ನವದೆಹಲಿ : ಈಗಾಗಲೇ ಅಡುಗೆ ಎಣ್ಣೆ ದರ, ಪೆಟ್ರೋಲ್, ಡೀಸೆಲ್ ದರ, ಗ್ಯಾಸ್ ದರ ಹೀಗೆ ಎಲ್ಲಾ ವಸ್ತುಗಳ ದರ ಏರಿಕೆಯಿಂದ ಜನ ಕಂಗಲಾಗಿದ್ದಾರೆ. ಈ ದರ ಏರಿಕೆಯ ಮಂಡೆ ಬಿಸಿಯಿಂದ ರಿಲ್ಯಾಕ್ಸ್ ಆಗೋಣ ಅಂತಾ ಟಿವಿ ಚಾನೆಲ್ ನೋಡಿದ್ರು ಕೂಡಾ ಇನ್ನು ಹೆಚ್ಚುವರಿ ಕಾಸು ಕೊಡಬೇಕಾಗುತ್ತದೆ. ಹೌದು ದರ ಏರಿಕೆಯ ಬಿಸಿ ಇದೀಗ ಟಿವಿ ಚಾನೆಲ್ ವೀಕ್ಷಣೆಗೂ ತಟ್ಟಲಿದೆ.
ಈ ಹಿಂದೆ ಟಿವಿ ಚಾನೆಲ್ ದರದಲ್ಲಿ 12 ರೂ.ಗಳ ಮಿತಿಯನ್ನು ಡಿಸೆಂಬರ್ 1ರಿಂದ ಅಳವಡಿಸಲು ಟ್ರಾಯ್ ಪ್ರಸ್ತಾಪಿಸಿತ್ತು. ಇದರ ವಿರುದ್ಧ Indian Broadcasting and Digital Foundation (IBDF) ಇಂಡಿಯನ್ ಬ್ರಾಡ್ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಫೆಡರೇಶನ್ (ಐಬಿಡಿಎಫ್) ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಒಂದು ವೇಳೆ IBDF ಮುಂದಿಟ್ಟಿರುವ ದರ ಏರಿಕೆ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಿದರೆ, ಕೇಬಲ್ ಟಿವಿ ಚಂದಾದಾರಿಕೆ ಶೇ.50 ತನಕ ಏರಿಕೆಯಾಗಲಿದೆ.
ಕೆಲ ಕೇಬಲ್ ಅಪರೇಟರ್ ಗಳು ಹೇಳುವ ಪ್ರಕಾರ IBDFಗೆ ಜಯ ಸಿಕ್ರೆ ಕ್ರೀಡೆ, ಮನೋರಂಜನೆ, ಇನ್ಫೋಟೈನ್ಮೆಂಟ್ ಮತ್ತು ಸಿನಿಮಾ ವಾಹಿನಿಗಳ ಚಂದಾದಾರಿಕೆ ದರದಲ್ಲಿ15-30 ರೂ. ಹೆಚ್ಚಳವಾಗಲಿದೆ. ಮಾತ್ರವಲ್ಲದೆ ಸಾಮಾನ್ಯ ಚಾನೆಲ್ಗೆ 15 ರೂ. ಗಳಿಂದ 30 ರೂ. ತನಕ ದರ ಏರಿಕೆಯಾಗಬಹುದು ಅಂದಿದೆ. ಹೀಗೆ ದರ ಏರಿಕೆಯಾದ್ರೆ ಕೇಬಲ್ ಟಿವಿ ಉದ್ಯಮ ನೆಲಕಚ್ಚಲಿದೆ. ಈಗಾಗಲೇ ರಿಲಾಯನ್ಸ್ ಸೇರಿದಂತೆ ಅನೇಕ ಕಂಪನಿಗಳು ಕಡಿಮೆ ದರದಲ್ಲಿ ಮೊಬೈಲ್ ಮೂಲಕ ಟಿವಿ ತೋರಿಸುತ್ತಿದೆ. ಹೀಗಾಗಿ ಕೇಬಲ್ ಚಂದದಾರಿಕೆ ಕುಸಿಯುವ ಭೀತಿ ಎದುರಾಗಿದೆ.
Discussion about this post