ನವದೆಹಲಿ : ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೋನಾ ಅಬ್ಬರ ಕಡಿಮೆಯಾದ ಕಾರಣ ಅನೇಕ ನಿರ್ಬಂಧಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತ ಬಹುತೇಕ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿದೆ.
ಈ ನಡುವೆ ಚೀನಾ, ದಕ್ಷಿಣ ಕೊರಿಯಾದಲ್ಲಿ ಕೊರೋನಾ ಕುರಿತಂತೆ ಆಗಿರುವ ಬೆಳವಣಿಗೆ ಗಮನಿಸಿದರೆ ಭಾರತಕ್ಕೆ ಆತಂಕ ತಂದೊಡ್ಡಿದೆ. ಸೋಂಕು ಕಡಿಮೆಯಾಯ್ತು ಅನ್ನುವ ಸಮಾಧಾನದ ನಡುವೆಯೇ ಕೊರೋನಾ ತವರೂರು ಚೀನಾದಲ್ಲಿ ಭಾನುವಾರ 1807 ಮತ್ತು ದಕ್ಷಿಣ ಕೊರಿಯಾದಲ್ಲಿ 3.83 ಲಕ್ಷ ಕೊರೋನಾ ಪ್ರಕರಣಗಳು ವರದಿಯಾಗಿದೆ. ಮಂಗಳವಾರ ಚೀನಾದಲ್ಲಿ 5280 ಮಂದಿಗೆ ಸೋಂಕು ಅಂಟಿದೆ.
ಚೀನಾದಲ್ಲಿ ಒಮಿಕ್ರೋನ್ ರೂಪಾಂತರಿ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಕಾರಣದಿಂದ ಸೋಂಕಿತರ ಸಂಖ್ಯೆ ಏರುತ್ತಿದೆ ಅನ್ನಲಾಗಿದೆ. ಹೀಗಾಗಿ ಶೆನ್ ಜೆನ್ ನಗರವನ್ನು ಎರಡು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಇದರೊಂದಿಗೆ ಚೀನಾದಲ್ಲಿ ಲಾಕ್ ಡೌನ್ ಗೊಂಡ ಮಹಾನಗರಗಳ ಸಂಖ್ಯೆ 11ಕ್ಕೆ ಏರಿದೆ.
ಇನ್ನು ದಕ್ಷಿಣ ಕೊರಿಯಾದಲ್ಲಿ ಪ್ರತೀ ದಿನ 3 ಲಕ್ಷಕ್ಕೂ ಅಧಿಕ ಪ್ರಕರಣ ವರದಿಯಾಗುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಏರಿದ್ದು, ಪ್ರತೀ ದಿನ 100 ರಿಂದ 250 ಜನ ಕೊರೋನಾಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಹಾಂಕಾಂಗ್ ಹಾಗೂ ವಿಯೆಟ್ನಾಂ ನಲ್ಲಿ ಅಧಿಕ ಪ್ರಕರಣ ಪತ್ತೆಯಾಗುತ್ತಿದೆ.
ಈ ಎರಡು ದೇಶಗಳ ಪರಿಸ್ಥಿತಿ ಭಾರತಕ್ಕೆ ಎಚ್ಚರಿಕೆ ಗಂಟೆ. ಸರ್ಕಾರ ನಿರ್ಬಂಧ ಸಡಿಲಿಸಿದ ಕಾರಣಕ್ಕೆ ಮಾಸ್ಕ್, ದೈಹಿಕ ಅಂತರ ಮರೆತುಬಿಟ್ಟಿದ್ದೇವೆ. ಹೀಗಾಗಿ ಭಾರತದ ಮಡಿಲಲ್ಲೇ ಅಪಾಯವಿದೆ ಅನ್ನೋದರಲ್ಲಿ ಸಂಶಯವಿಲ್ಲ.
Discussion about this post