ವುಹಾನ್ ವೈರಸ್ ವಿರುದ್ಧ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಸಂಶೋಧಿಸಿದ್ದ Janssen ಲಸಿಕೆ ಭಾರತಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಸಂಬಂಧ ಲಸಿಕೆಯ ಪ್ರಯೋಗಕ್ಕೆ ಅನುಮೋದನೆ ಕೋರಿ ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಭಾರತೀಯ ಔಷಧ ನಿಯಂತ್ರಕ ಮಂಡಳಿ ಮುಂದೆ ಅರ್ಜಿಯನ್ನು ಕೂಡಾ ಸಲ್ಲಿಸಿತ್ತು. ಆದರೆ ಇದೀಗ Janssen ಲಸಿಕೆ ಶೀಘ್ರದಲ್ಲಿ ಭಾರತಕ್ಕೆ ಬರೋದಿಲ್ಲ ಎಂದು ಗೊತ್ತಾಗಿದೆ.
ಜಾನ್ಸನ್ ಅಂಡ್ ಜಾನ್ಸನ್ DCGI ಮುಂದೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಂಡಿದೆ. ಹೀಗಾಗಿ ಭಾರತದಲ್ಲಿ Janssen ಲಸಿಕೆಯ ಪ್ರಯೋಗ ನಡೆಯುವುದಿಲ್ಲ. ಮೂಲಗಳ ಪ್ರಕಾರ ಈ ಲಸಿಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿಸಲ್ಪಟ್ಟಿರುವುದರಿಂದ ಭಾರತದಲ್ಲಿ ಪ್ರಯೋಗದ ಅಗತ್ಯವಿಲ್ಲ ಎನ್ನಲಾಗಿದೆ. ಆದರೆ ಭಾರತ ವ್ಯಕ್ತಪಡಿಸುವ ಎಲ್ಲಾ ಸಂಶಯಗಳನ್ನು ನಿವಾರಿಸಿದ ಬಳಿಕವೇ ತುರ್ತು ಬಳಕೆಗೆ ಅನುಮತಿ ದೊರೆಯುತ್ತದೆ.
ಏಪ್ರಿಲ್ನಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಅರ್ಜಿ ಸಲ್ಲಿಸಿದ್ದಾಗ ಅಮೆರಿಕದಲ್ಲಿ ಈ ಲಸಿಕೆ ಪ್ರಯೋಗ ನಡೆಯುತ್ತಿತ್ತು. ಆಗ ಈ ಲಸಿಕೆ ಪಡೆದುಕೊಂಡ ಕೆಲವರ ಪೈಕಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕಂಡುಬಂದಿತ್ತು. ಜೊತೆಗೆ ಈ ಲಸಿಕೆ ಪಡೆದವರಿಗೆ ಅಪರೂಪದ ನರಮಂಡಲದ ಸಮಸ್ಯೆ ಕಾಣಿಸಿಕೊಳ್ಳಬಹುದು, ಇದರಿಂದಾಗಿ ಪಾರ್ಶ್ವವಾಯು ಸಂಭವಿಸಬಹುದು ಎಂದು ಎಫ್ಡಿಎ ಎಚ್ಚರಿಕೆ ನೀಡಿತ್ತು.
ಹೀಗೆ ಲಸಿಕೆಯ ಸುರಕ್ಷತೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸಂಸ್ಥೆ ಅರ್ಜಿ ಹಿಂದಕ್ಕೆ ಪಡೆದುಕೊಂಡಿದೆ. ಆದರೆ ಭಾರತಕ್ಕೆ ಲಸಿಕೆ ಪೂರೈಸುವ ನಿಟ್ಟಿನಲ್ಲಿ ಲಸಿಕೆ ಗುಣಮಟ್ಟವನ್ನು ಅಭಿವೃದ್ಧಿ ಪಡಿಸುವುದಾಗಿ ಸಂಸ್ಥೆ ಹೇಳಿದೆ.
Discussion about this post