ಮಾಡಿದ ಪಾಪಗಳಿಗೆ ಫಲ ಅನ್ನುವಂತೆ ಬ್ರಿಟನ್ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ( Boris Johnson rishi sunak ) ರಾಜೀನಾಮೆಯಿದ ತೆರವಾದ ಸ್ಥಾನಕ್ಕೆ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ (rishi sunak ) ಬರಲಿದ್ದಾರೆ ಅನ್ನಲಾಗಿದೆ
ಸಾಲು ಸಾಲು ಹಗರಣ ಮತ್ತು ವಿವಾದಗಳ ಕಾರಣದಿಂದ ಸ್ವಪಕ್ಷೀಯರಿಂದಲೇ ವಿರೋಧ ಕಟ್ಟಿಕೊಂಡ ಬ್ರಿಟನ್ ಪ್ರಧಾನಿ Boris Johnson ತಮ್ಮ ಸಂಪುಟದಲ್ಲೇ ಬಂಡಾಯ ಎದುರಿಸಬೇಕಾಯ್ತು. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಬೋರಿಸ್ ಜಾನ್ಸನ್ ಆಡಿದ್ದು ಮಂಗನಾಟವೇ ಆಗಿತ್ತು. ಇದೀಗ ಸಾಲು ಸಾಲು ಸಚಿವರು ರಾಜೀನಾಮೆ ಕೊಟ್ಟ ಕಾರಣ ಒಲ್ಲದ ಮನಸ್ಸಿನಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಆ ಸ್ಥಾನಕ್ಕೆ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ( rishi sunak ) ಬರುವ ಎಲ್ಲಾ ಸಾಧ್ಯತೆಗಳಿದೆ.
ಬ್ರಿಟನ್ ಪ್ರಧಾನಿಯ ರೇಸ್ ನಲ್ಲಿ ರಿಷಿ ಸುನಾಕ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಹೆಸರುಗಳಿದ್ದು, ಕನ್ಸರ್ವೇಟಿವ್ ಪಕ್ಷದ ಮುಖಂಡರು ರಿಷಿ ಸುನಾಕ್ ಬಗ್ಗೆ ಒಲವು ಹೊಂದಿದ್ದಾರೆ. ಹೀಗಾಗಿ ಮುಂದಿನ ವಾರದಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಇದನ್ನೂ ಓದಿ : 30 ತರುಣಿಯಂತೆ ಮೇಕಪ್ ಧರಿಸಿ 35ರ ಯುವಕನನ್ನು ಮದುವೆಯಾದ 54 ರ ಆಂಟಿ
ರಿಷಿ ಸುನಾಕ್ ಕುಟುಂಬ ಪಂಜಾಬ್ ಮೂಲದವರಾಗಿದ್ದು, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ಇವರು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.
