ಹೈದರಬಾದ್ : ಭಾರತದಲ್ಲಿ ಮೇ 1 ರಿಂದ ಮೂರನೇ ಲಸಿಕೆ ವಿತರಣೆ ಕಾರ್ಯ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂಡಿಯಾ ಟುಡೇ ವರದಿಯ ಪ್ರಕಾರ, ಮೇ 1 ರಿಂದ ರಷ್ಯಾ ಲಸಿಕೆಯ ವಿತರಣೆ ಕಾರ್ಯ ಪ್ರಾರಂಭವಾಗೋದು ಅನುಮಾನ ಎನ್ನಲಾಗಿದೆ.
ಸ್ಪುಟ್ನಿಕ್ 5 ಲಸಿಕೆಯ ಕ್ಲಿನಿಕಲ್ ಟ್ರಯಲ್ ದಾಖಲೆಗಳನ್ನು ಕಂಪನಿ ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿಲ್ಲ. ಕ್ಲಿನಿಕಲ್ ಟ್ರಯಲ್ ನ ದಾಖಲೆಗಳ ಪರಿಶೀಲನೆಯಾಗದ ಹೊರತು ಲಸಿಕೆ ವಿತರಣೆ ಸಾಧ್ಯವಿಲ್ಲ. ಜೊತೆಗೆ ರಷ್ಯಾದಿಂದ ಲಸಿಕೆ ಭಾರತಕ್ಕೋ ಬರೋದೆ ಮೇ 1ರಂದು, ಹೀಗಾಗಿ ಮೇ 1 ರಿಂದ ಈ ಲಸಿಕೆಗಳು ದೊರೆಯುವುದಿಲ್ಲ ಅನ್ನಲಾಗಿದೆ. ಈ ಲಸಿಕೆಯನ್ನು ಎಮರ್ಜೆನ್ಸಿ ಬಳಕೆ ನೀಡಬಹುದು ಎಂದು ಎಪ್ರಿಲ್ 13 ಭಾರತ ಸರ್ಕಾರ ಹೇಳಿತ್ತು.
ರಷ್ಯಾದಲ್ಲಿ ಸಂಶೋಧಿಸಲ್ಪಟ್ಟಿರುವ ಈ ಲಸಿಕೆ 97.6 % ದಷ್ಟು ಪ್ರಭಾವಶಾಲಿಯಾಗಿದ್ದು, ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಪ್ರಬಲ ಲಸಿಕೆ ಅನ್ನಿಸಿಕೊಂಡಿದೆ. ಗಮನಾರ್ಹ ಅಂಶ ಅಂದ್ರೆ ಕೋವಿಶೀಲ್ಡಿ ಕೋವ್ಯಾಕ್ಸಿನ್ ರೀತಿಯಲ್ಲೇ ಎರಡು ಡೋಸ್ ಗಳ ಲಸಿಕೆ ಇದಾಗಿದೆ. ಆದರೆ ಎರಡು ಡೋಸ್ ಗಳು ಒಂದಕ್ಕಿಂತ ಒಂದು ಬೇರೆಯಾಗಿದೆ. ಎರಡು ಡೋಸ್ ಗಳು ಪ್ರತ್ಯೇಕ ಗುಣ ಲಕ್ಷಣಗಳನ್ನು ಹೊಂದಿರುವುದರಿಂದಲೇ ಇದು ಪ್ರಭಾವಶಾಲಿ ಲಸಿಕೆ ಎಂದು ಕರೆಸಿಕೊಂಡಿದೆ.
ಇದನ್ನೂ ಓದಿ : ಭಾರತಕ್ಕೆ ಕಾಲಿಟ್ಟ ರಷ್ಯಾ ಮದ್ದು – ಚೀನಾ ವೈರಸ್ ಅನ್ನು ಸೋಲಿಸಲು ಬಂತು ಮೂರನೇ ಲಸಿಕೆ
ಈ ಲಸಿಕೆಯ ಮೊದಲ ಡೋಸ್ ನ ಬಾಟಲಿಗಳನ್ನು 2 ರಿಂದ 8 ಸೆಲ್ಸಿಯಸ್ ತಾಪಮಾನದಲ್ಲಿ ಕಾಪಾಡಿಕೊಳ್ಳಬೇಕಾಗುತ್ತದೆ. ಎರಡನೇ ಡೋಸ್ ನ ಬಾಟಲಿಗಳನ್ನು ಸಾಮಾನ್ಯ ಫ್ರಿಡ್ಜ್ ನಲ್ಲಿ ಇರಿಸಿಕೊಳ್ಳಬಹುದಾಗಿದೆ.
ಭಾರತದಲ್ಲಿ ಸ್ಪುಟ್ನಿಕ್ 5 ಲಸಿಕೆ ಪ್ರಯೋಗ ಹಾಗೂ ವಿತರಣೆ ಹೊಣೆಯನ್ನು ಹೈದರಬಾದ್ ಮೂಲದ ಡಾ.ರೆಡ್ಡಿಸ್ ಜೌಷಧಿ ತಯಾರಿಕಾ ಕಂಪನಿ ಹೊತ್ತು ಕೊಂಡಿದೆ. ಈಗಾಗಲೇ ಭಾರತದಲ್ಲೂ ಲಸಿಕೆಯ ಪ್ರಯೋಗಗಳು ನಡೆದಿದೆ. ಮೂರನೇ ಹಂತದ ಟ್ರಯಲ್ ಮುಕ್ತಾಯಗೊಂಡಿರುವ ಹಿನ್ನಲೆಯಲ್ಲಿ ಮೇ 1 ರಿಂದ ಲಸಿಕೆ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಸಂಬಂಧ 10 ಕೋಟಿ ಲಸಿಕೆಗಳು ರಷ್ಯಾದಿಂದ ನೇರವಾಗಿ ರೆಡ್ಡೀಸ್ ಲ್ಯಾಬೋರೆಟರಿಗೆ ಬಂದಿಳಿಯಲಿದೆ. ಮುಂದಿನ ದಿನಗಳಲ್ಲಿ ರೆಡ್ಡೀಸ್ ಸೇರಿದಂತೆ ಭಾರತದ ವಿವಿಧ ಮೆಡಿಸಿನ್ ಉತ್ಪಾದನಾ ಸಂಸ್ಥೆಗಳು ಸ್ಪುಟ್ನಿಕ್ 5 ಅನ್ನು ಭಾರತದಲ್ಲೇ ಉತ್ಪಾದಿಸಲಿದೆ.
Discussion about this post