ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ T20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ಭಾರತ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ಎಡವಿದ್ದು, ಓಪನರ್ಸ್ ಕೈ ಕೊಟ್ಟ ಕಾರಣ ದೊಡ್ಡ ಮೊತ್ತದ ಗುರಿ ನೀಡುವಲ್ಲಿ ಭಾರತ ತಂಡ ಎಡವಿದೆ.
ಟಾಸ್ ಗೆದ್ದ ಪಾಕಿಸ್ತಾನ ಭಾರತಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಕೊಟ್ಟಿತ್ತು. ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಕಣಕ್ಕಿಳಿದರು. ಇಬ್ಬರ ಮೇಲೂ ಸಾಕಷ್ಟು ನಿರೀಕ್ಷೆಗಳಿತ್ತು. ಅದರಲ್ಲೂ ಕೆಎಲ್ ರಾಹುಲ್ ತಂಡಕ್ಕೆ ಗೆಲುವಿನ ಮೊತ್ತ ತಂದುಕೊಂಡುತ್ತಾರೆ ಅನ್ನಲಾಗಿತ್ತು. ಆದರೆ ಆರಂಭಿಕ ಆಟಗಾರರ ವಿಕೆಟ್ಗಳನ್ನು ಕಳೆದುಕೊಂಡ ಭಾರತ ತಂಡ ನಿರಾಶೆಯತ್ತ ಹೆಜ್ಜೆ ಹಾಕಿತು.
ಮೊದಲನೇ ಓವರ್ನಲ್ಲೇ ರೋಹಿತ್ ಶರ್ಮಾ ಶಾಹೀನ್ ಅಫ್ರಿದಿಗೆ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರೆ, ಕೆಎಲ್ ರಾಹುಲ್ ಮೂರನೇ ಓವರ್ನ ಮೊದಲ ಎಸೆತದಲ್ಲಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಅಡಿಪಾಯ ಹಾಕಿದರು ಆಧರೆ ಸೂರ್ಯಕುಮಾರ್ ಯಾದವ್ 11 ರನ್ ಗಳಿಸಿ ಪೆವೆಲಿಯನ್ ಕಡೆ ನಡೆದರು. ವಿರಾಟ್ ಕೊಹ್ಲಿ ಮಾತ್ರ ನಾಯಕನ ಸ್ಥಾನದಲ್ಲಿ ನಿಂತು ಉತ್ತಮ ಪ್ರದರ್ಶನ ತೋರಿದರು. ಇದೇ ವೇಳೆ ಬಂದ ರಿಷಭ್ ಪಂತ್ 39 ರನ್ ಗಳಿಸಿ ಪೆವೆಲಿಯನ್ ಕಡೆಗೆ ಹೊರಟರು.
ನಂತರ ರವೀಂದ್ರ ಜಡೇಜಾ 13, ಹಾರ್ದಿಕ್ ಪಾಂಡ್ಯ 11, ಭುವನೇಶ್ವರ್ ಕುಮಾರ್ 5 ರನ್ ಕಲೆ ಹಾಕಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ಗಳ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ. ಪಾಕಿಸ್ತಾನ ಭಾರತೀಯ ಆಟಗಾರರಿಗೆ ಸುಲಭವಾಗಿ ನೀರು ಕುಡಿಸುತ್ತಿದೆ.
Discussion about this post