ಬಿಗ್ ಬಾಸ್ ಮನೆಗೆ ಬಂದ ಪ್ರತಿಯೊಬ್ಬರಿಗೂ ಮನೆಯವರ ಭಯವಿದೆ. ಮನವೆಂಬ ಮರ್ಕಟ ಕೇಳಬೇಕಲ್ವ ( bigg boss roopesh Shetty)
ಬಿಗ್ ಬಾಸ್ ಅನ್ನುವ ಮನೆಯೇ ಹಾಗೇ ಹೊರಗಡೆಯಿಂದ ನೋಡುವುದಕ್ಕೆ ತುಂಬಾ ಚೆಂದ. ಒಳಗೆ ಹೋದ ಮೇಲೆ ಮಾತಿಗೆ ಫಿಲ್ಟರ್ ಇರೋದಿಲ್ಲ. ನಿಜ ಜೀವನದ ಅದ್ಯಾವ ರಹಸ್ಯವನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಬಾರದೆಂದು ಬಿಗ್ ಬಾಸ್ ಸ್ಪರ್ಧಿಗಳು ಅಂದುಕೊಂಡಿರುತ್ತಾರೆ. ಆದರೆ ಮನೆಗೆ ಹೋದ ಒಂದೆರೆಡು ದಿನದಲ್ಲಿ ಅದ್ಯಾವುದು ಕೂಡಾ ರಹಸ್ಯವಾಗಿ ಉಳಿದಿರೋದಿಲ್ಲ. ಯಾವುದನ್ನು ಹೇಳಬಾರದು ಅಂದುಕೊಂಡಿರುತ್ತಾರೋ ಅದನ್ನೇ ಇಡೀ ನಾಡಿಗೆ ಟಾಂ ಟಾಂ ಅಂದಿರುತ್ತಾರೆ. ಅದು ಬಿಗ್ ಬಾಸ್ ಮನೆಯ ತಾಕತ್ತು. ( bigg boss roopesh Shetty)
ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಮಂದಿ ಗೆಳೆಯರಾಗುತ್ತಾರೆ. ಅದಕ್ಕೆ ಕಾರಣ ಕಾಡುವ ಒಂಟಿತನ. ಫೋನ್, ಟಿವಿ, ಪುಸ್ತಕ ವಾಚ್ ಯಾವುದೂ ಇರೋದಿಲ್ಲ. ಹೀಗಾಗಿ ನೋಲು ನಲಿವು ಕೇಳುವ ಮನಸ್ಸು ಬೇಕು ಅನ್ನಿಸುತ್ತದೆ.ಈ ಕಾರಣದಿಂದಲೇ ಯಾರಾದರೊಬ್ಬರ ಜೊತೆಗೆ ಕನೆಕ್ಟ್ ಆಗುತ್ತಾರೆ. ಹೀಗೆ ಕನೆಕ್ಟ್ ಆದವರು ಮುಂದೆ ಪ್ರೀತಿಯಲ್ಲಿ ಬಿದ್ದರೂ ಬೀಳಬಹುದು. ತಪ್ಪಿದ್ರೆ ಬಿಗ್ ಬಾಸ್ ಮುಗಿದ ಮೇಲೆ ನೀನೊಂದು ದಾರಿ ನಾನೊಂದು ದಾರಿ ಅಂತಾ ಪಯಣ ಮುಂದುವರಿಯುತ್ತದೆ.
ಇದನ್ನೂ ಓದಿ : mangala gowri maduve ಗೆ ಮಂಗಳ ರಾಮ್ ಜೀ ಹೇಳಿದ್ದೇನು…
ಹೀಗೆ ಪ್ರೀತಿಯಲ್ಲಿ ಬೀಳುವ ನಿರೀಕ್ಷೆಯಲ್ಲಿರುವ ಜೋಡಿ ಅಂದ್ರೆ ಅದು ಸಾನ್ಯಾ ಮತ್ತು ರೂಪೇಶ್ ಶೆಟ್ಟಿ. ಇಡೀ ಮನೆಗೆ ಇವರಿಬ್ಬರ ಮೇಲೆ ಅನುಮಾನವಿದೆ. ವೀಕ್ಷಕರಿಗೂ ಇವರ ನಡೆ ನುಡಿ ಸಂಶಯ ಹುಟ್ಟಿಸಿದೆ. ಏನಿಲ್ಲ ಏನಿಲ್ಲ ಎಂದು ಕುಚ್ ಕುಚ್ ನಡೆಯುತ್ತಿದೆಯೇ ಅನ್ನುವ ಅನುಮಾನವೆದ್ದಿದೆ. ಸಾನ್ಯಾ ಮೇಲೆ ರೂಪೇಶ್ ತೋರಿಸುತ್ತಿರುವ ಅಕ್ಕರೆ ನೋಡಿದರೆ ಹಾಗೇ ಇದೆ.
