ್ಚಸ್ಸು ವೃದ್ಧಿ ಮತ್ತು ಮುನಿಸಿಕೊಂಡಿರುವ ಯುವ ಕಾರ್ಯಕರ್ತರ ಸಿಟಿ ರವಿ ( CT Ravi ) ಅನಿವಾರ್ಯವಂತೆ
ಬೆಂಗಳೂರು : ಮತ್ತೊಂದು ಅವಧಿಗೆ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲು ನಳಿನ್ ಕುಮಾರ್ ಕಟೀಲು ಪ್ರಯತ್ನಿಸುತ್ತಿರುವ ನಡುವೆ, ಹೈಕಮಾಂಡ್ ರಾಜ್ಯ ಬಿಜೆಪಿ ಮುಖ್ಯಸ್ಥನ ಹುದ್ದೆಗೆ ಹೊಸ ಮುಖ ತರಲು ಹುಡುಕಾಟ ಮುಂದುವರಿಸಿದೆ. ಜಾತಿ ಲೆಕ್ಕಾಚಾರ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಳೆದು ತೂಗಿ ಸಿಟಿ ರವಿಯವರನ್ನು ( CT Ravi) ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಗಳಿದೆ.
ಇದಕ್ಕೆ ಸಾಕ್ಷಿ ಅನ್ನುವಂತೆ ಉತ್ತರ ಪ್ರದೇಶದ ಸುನೀಲ್ ಬನ್ಸಲ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ರವಿಯವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವ ನಿಟ್ಟಿನಲ್ಲಿ ಈ ನೇಮಕ ನಡೆದಿದೆ ಅನ್ನಲಾಗಿದೆ. ಈಗಾಗಲೇ 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿದ್ದು, ಒಂದೇ ಒಂದು ನೇಮಕ ದಿಢೀರ್ ಎಂದು ನಡೆದಿರುವುದು ಅನುಮಾನ ಹುಟ್ಟಿಸಿದೆ.
ಇದನ್ನೂ ಓದಿ : Benefits of ghee : ನಿತ್ಯ ಒಂದು ಚಮಚ ದೇಶಿ ದನದ ತುಪ್ಪ ತಿಂದ್ರೆ ಲಾಭ ಸಾವಿರಾರು
ಹಾಲಿ ರಾಜ್ಯಾಧ್ಯಕ್ಷರ ಅವಧಿ ಇದೇ ತಿಂಗಳ 20ಕ್ಕೆ ಮುಕ್ತಾಯವಾಗಲಿದೆ. ಆದರೆ ನಳಿನ್ ಮಾತ್ರ ನನ್ನ ಅವಧಿ ಮುಗಿದಿದೆ ಅಂತಾ ಯಾರು ಹೇಳಿದ್ದು ಎಂದು ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ರಾಜ್ಯದಲ್ಲಿ ಬಿಜೆಪಿಯ ವರ್ಚಸ್ಸು ಕುಂದಿದ್ದು, ಆಡಳಿತ ವಿರೋಧಿ ಅಲೆಗಿಂತಲೂ ಹೆಚ್ಚಾಗಿ ಸ್ವಪಕ್ಷೀಯರ ವಿರೋಧಿ ಅಲೆ ಜೋರಾಗಿದೆ. ಅದರಲ್ಲೂ ಪ್ರವೀಣ್ ನೆಟ್ಟಾರು ಹತ್ಯೆ ಬಳಿಯ ನಮ್ಮದೇನಿದ್ದರೂ ಮೋದಿ ಬಿಜೆಪಿ, ಬೊಮ್ಮಾಯಿ ಬಿಜೆಪಿಯಲ್ಲ ಎಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಿಂದುತ್ವಕ್ಕಾಗಿ ದುಡಿಯುತ್ತೇವೆ, ರಾಜ್ಯ ಬಿಜೆಪಿ ಕೆಲಸ ಮಾಡೋದಿಲ್ಲ ಅನ್ನುವುದು ಇವರ ವಾದ.
ಹೀಗಾಗಿ ಪಕ್ಷದ ಮೇಲೆ ಬೇಸರಿಸಿಕೊಂಡಿರುವ ಯುವ ಕಾರ್ಯಕರ್ತರಲ್ಲಿ ಹೊಸ ಶಕ್ತಿ ತುಂಬುವ ನಿಟ್ಟಿನಲ್ಲಿ ಖಡಕ್ಕ್ ಹಿಂದುತ್ವವಾದಿಯೊಬ್ಬ ರಾಜ್ಯಾಧ್ಯಕ್ಷರಾಗೋದು ಅನಿವಾರ್ಯ. ಆದರೆ ಇದೇ ಖಡಕ್ಕ್ ವ್ಯಕ್ತಿ ರಾಜ್ಯಾಧ್ಯಕ್ಷರಾದ್ರೆ ಉಳಿದ ಮತ ಬ್ಯಾಂಕ್ ಗಳ ಕಥೆಯೇನು ಅನ್ನುವ ಆತಂಕವೂ ಇದೆ.
Discussion about this post