ಕೊಚ್ಚಿ : ಕೇರಳದಲ್ಲಿ ಈಗಾಗಲ್ ಕೊರೋನಾ ಸೋಂಕು ಅಬ್ಬರಿಸುತ್ತಿದೆ. ಈ ಹಿಂದೆ ಕೊರೋನಾ ನಿಯಂತ್ರಣದಲ್ಲಿ ಮಾದರಿ ಎಂದು ಕರೆಸಿಕೊಂಡಿದ್ದ ದೇವರನಾಡು ಇದೀಗ ಸೋಂಕಿನ ಅಬ್ಬರದಿಂದ ತತ್ತರಿಸಿ ಹೋಗಿದೆ. ಮೊದಲ ಅಲೆಯ ಸಂದರ್ಭದಲ್ಲಿ ಓಣಂ ಕಾರಣಕ್ಕೆ ಕೊರೋನಾ ನಿಯಮಗಳನ್ನು ಸಡಲಿಕೆ ಮಾಡಲಾಗಿತ್ತು. ಓಣಂ ಸಂದರ್ಭದಲ್ಲಿ ಜನ ಮುನ್ನೆಚ್ಚರಿಕೆಯನ್ನು ಮರೆತು ಬೀದಿಗಿಳಿದರು. ಹೀಗಾಗಿ ಕೇರಳದಲ್ಲಿ ವುಹಾನ್ ವೈರಸ್ ನಿಯಂತ್ರಣ ಹಿಡಿತ ತಪ್ಪಿತ್ತು.
ಇದೀಗ ಬಕ್ರೀದ್ ಹಿನ್ನಲೆಯಲ್ಲಿ ಕೊರೋನಾ ನಿರ್ಬಂಧಗಳನ್ನು ಕೇರಳ ಸರ್ಕಾರ ಸಡಿಲಗೊಳಿಸಿದೆ.ಜುಲೈ 18 ರಿಂದ ಜುಲೈ 20ರತನಕ ಈ ಸಡಿಲಿಕೆ ಘೋಷಿಸಲಾಗಿದ್ದು, ಬಕ್ರೀದ್ ಖರೀದಿ ಭರ್ಜರಿಯಾಗಿ ಸಾಗಿದೆ. ಎಲ್ಲಿ ನೋಡಿದರೂ ಜನ ಜನ ಜನ… ಆದರೆ ಎಲ್ಲೂ ಕೊರೋನಾ ನಿಯಮಗಳನ್ನು ಪಾಲನೆ ಮಾತ್ರ ಇಲ್ಲ. ಪರಿಸ್ಥಿತಿ ನೋಡಿದರೆ ಬಕ್ರೀದ್ ಸಂಭ್ರಮದ ಬೆನ್ನಲ್ಲೇ ಕೇರಳದಲ್ಲಿ ಮೂರನೇ ಅಲೆಯ ಅಬ್ಬರ ತೀವ್ರವಾಗುವುದರಲ್ಲಿ ಸಂಶಯವಿಲ್ಲ.
ಈ ನಡುವೆ ಕೇರಳ ಸರ್ಕಾರದ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ ಖಂಡಿಸಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಈಗಾಗಲೇ ಕೊರೋನಾ ಕಾರಣದಿಂದಲೇ ಉತ್ತರ ಪ್ರದೇಶ, ಜಮ್ಮು, ಉತ್ತರಾಖಂಡದಲ್ಲಿ ಧಾರ್ಮಿಕ ಯಾತ್ರೆಗಳನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಜನ ಪ್ರವಾಸಿ ತಾಣಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕವಾಗಿ ಸೇರುತ್ತಿರುವ ಬಗ್ಗೆ ಪ್ರಧಾನಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಕೇರಳ ಸರ್ಕಾರದ ಈ ಒಲೈಕೆ ನಿಯಮದಿಂದ ಕೊರೋನಾ ನಿಯಂತ್ರಣ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ ಎಂದು ಐಎಂಎ ಆತಂಕ ವ್ಯಕ್ತಪಡಿಸಿದೆ.
ಈ ನಡುವೆ ಶಬರಿಮಲೆ ಕ್ಷೇತ್ರದ ಬಾಗಿಲು ತೆರೆಯಲು ಕೇರಳ ಸರ್ಕಾರ ಅನುಮತಿ ಕೊಟ್ಟಿರುವುದು ಕೂಡಾ ಆಕ್ರೋಶಕ್ಕೆ ಕಾರಣವಾಗಿದೆ. ಶಬರಿಮಲೆಯಲ್ಲಿ ವಿಧಿ ವಿಧಾನಕ್ಕೆ ಅನುಮತಿ ಕೊಟ್ರೆ ಪರವಾಗಿಲ್ಲ, ಬದಲಾಗಿ ಭಕ್ತರಿಗೆ ಬಾಗಿಲು ತೆರೆದರೆ ಸೋಂಕು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವೇಗವಾಗಿ ಹರಡಲಿದೆ ಅನ್ನುವ ಆತಂಕ ವ್ಯಕ್ತವಾಗಿದೆ.
Discussion about this post