ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ಕೊಟ್ಟೂರ್ ಮತ್ತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಈ ಹಿಂದೆ ಒತ್ತಾಯಪೂರ್ವಕವಾಗಿ ಯುವಕನೊಬ್ಬನನ್ನು ಮದುವೆಯಾಗಿ ಸುದ್ದಿಯಾಗಿದ್ದ ಚೈತ್ರಾ, ಇದೀಗ ಅದೇ ಹುಡುಗನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಾರೆ.
ಈ ಸಂಬಂಧ ಬಸವನಗುಡಿಯ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಮದುವೆಗೂ ಮುನ್ನ ಲಾಕ್ ಡೌನ್ ವೇಳೆ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ನನ್ನ ಬಳಸಿಕೊಂಡು, ನಂತರ ಮದುವೆ ಆಗಲು ನಿರಾಕರಿಸಿದ್ದ. ಹೀಗಾಗಿ ಬಲವಂತವಾಗಿ ಮದುವೆಯಾಗೋ ಪರಿಸ್ಥಿತಿ ಬಂತು ಎಂದು ಚೈತ್ರಾ ಕೊಟ್ಟೂರ್ ದೂರಿನಲ್ಲಿ ವಿವರಿಸಿದ್ದಾರೆ.
ಈ ಹಿಂದೆ ಮದುವೆ ವಿಚಾರದಲ್ಲೂ ರಾಡಿ ರಂಪಾಟ ಮಾಡಿದ್ದ ಚೈತ್ರಾ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆಳಗ್ಗೆ ಮದುವೆಯಾಗಿ ಮಧ್ಯಾಹ್ನ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು.
ಇದಾದ ಬಳಿಕ ಓಶೋ ಧ್ಯಾನ ಕೇಂದ್ರ ಸೇರಿದ್ದ ಅವರು ಮಾ ಪ್ರಗ್ಯಾ ಭಾರತಿ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಇದಾದ ಬಳಿಕ ನಾನು ಸನ್ಯಾಸಿಯಾಗಿಲ್ಲ ಅಂದಿದ್ದರು.
ಇದಕ್ಕೂ ಬಿಗ್ ಬಾಸ್ ಮನೆಯಲ್ಲಿ ಶೈನಿ ಶೆಟ್ಟಿಯನ್ನು ಇನ್ನಿಲ್ಲದಂತೆ ಕಾಡಿ, ವೀಕ್ಷಕರ ಆಸಹನೆಗೆ ಕಾರಣವಾಗಿದ್ದರು.
ಅದಕ್ಕೂ ಮುನ್ನ ಸೂಜಿದಾರ ಚಿತ್ರದ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಕೆಂಗಣ್ಣಿಗೆ ಗುರಿಯಾದ ಹಿರಿಮೆ ಚೈತ್ರಾ ಕೊಟ್ಟೂರು ಅವರದ್ದು.
Discussion about this post