ಇದಕ್ಕೆ ಪೂರಕ ಅನ್ನುವಂತೆ ಜಯಶ್ರೀ ಆರಾಧ್ಯ ಉರಿವ ಬೆಂಕಿಗೆ ತುಪ್ಪ ಸುರಿದಿದ್ದಾರೆ.ಮಧ್ಯರಾತ್ರಿ ಕಿಚನ್ ಏರಿಯಾದಲ್ಲಿ ಆರ್ಯವರ್ಧನ್ ಹಾಗೂ ಜಯಶ್ರೀ ಮಾತನಾಡುತ್ತಿರುತ್ತಾರೆ. ಈ ವೇಳೆ ರೂಪೇಶ್ ಬಿಸಿ ನೀರು ಹಿಡಿದುಕೊಂಡು ಹೋಗುತ್ತಿರುತ್ತಾರೆ.ಕಾಲೆಳೆದ ಆರ್ಯವರ್ಧನ್ ಯಾರಿಗಿದು ಮೂರು ಕಪ್ ಅಂತಾರೆ. ಅದಕ್ಕೆ ಜಯಶ್ರೀಯವರೇ ಇನ್ಯಾರಿಗೆ ಸಾನ್ಯಾಗೆ ಅಂತಾರೆ.
ಸಿಕ್ಕಿದ್ದೇ ಛಾನ್ಸು ಅಂತಾ ಕಾಲೆಳೆದ ಜಯಶ್ರೀ ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ ಅಂತಾರೆ. ಮೊದಲು ನೀನು ಕನೆಕ್ಟ್ ಆಗು, ಕನೆಕ್ಟ್ ಆದರೆ ನೆಕ್ಟ್ ಸ್ಟೆಪ್ ಅಂತಾ ಸಲಹೆ ಬೇರೆ ಕೊಡ್ತಾರೆ. ಇದಕ್ಕೆ ಪ್ರತಿಯಾಗಿ ನಿಮಗೆ ಬಾಯ್ ಫ್ರೆಂಡ್ ಇದ್ದಾರೆಯೇ ಅಂತಾ ರೂಪೇಶ್ ಪ್ರಶ್ನಿಸುತ್ತಾರೆ. ಈ ವೇಳೆ ಜಯಶ್ರೀ ತಮ್ಮ ಲವ್ ಸ್ಟೋರಿ ಹೇಳ್ತಾರೆ.
ಕೊನೆಗೆ ನಾವು ಬರೀ ಫ್ರೆಂಡ್ಸ್ ಬೇರೆ ಏನೂ ಇಲ್ಲ ನಮ್ಮ ನಡುವೆ ಅಂತಾರೆ ರೂಪೇಶ್. ಆದರೆ ಜಯಶ್ರೀ ಅದಕ್ಕೆ ಬಗೋದಿಲ್ಲ. ಸೀನ್ ಬದಲಾದ್ರೆ ಜಯಶ್ರೀ ಸಾನ್ಯ ರೂಪೇಶ್ ಸೇರಿದಂತೆ ಕೆಲ ಸ್ಪರ್ಧಿಗಳು ಮಾತನಾಡುತ್ತಿರುತ್ತಾರೆ. ಆಗ್ಲೂ ಜಯಶ್ರೀಯವರು ರೂಪೇಶ್ ಮತ್ತು ಸಾನ್ಯಾ ಸಂಬಂಧ ಬೆಳೆಸುವ ಪ್ರಯತ್ನ ಮುಂದುವರಿಸುತ್ತಾರೆ.
ಇದಾದ ಬಳಿಕ ಸಾನ್ಯಾ ಹಾಗೂ ರೂಪೇಶ್ ಬೆಡ್ ರೂಮ್ ನಲ್ಲಿ ಪಿಸು ಪಿಸು ಮಾತನಾಡುತ್ತಿರುತ್ತಾರೆ. ಎಲ್ಲಿ ಮಾತು ಕೇಳುತ್ತದೋ ಎಂದು ಕೈ, ಕಣ್ಣು ಭಾಷೆಗಳಲ್ಲಿ ಮಾತನಾಡುತ್ತಿರುತ್ತಾರೆ. ಬಿಗ್ ಬಾಸ್ ಕಿವಿಗೆ ಸೀಸ ಸುರಿದ ಸಾನ್ಯಾ, ಬಿಗ್ ಬಾಸ್ ಅನ್ನೇ ಬಕ್ರ ಮಾಡಲು ಟೈ ಮಾಡ್ತಾರೆ.
ಈ ವೇಳೆ ಮೈಕ್ ಅನ್ನು ಸರಿಯಾಗಿ ಧರಿಸಿಕೊಳ್ಳಿ ಅನ್ನುವ ಆದೇಶ ಬಿಗ್ ಬಾಸ್ ಕಡೆಯಿಂದ ಬರುತ್ತದೆ.
ಹಾಗಾದ್ರೆ ರೂಪೇಶ್ ಶೆಟ್ಟಿ ಪ್ರೀತಿಯಲ್ಲಿ ಬೀಳುತ್ತಾರೆಯೇ, ಖಂಡಿತಾ ಅಸಾಧ್ಯವಂತೆ. ರೂಪೇಶ್ ಫ್ಯಾಮಿಲಿ ಸಿಕ್ಕಾಪಟ್ಟೆ ಸ್ಟ್ರಿಕ್. ಅದರಲ್ಲೂ ಮನೆಯವರು ಹಾಕಿದ ಒಂದು ಗೆರೆ ದಾಟುವವರಲ್ಲ ರೂಪೇಶ್. ಬಿಗ್ ಬಾಸ್ ಮನೆಗೆ ಬರುವಾಗಲೇ ಆತನ ಅಕ್ಕಂದಿರು ಪ್ರೀತಿ ಗೀತಿ ಅಂತಾ ಬಿದ್ರೆ ಹುಷಾರ್ ಅಂದಿದ್ದಾರೆ.
Discussion about this post