ನವದೆಹಲಿ : ಪ್ರಧಾನಿಯಾಗಿ ನರೇಂದ್ರ ಮೋದಿ ಸಾಕಷ್ಟು ವಿಶ್ವ ಪ್ರವಾಸ ಕೈಗೊಂಡಿದ್ದರು. ನರೇಂದ್ರ ಮೋದಿ ಭೇಟಿ ನೀಡದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇನ್ನು ಕೆಲವೇ ಹೆಸರುಗಳಿವೆ.
ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸುವ ಹಾಗೂ ಭಾರತದೊಂದಿಗೆ ಉತ್ತಮ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ಮೋದಿಯವರು ವಿಶ್ವಪ್ರವಾಸವನ್ನು ಬಳಸಿಕೊಂಡಿದ್ದರು. ಜೊತೆಗೆ ಸಾಂಪ್ರದಾಯಿಕ ಶತ್ರು ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನವನ್ನು ಸೈಲೆಂಟ್ ಆಗಿಸೋದು ಕೂಡಾ ಈ ಪ್ರವಾಸದ ಹಿಂದಿನ ರಹಸ್ಯವಾಗಿತ್ತು. ಮಾತ್ರವಲ್ಲದೆ ವಿಷ್ವದ ದೊಡ್ಡಣ್ಣನೆಂದು ಬೀಗುತ್ತಿದ್ದ ಅಮೆರಿಕಾದ ಮುಂದೆ ಭಾರತವನ್ನೂ ವಿಶ್ವ ಗುರುವಾಗುವ ಉದ್ದೇಶ ಈ ಪ್ರವಾಸಕ್ಕಿತ್ತು.
ಈ ನಡುವೆ ಅಬ್ಬರಿಸುತ್ತಿರುವ ಕೊರೋನಾ ಸೋಲಿಸಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ವಿಶ್ವದ ಅನೇಕ ರಾಷ್ಟ್ರಗಳು ಕೈಜೋಡಿಸಿದೆ. ಭಾರತದ ಪರಿಸ್ಥಿತಿಗೆ ಮರುಗಿರುವ ರಾಷ್ಟ್ರಗಳು ದೊಡ್ಡ ಮಟ್ಟದಲ್ಲಿ ಸಹಾಯ ಹಸ್ತ ಚಾಚಿದೆ. ಬ್ರಿಟನ್, ಅಮೆರಿಕಾ, ಸೌದಿ ಅರೇಬಿಯಾ ಹಾಗೂ ದುಬೈ ಸೇರಿ ಹಲವು ರಾಷ್ಟ್ರಗಳು ನೆರವಿನ ಮಹಾಪೂರವನ್ನೇ ಹರಿಸಿದೆ.
ಸೌದಿ ಅರೇಬಿಯಾ 8- ಮೆಟ್ರಿಕ್ ಟನ್ ದ್ರವರೂಪದ ಆಮ್ಲಜನಕ ಒದಗಿಸುವುದಾಗಿ ಹೇಳಿದೆ.ಆಸ್ಟ್ರೇಲಿಯಾ 500 ವೆಂಟಿಲೇಟರ್, 10 ಲಕ್ಷ ಸರ್ಜಿಕಲ್ ಮಾಸ್ಕ್, 5 ಲಕ್ಷ ಪಿಪಿಪಿ ಕಿಟ್, ಅಷ್ಟೇ ಪ್ರಮಾಣದಲ್ಲಿ ಎನ್ 95 ಮಾಸ್ಕ್, 1 ಲಕ್ಷ ಕನ್ನಡಕ, 20 ಸಾವಿರ ಫೇಸ್ ಶೀಲ್ಡ್ ಹಾಗೂ 1 ಲಕ್ಷ ಗ್ಲೌಸ್ ಗಳನ್ನು ಕಳುಹಿಸಿಕೊಟ್ಟಿದೆ. ಸಿಂಗಾಪುರ 500 ಬಿಐಪಿಎಪಿ ವ್ಯವಸ್ಥೆ, 250 ಆಮ್ಲಜನಕ ಸಾಧನ, 4 ಕ್ರಯೋಜನಿಕ್ ಕಂಟೇನರ್ ಗಳನ್ನು ನೀಡಿದೆ.
ಜರ್ಮನಿಯಿಂದ ಸಂಚಾರಿ ಆಮ್ಲಜನಕ ಉತ್ಪಾದನಾ ಘಟಕ, 120 ವೆಂಟಿಲೇಟರ್, 8 ಕೋಟಿ N95 ಮಾಸ್ಕ್ ಗಳು ಬರಲಿದ್ದು, ಐರೆಂಡ್ಲ್ ನಿಂದ 700 ಆಮ್ಲಜನಕದ ಸಾಧನ, ಫ್ರಾನ್ಸ್ ನಿಂದ ಆಮ್ಲಜನಕ ಉತ್ಪಾದಿಸುವ 8 ದೊಡ್ಡ ಘಟಕ, 28 ಉಸಿರಾಟದ ಉತ್ಪಾದನೆಗಳು 200 ಎಲೆಕ್ಟ್ರಿಕ್ ಸಿರಂಜ್ ಪಂಪ್, ಬ್ರಿಟನ್ ನಿಂದ 495 ಆಮ್ಲಜನಕ ಸಾಧನ, 120 ವೆಂಟಿಲೇಟರ್,20 ಮ್ಯಾನುವೆಲ್ ವೆಂಟಿಲೇಟರ್ ಗಳನ್ನು ಕೊಡುವ ಮೂಲಕ ಭಾರತದ ಕೊರೋನಾ ಹೋರಾಟಕ್ಕೆ ಕೈ ಜೋಡಿಸಿದೆ.
Discussion about this post