ದೇಶ ಸಂಕಷ್ಟದಲ್ಲಿದೆ ನಾನು ರಾಜೀನಾಮೆ ಕೊಡಲಾರೆ ಎಂದು ಹೇಳಿದ್ದ ( Boris Johnson United Kingdom England ) ಬ್ರಿಟನ್ ಪ್ರಧಾನಿ ಕೊನೆಗೂ ಪದವಿಯಿಂದ ಕೆಳಗಿಳಿಯಲು ಒಪ್ಪಿದ್ದಾರೆ
ಆಡಳಿತದಲ್ಲಿ ವೈಫಲ್ಯ ಕಂಡ ಕರ್ಮಕ್ಕೆ ಇದೀಗ ಬ್ರಿಟನ್ ಪ್ರಧಾನಿ (Boris Johnson United Kingdom England ) ರಾಜೀನಾಮೆ ಕೊಡಬೇಕಾಗಿ ಬಂದಿದೆ. ಮಂಗಳವಾರ ಜಾನ್ಸನ್ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ಹಾಗೂ ಬ್ರಿಟನ್ ವಿತ್ತ ಸಚಿವ ರಿಷಿ ಸುನಾಕ್, ಆರೋಗ್ಯ ಸಚಿವ ಸಾಜಿದ್ ಜಾವಿದ್ ಮಂಗಳವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದರು. ಅಲ್ಲಿಂದ ಬೊರಿಸ್ ಜಾನ್ಸನ್ ರಾಜೀನಾಮೆ ನೀಡಬೇಕು ಅನ್ನುವ ಒತ್ತಡ ಹೆಚ್ಚಾಯಿತು. ಆದರೆ ರಾಜೀನಾಮೆ ಕೊಡಲು ಬೊರಿಸ್ ಒಪ್ಪಿರಲಿಲ್ಲ. ಯಾವಾಗ ಕನ್ಸರ್ವೇಟೀವ್ ಪಾರ್ಟಿಯ ನಾಯಕರು ಬಂಡಾಯವೆದ್ದು ರಾಜೀನಾಮೆ ಕೊಟ್ಟರೋ ಬೊರಿಸ್ ಜಾನ್ಸನ್ ( Boris Johnson United Kingdom England) ರಾಜೀನಾಮೆ ಕೊಡುವುದು ಅನಿವಾರ್ಯವಾಯಿತು.
ಮುಂದಿನ ಪ್ರಧಾನಿ ಆಯ್ಕೆಯಾಗುವ ತನಕ ಬೊರಿಸ್ ಜಾನ್ಸನ್ ಹಂಗಾಮಿ ಪ್ರದಾನಿಯಾಗಿ ಮುಂದುವರಿಯಲಿದ್ದು, ಅಕ್ಟೋಬರ್ 2022ರಲ್ಲಿ ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಇದನ್ನೂ ಓದಿ : ಪ್ರೇಮ ಪ್ರಸಂಗವೊಂದರಲ್ಲಿ ಸುದ್ದಿಯಾಗಿದ್ದ ಮಹಿಳಾ ಇನ್ಸ್ ಪೆಕ್ಟರ್ ಇದೀಗ ಲಂಚ ತಿಂದು ಸುದ್ದಿಯಾಗಿದ್ದಾರೆ
ಇನ್ನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಮಾಡಿದ ಭಾಷಣದಲ್ಲಿ ಭಾವುಕಾರದ ಬೊರಿಸ್ ಜಾನ್ಸನ್, ವಿಶ್ವದ ಅತ್ಯುತ್ತಮ ಸ್ಥಾನವನ್ನು ತ್ಯಜಿಸುವುದು ಕಷ್ಟವಾಗುತ್ತಿದೆ. ಪ್ರಧಾನಿಯಾಗಿ ನಾನು ಮಾಡಿದ ಕಾರ್ಯ ನನಗೆ ತೃಪ್ತಿ ತಂದಿದೆ. ಸರ್ಕಾರದ ಸಾಧನೆಗಳ ಬಗ್ಗೆ ಹೆಮ್ಮೆಯಿದೆ ಅಂದಿದ್ದಾರೆ.
2019ರಲ್ಲಿ ಪ್ರಧಾನಿ ಹುದ್ದೆಗೆ ಏರಿದ್ದ ಬೋರಿಸ್ ಜಾನ್ಸನ್ ಹಗರಣ, ವಿವಾದಗಳಲ್ಲೇ ಹೆಚ್ಚಿನ ಸಮಯ ಕಳೆದಿದ್ದರು.