ಒಂದು ಕಾಲದಲ್ಲಿ ರಿಷಿ ಸುನಕ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇತ್ತು. ಆದರೆ ಪತ್ನಿ ಅಕ್ಷತಾ ಮೂರ್ತಿ ತೆರಿಗೆ ವಿವಾದ, ಪೇ ಗೇಟ್ ಹಗರಣದಲ್ಲಿ ಜಾನ್ಸನ್ ಜೊತೆ ಹೆಸರು ಕೇಳಿ ಬಂದಾಗ ಜನಪ್ರಿಯತೆ ಕುಗ್ಗಿತ್ತು. ಇದೀಗ ಬೋರಿಸ್ ಜಾನ್ಸನ್ ವಿರುದ್ಧವೇ ರಿಷಿ ತಿರುಗಿ ಬಿದ್ದಿರುವ ಕಾರಣ ಮತ್ತೆ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ
ದೇಶ ಸಂಕಷ್ಟದಲ್ಲಿದೆ ನಾನು ರಾಜೀನಾಮೆ ಕೊಡಲಾರೆ ಎಂದು ಹೇಳಿದ್ದ United Kingdom England ಪ್ರಧಾನಿ Boris Johnson ಕೊನೆಗೂ ಪದವಿಯಿಂದ ಕೆಳಗಿಳಿಯಲು ಒಪ್ಪಿದ್ದಾರೆ
ಆಡಳಿತದಲ್ಲಿ ವೈಫಲ್ಯ ಕಂಡ ಕರ್ಮಕ್ಕೆ ಇದೀಗ ಬ್ರಿಟನ್ ಪ್ರಧಾನಿ Boris Johnson ರಾಜೀನಾಮೆ ಕೊಡಬೇಕಾಗಿ ಬಂದಿದೆ. ಮಂಗಳವಾರ ಜಾನ್ಸನ್ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿ ಇಸ್ಫೋಸಿಸ್ ನಾರಾಯಣಮೂರ್ತಿ ಅಳಿಯ ಹಾಗೂ ಬ್ರಿಟನ್ ವಿತ್ತ ಸಚಿವ ರಿಷಿ ಸುನಾಕ್, ಆರೋಗ್ಯ ಸಚಿವ ಸಾಜಿದ್ ಜಾವಿದ್ ಮಂಗಳವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದರು. ಅಲ್ಲಿಂದ ಬೊರಿಸ್ ಜಾನ್ಸನ್ ರಾಜೀನಾಮೆ ನೀಡಬೇಕು ಅನ್ನುವ ಒತ್ತಡ ಹೆಚ್ಚಾಯಿತು. ಆದರೆ ರಾಜೀನಾಮೆ ಕೊಡಲು ಬೊರಿಸ್ ಒಪ್ಪಿರಲಿಲ್ಲ. ಯಾವಾಗ ಕನ್ಸರ್ವೇಟೀವ್ ಪಾರ್ಟಿಯ ನಾಯಕರು ಬಂಡಾಯವೆದ್ದು ರಾಜೀನಾಮೆ ಕೊಟ್ಟರೋ ಬೊರಿಸ್ ಜಾನ್ಸನ್ ರಾಜೀನಾಮೆ ಕೊಡುವುದು ಅನಿವಾರ್ಯವಾಯಿತು.
ಮುಂದಿನ ಪ್ರಧಾನಿ ಆಯ್ಕೆಯಾಗುವ ತನಕ ಬೊರಿಸ್ ಜಾನ್ಸನ್ ಹಂಗಾಮಿ ಪ್ರದಾನಿಯಾಗಿ ಮುಂದುವರಿಯಲಿದ್ದು, ಅಕ್ಟೋಬರ್ 2022ರಲ್ಲಿ ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಇನ್ನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಮಾಡಿದ ಭಾಷಣದಲ್ಲಿ ಭಾವುಕಾರದ ಬೊರಿಸ್ ಜಾನ್ಸನ್, ವಿಶ್ವದ ಅತ್ಯುತ್ತಮ ಸ್ಥಾನವನ್ನು ತ್ಯಜಿಸುವುದು ಕಷ್ಟವಾಗುತ್ತಿದೆ. ಪ್ರಧಾನಿಯಾಗಿ ನಾನು ಮಾಡಿದ ಕಾರ್ಯ ನನಗೆ ತೃಪ್ತಿ ತಂದಿದೆ. ಸರ್ಕಾರದ ಸಾಧನೆಗಳ ಬಗ್ಗೆ ಹೆಮ್ಮೆಯಿದೆ ಅಂದಿದ್ದಾರೆ.
2019ರಲ್ಲಿ ಪ್ರಧಾನಿ ಹುದ್ದೆಗೆ ಏರಿದ್ದ ಬೋರಿಸ್ ಜಾನ್ಸನ್ ಹಗರಣ, ವಿವಾದಗಳಲ್ಲೇ ಹೆಚ್ಚಿನ ಸಮಯ ಕಳೆದಿದ್ದರು.
Discussion about this post