ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಯ ತೀವ್ರತೆ ಹೆಚ್ಚಾಗಿರುವುದನ್ನು ಮನಗಂಡಿರುವ ಯುವಜನತೆ ಒಂದ್ಸಲ ಕೊರೋನಾ ಮುಕ್ತರಾದರೆ ಸಾಕು ಎಂದು ಮನಸ್ಸು ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಇಂದು ಕೊರೋನಾ ಲಸಿಕೆಗಾಗಿ ಮುಗಿ ಬಿದ್ದ ಪರಿ.
ಈಗಾಗಲೇ ಕೊರೋನಾ ವಾರಿಯರ್ಸ್, 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ ದುರಾದೃಷ್ಟ ಅಂದ್ರೆ ನಿರೀಕ್ಷಿತ ಮಟ್ಟದಲ್ಲಿ ಜನ ಲಸಿಕೆ ಪಡೆಯುತ್ತಿಲ್ಲ. ಲಸಿಕೆ ಕುರಿತಂತೆ ಹರಡಿರುವ ಸುಳ್ಳು ಸುದ್ದಿಗಳು, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹುಟ್ಟಿಕೊಂಡ ಕಥೆಗಳ ಕಾರಣದಿಂದ ಜನ ಲಸಿಕೆ ಅಂದ್ರೆ ಭಯಪಡುತ್ತಿದ್ದಾರೆ. ಆದರೆ ಯಾವಾಗ ಕೊರೋನಾ ಸೋಂಕಿನ ಎರಡನೆ ಅಲೆ ತೀವ್ರವಾಯ್ತೋ, ಕೊರೋನಾ ಲಸಿಕೆ ಪಡೆದ ಬಹುತೇಕರಿಗೆ ಸೋಂಕು ಬಂದಿಲ್ಲ ಅನ್ನುವುದು ಗೊತ್ತಾಯ್ತ, ಜನ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಏಕಾಏಕಿ ಬೇಡಿಕೆ ಹೆಚ್ಚಾದ ಕಾರಣ ಹಲವು ಕಡೆಗಳಲ್ಲಿ ಲಸಿಕೆ ಕೊರತೆಯೂ ಕಾಣಿಸಿಕೊಂಡಿದೆ.
ಈ ನಡುವೆ 18 ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಮೇ 1 ರಿಂದ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ. ಅದಕ್ಕಾಗಿ ಇಂದಿನಿಂದ ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಪ್ರಕ್ರಿಯೆ ಕೂಡಾ ಪ್ರಾರಂಭವಾಗಿದೆ. ಸಂಜೆ 4 ಗಂಟೆಗೆ ರಿಜಿಸ್ಟ್ರೇಷನ್ ಪ್ರಾರಂಭಗೊಳ್ಳುತ್ತಿದ್ದಂತೆ ಜನ ಮುಗಿ ಬಿದಿದ್ದಾರೆ.
ಈ ವೇಳೆ ಒತ್ತಡ ತಡೆಗೊಳ್ಳಲು ಸಾಧ್ಯವಾಗದ ಸರ್ವರ್ ಕೆಲಸವನ್ನು ಸ್ಥಗಿತಗೊಳಿಸಿದೆ. ಈ ವೇಳೆ ಜನ ಹಿಡಿ ಶಾಪ ಹಾಕಿದ್ದು ಸುಳ್ಳಲ್ಲ. ಬಳಿಕ ಸರ್ವರ್ ಸರಿಪಡಿಸಲಾಯ್ತು, ಆದರೆ ಹಲವು ಕಡೆಗಳಲ್ಲಿ ಇನ್ನೂ COWIN ವೆಬ್ ಸೈಟ್ ಮತ್ತು APP ಸರಿಯಾಗಿ ಕೆಲಸ ಮಾಡುತ್ತಿಲ್ಲ.
Discussion about this post