ಹಬ್ಬ ಹರಿದಿನಗಳು ಸಾಲು ಸಾಲಾಗಿ ಬರತೊಡಗಿದೆ. ಈ ನಡುವೆ ಕೊರೋನಾ (Corona) ಬಗ್ಗೆ ಆತಂಕ ಶುರುವಾಗಿದೆ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಆತಂಕ ದೂರವಾಯ್ತು ಅನ್ನುವ ಹೊತ್ತಿಗೆ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಇದು ನಾಲ್ಕನೇ ಅಲೆಯೋ ಐದನೇ ಅಲೆಯೋ ಅನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
ಈ ನಡುವೆ ಗುರುವಾರ ಒಂದಿಷ್ಟು ಕಡಿಮೆಯಾಯ್ತು ಅಂದುಕೊಂಡಿದ್ದ ಕೊರೋನಾ ಶುಕ್ರವಾರ ಏರಿಕೆಯಾಗಿದೆ. ಗುರುವಾರ ರಾಜ್ಯದಲ್ಲಿ 1,691 ಇದ್ದ ಸೋಂಕಿನ ಪ್ರಕರಣ ಶುಕ್ರವಾರ 2,032ಕ್ಕೆ ಏರಿಕೆಯಾಗಿದೆ. ಶನಿವಾರ ಇದು 1,329ಕ್ಕೆ ಇಳಿದಿದೆ. ಈ ನಡುವೆ ಶನಿವಾರ 5 ಮಂದಿ ಮೃತಪಟ್ಟಿದ್ದು, ಕಳೆದ ಮೂರು ದಿನಗಳಲ್ಲಿ 16 ಜೀವಗಳು ಸೋಂಕಿಗೆ ಬಲಿಯಾಗಿದೆ.
ಇದನ್ನು ಓದಿ : bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

ಇನ್ನು ಶನಿವಾರ 1,614 ಮಂದಿ ಕೊರೋನಾ ಗುಣಮುಖರಾಗಿದ್ದಾರೆ. ಪ್ರಸ್ತುತ 10,105 ಸಕ್ರಿಯ ಪ್ರಕರಣಗಳಿದೆ.

Discussion about this post