ಮಾಜಿ ಕಾರ್ಪೋರೇಟರ್ ಬಳಿಯೇ ಲಂಚಕ್ಕೆ ಕೈಯೊಡ್ಡಿದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ
ಪೊಲೀಸರ ಧನದಾಹ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಮೊನ್ನೆ ಮೊನ್ನೆ ಪವರ್ ಟಿವಿ ಮಾಡಿದ ಸ್ಟಿಂಗ್ ಆಪರೇಷನ್ ನಲ್ಲಿ ಟ್ರಾಫಿಕ್ ಪೊಲೀಸರ ಅಸಲಿ ಮುಖ ಬಯಲಾಗಿತ್ತು. ರಸ್ತೆಯಲ್ಲಿ ಓಡಾಡುವ ಮಂದಿ ಸತ್ತರೂ ಪರವಾಗಿಲ್ಲ ಅನ್ನುವುದು ಇವರ ಧೋರಣೆ. ಈ ನಡುವೆ ಇಂದು BMTF ಪೊಲೀಸ್ ಸಬ್ ಇನ್ಸ್ ಪೆಕ್ಟರ್ Acb Raid ವೇಳೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು : ಕರ್ನಾಟಕದ ಪೊಲೀಸ್ ಅಂದ್ರೆ ರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ. ಆದರೆ ಇತ್ತೀಚಿನ ದಿನಗಳ ಕರ್ನಾಟಕ ಪೊಲೀಸರ ಮಾನ ಹರಾಜುಗೊಳ್ಳುತ್ತಿದೆ. ಪೊಲೀಸ್ ನೇಮಕಾತಿ ವಿಚಾರದಲ್ಲಿ ಭ್ರಷ್ಟಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ರೆ, ಎಸಿಬಿ ( Acb Raid )ಕೈಗೆ ಅನೇಕ ಪೊಲೀಸ್ ಅಧಿಕಾರಿಗಳು ಸಿಕ್ಕಿ ಬೀಳುತ್ತಿದ್ದಾರೆ. ಪವರ್ ಟಿವಿ ಮಾಡಿದ ಸ್ಟಿಂಗ್ ಆಪರೇಷನ್ ನೋಡಿದ್ರೆ ರಸ್ತೆಯಲ್ಲಿ ಓಡಾಡುವುದೇ ಕಷ್ಟ ಅನ್ನುವಂತಾಗಿದೆ. ದೊಡ್ಡ ದೊಡ್ಡ ಲಾರಿಗಳ ಓಡಾಟಕ್ಕೆ, ಟಿಪ್ಪರ್ ಗಳ ಸಂಚಾರಕ್ಕೆ ಲಂಚ ಬಾಚುವ ಪರಿ ನೋಡಿದ್ರೆ, ಬೆಂಗಳೂರಿನ ರಸ್ತೆಗಳನ್ನು ಈ ಅಧಿಕಾರಿಗಳು ಮಾರುವುದು ಗ್ಯಾರಂಟಿ. ಒಟ್ಟಿನಲ್ಲಿ ಶಿಸ್ತಿನ ಇಲಾಖೆಗೆ ಮಸಿ ಬಳಿಯುವ ಹೆಸರನ್ನು ಖಾಕಿಗಳೇ ಮಾಡುತ್ತಿದ್ದಾರೆ.
ಈ ನಡುವೆ ಮಾಜಿ ಕಾರ್ಪೋರೇಟರ್ ಬಳಿಯೇ ಲಂಚಕ್ಕಾಗಿ ಕೈಯೊಡ್ಡಿದ ಬಿಎಂಟಿಎಫ್ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಿಬಿಎಂಪಿ ಮುಖ್ಯ ಕಚೇರಿಯಲ್ಲೇ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ PSI ಬೇಬಿ ಒಲೇಕಾರ್ರನ್ನು ಎಸಿಬಿ ಬಂಧಿಸಿದೆ. ಹೊರಮಾವು ಅಗರದ ಭೂವ್ಯಾಜ್ಯ ಸಂಬಂಧ ಮಾಜಿ ಕಾರ್ಪೋರೇಟರ್ ಲಕ್ಷ್ಮಿ ನಾರಾಯಣ್ ಬಳಿ 3 ಲಕ್ಷಕ್ಕೆ ಬೇಬಿ ಬೇಡಿಕೆ ಇಟ್ಟಿದ್ದರು. ಇಂದು 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.
Discussion about this post