ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅಂತಿಮ ಸಂಸ್ಕಾರಕ್ಕೆಸ್ಥಳ ನೀಡಲು ತಮಿಳುನಾಡು ಎಐಎಡಿಎಂಕೆ ಸರ್ಕಾರ ನಿರಾಕರಿಸಿದ್ದು,ಅಂತ್ಯಸಂಸ್ಕಾರ ಕುರಿತಂತೆ ರಾಜಕೀಯ ಆರಂಭವಾಗಿದೆ.
ಡಿಎಂಕೆ ಪ್ರಧಾನಿ ಮೋದಿ ಕಚೇರಿಯ ಬಾಗಿಲು ತಟ್ಟಿರುವ ಬೆನ್ನಲ್ಲೇ ನಿನ್ನೆ ತಡರಾತ್ರಿ ತನಕ ಹೈಕೋರ್ಟ್ ನಲ್ಲೂ ವಾದ ವಿವಾದ ನಡೆಯಿತು.
2 ಕಿಮೀ ಅಂತರದಲ್ಲಿ ಇಬ್ಬರು ಹೆಂಡತಿಯರು – ಅಯ್ಯನದ್ದು ವರ್ಣರಂಜಿತ ಬದುಕು
ಗಾಂಧಿ ಮಂಟಪದ ಬಳಿ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಸ್ಥಳವಕಾಶ ಮಾಡಿಕೊಡುವುದಾಗಿ ಸರ್ಕಾರದ ಹೇಳಿದ ಬೆನ್ನಲ್ಲೇ ಡಿಎಂಕೆ ಹೈಕೋರ್ಟ್ ಗೆ ತುರ್ತು ಅರ್ಜಿ ಸಲ್ಲಿಸಿತ್ತು.
ಮಧ್ಯರಾತ್ರಿಯಲ್ಲಿಯೇ ವಿಚಾರಣೆ ನಡೆಸುವಂತೆ ವಕೀಲರು ಮಾಡಿದ ಮನವಿ ಪುರಸ್ಕರಿಸಿದ ನ್ಯಾಯಾಲಯ ಕರುಣಾನಿಧಿ ಸಮಾಧಿ ಸ್ಥಳ ವಿಚಾರಕ್ಕೆ ಸಂಬಂಧಿಸಿ ಡಿಎಂಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರ ನಿವಾಸದಲ್ಲಿ ನಡೆಯಿತು.
ಮುಖ್ಯನ್ಯಾಯಮೂರ್ತಿ ಕರ್ನಾಟಕ ಮೂಲದ ಹುಲುವಾಡಿ ರಮೇಶ್ ಹಾಗೂ ಇನ್ನೊಬ್ಬ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದರು. ತಮಿಳುನಾಡು ಸರ್ಕಾರ ಸಮಾಯವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇಂದು ಬೆಳಗ್ಗೆ 8 ಗಂಟೆಗೆ ಮುಂದೂಡಲಾಗಿದೆ.
Discussion about this post