ನವದೆಹಲಿ : ಕೊರೋನಾ ಸೋಂಕಿನ ಮೂರನೇ ಅಲೆಯ ಭೀತಿ ದೇಶಕ್ಕೆ ಆವರಿಸಿಕೊಂಡಿದೆ. ಈ ನಡುವೆ ಮಕ್ಕಳಿಗೆ ಕೊರೋನಾ ಲಸಿಕೆ ಇಲ್ಲದಿರುವ ಕಾರಣ, ಮೂರನೇ ಆಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಮಕ್ಕಳಿಗೆ ನೀಡುವ ಲಸಿಕೆ ಕುರಿತಂತೆ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು, ಡಿಸೆಂಬರ್ ಹೊತ್ತಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಮಕ್ಕಳ ಲಸಿಕೆ ಮಾರುಕಟ್ಟೆಗೆ ಬರೋ ಸಾಧ್ಯತೆಗಳಿದೆ.
ಈ ಬಗ್ಗೆ ಮಾಹಿತಿ ಕೊಟ್ಟರುವ ಈ ಬಗ್ಗೆ ಏಮ್ಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಈಗಾಗಲೇ ಪ್ರಯೋಗಿಸಿದ್ದು ಸೆಪ್ಟೆಂಬರ್ ವೇಳೆಗೆ ಸಾಧಕ ಬಾಧಕ ಗೊತ್ತಾಗಲಿದೆ ಅಂದಿದ್ದಾರೆ. ದೆಹಲಿಯ ಏಮ್ಸ್ ನಲ್ಲಿ 6-12 ವರ್ಷದ ಮಕ್ಕಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು ಸಪ್ಟಂಬರ್ ಹೊತ್ತಿಗೆ ರಿಪೋರ್ಟ್ ಸಿಗಲಿದೆ. ಮುಂದಿನ ವಾರ
ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು ಫಲಿತಾಂಶ ಸಕಾರಾತ್ಮಕವಾಗಿ ಬಂದರೆ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆಯಿದೆ ಎಂದಿರುವ ಅವರು ಲಸಿಕೆ ನೀಡಿದ ಬಳಿಕ ಶಾಲೆಗಳನ್ನು ಪ್ರಾರಂಭಿಸಬಹುದು ಅಂದಿದ್ದಾರೆ.
ಇನ್ನು ಝೈಡಸ್ ಕ್ಯಾಡಿಲಾ ಕೊರೋನಾ ವೈರಸ್ ಸೋಲಿಸುವ ಮಕ್ಕಳ ಲಸಿಕೆ ತಯಾರಿಸಿದ್ದು ತುರ್ತು ಬಳಕೆಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಪರಿಶೀಲನೆಯಲ್ಲಿದೆ. ಪ್ರಸ್ತುತ ಕೋವ್ಯಾಕ್ಸಿನ್ 6 ರಿಂದರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸುತ್ತಿದ್ದು, ಮುಂದಿನ ವಾರ 2 ರಿಂದ 6 ವರ್ಷದ ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗುತ್ತದೆ. ಬಳಿಕ 12ರಿಂದ 18 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಯಲಿದೆ.
Discussion about this post