ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ಬ್ರೆಜಿಲ್ನಲ್ಲಿ ದೊಡ್ಡ ಹಗರಣ ನಡೆದಿದೆ ಅನ್ನೋ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಖರೀದಿ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಬ್ರೆಜಿಲ್ ಆರೋಗ್ಯ ಸಚಿವ ಮಾರ್ಸೆಲೊ ಕ್ವಿರೊಗಾ ಈ ಘೋಷಣೆ ಮಾಡಿದ್ದಾರೆ.
ಅಂದಾಜು 32.4 ಕೋಟಿ ರೂಪಾಯಿಯ ಒಪ್ಪಂದ ಇದಾಗಿತ್ತು. ಭಾರತದಿಂದ ಇನ್ನೂ ಪೂರೈಕೆಯಾಗದ ಕೊವ್ಯಾಕ್ಸಿನ್ ಲಸಿಕೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಲಸಿಕೆ ಪೂರೈಕೆಯಾಗಿದೆ ಅನ್ನುವ ಮೂಲಕ 45 ಮಿಲಿಯನ್ ಡಾಲರ್ ಹಣ ಬಿಡುಗಡೆ ಮಾಡುವ ಪ್ಲಾನ್ ಸಿದ್ದವಾಗಿತ್ತು ಅನ್ನುವುದು ಆರೋಪ.
ಈ ಹಗರಣ ಬ್ರೆಜಿಲ್ ಅಧ್ಯಕ್ಷ ಜೈರ್ ಬಲ್ಸೋನಾರ್ ಅವರೃ ಕುರ್ಚಿಗೂ ಕಂಟಕ ತಂದಿತ್ತು.
1 ಡೋಸ್ಗೆ 1.34 ಡಾಲರ್ ದರ ವಿಧಿಸುವುದಾಗಿ ಭಾರತ್ ಬಯೋಟೆಕ್ ಹೇಳಿತ್ತು. ಆದರೆ ಬ್ರೆಜಿಲ್ ಪ್ರತಿ ಡೋಸ್ಗೆ 15 ಡಾಲರ್ ನೀಡಲು ತಯಾರಾಗಿದೆ. ಇದು ಕೊವ್ಯಾಕ್ಸಿನ್ ಲಸಿಕೆ ಖರೀದಿ ಹೆಸರಲ್ಲಿ ನಡೆಯುತ್ತಿರುವ ಹಗರಣವಲ್ಲದೇ ಇನ್ನೇನು ಎಂದು ಅಧ್ಯಕ್ಷ ರಿಗೆ ಸಂಸತ್ ಸದಸ್ಯರು ಪ್ರಶ್ನಿಸಿದ್ದರು.
Discussion about this post