ಕೆಲವೊಮ್ಮೆ ಅಧಿಕಾರಿಗಳು ಮಾಡುವ ಮಾನವೀಯತೆ ಕಾರ್ಯ ಭೇಷ್ ಅನ್ನಿಸಿಕೊಳ್ಳುತ್ತದೆ ( Chikkaballapura)
ಚಿಕ್ಕಬಳ್ಳಾಪುರ : ಅಜ್ಜಿಯ ಆಸ್ತಿ ಕೈ ಸೇರುತ್ತಿದ್ದಂತೆ ವರಸೆ ಬದಲಾಯಿಸಿದ ಮೊಮ್ಮಗಳಿಗೆ ಉಪವಿಭಾಗಾಧಿಕಾರಿ ನ್ಯಾಯಾಲಯ ಬಿಸಿ ಮುಟ್ಟಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ( Chikkaballapura) ನಡೆದಿದೆ.
ಅಜ್ಜಿಯ ಯೋಗಕ್ಷೇಮ ನೋಡಿಕೊಳ್ಳದ ಕಾರಣಕ್ಕೆ ಮೊಮ್ಮಗಳ ಹೆಸರಿನಲ್ಲಿನಲ್ಲಿದ್ದ ಜಮೀನನ್ನು ಉಪವಿಭಾಗಾಧಿಕಾರಿ ನ್ಯಾಯಾಲಯ ಅಜ್ಜಿಗೆ ವಾಪಸ್ ಕೊಡಿಸುವ ಮೂಲಕ ದಾಖಲೆ ಬರೆದಿದೆ.
Read More : Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ
ಕೇತೇನಹಳ್ಳಿ ಗ್ರಾಮದ ಮುನಿವೆಂಕಟಮ್ಮ ಇಟ್ಟಪ್ಪನಹಳ್ಳಿ ಗ್ರಾಮದಲ್ಲಿ 2.14 ಎಕರೆ ಜಮೀನು ಹೊಂದಿದ್ದರು. ತನಗಾದ ವಯಸ್ಸಾದ ಕಾರಣ ಆಸರೆ ಬೇಕಲ್ಲ ಎಂದು ಮೊಮ್ಮಗಳಿಗೆ ದಾನಪತ್ರದ ಮೂಲಕ ಜಮೀನು ಬರೆದುಕೊಟ್ಟಿದ್ದರು. ಜಮೀನು ಬರೋ ತನಕ ಅಜ್ಜಿ ಅಂದ್ರೆ ಪ್ರಾಣ ಬಿಡುತ್ತಿದ್ದ ಮೊಮ್ಮಗಳು ಆಸ್ತಿ ಕೈ ಸೇರುತ್ತಿದ್ದಂತೆ ಬಣ್ಣ ಬದಲಾಯಿಸಿದ್ದಾಳೆ
ಮೊಮ್ಮಗಳು ಶೈಲಜಾ ಮುನಿವೆಂಕಟಮ್ಮ ಅವರ ಯೋಗಕ್ಷೇಮ ನೋಡಿಕೊಳ್ಳದೆ ನಿರ್ಲಕ್ಷಿಸಿದ್ದರು. ಹೀಗಾಗಿ ನೊಂದ ಮುನಿವೆಂಕಟಮ್ಮ ದಾನಪತ್ರ ರದ್ದುಗೊಳಿಸುವಂತೆ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್ ಅವರು ಹಿರಿಯ ನಾಗರಿಕರ ಪಾಲನೆ, ಪೋಷಣೆ ಕಾಯ್ದೆಯಡಿ ದಾನಪತ್ರವನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.
ಮಾತ್ರವಲ್ಲದೆ ಮುನಿವೆಂಕಟಮ್ಮ ಅವರ ಜೀವನ ನಿರ್ವಹಣೆಗಾಗಿ ಶೈಲಜಾ ಮಾಸಿಕ 8 ಸಾವಿರ ರೂ ನೀಡಬೇಕು ಎಂದು ಆದೇಶಿಸಿದ್ದಾರೆ. ಒಂದು ವೇಳೆ ಈ ಆದೇಶ ಪಾಲನೆಯಾಗದಿದ್ರೆ ದಂಡ ವಿಧಿಸುವ ಅಥವಾ ಬಂಧಿಸುವ ಎಚ್ಚರಿಕೆ ನೀಡಲಾಗಿದೆ. ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್ ಈ ಹಿಂದೆ ಚಿಂತಾಮಣಿಯ ಪ್ರಕರಣವೊಂದರಲ್ಲಿ ಇದೇ ರೀತಿಯ ಆದೇಶ ಹೊರಡಿಸಿದ್ದರು. ಪೋಷಕರನ್ನು ನಿರ್ಲಕ್ಷ್ಯ ಮಾಡಿದ್ದ ಮೂವರು ಪುತ್ರಿಯರು ಮಾಸಿಕ ತಲಾ 7 ಸಾವಿರ ರೂ ನೀಡುವಂತೆ ಆದೇಶಿಸಿದ್ದರು. ಜೊತೆಗೆ ಮಕ್ಕಳ ಹೆಸರಿನಲ್ಲಿದ್ದ ಪೋಷಕರ ಆಸ್ತಿಯನ್ನು ಪೋಷಕರಿಗೆ ಹಿಂತಿರುಗಿಸಿದ್ದರು.
Discussion about this post