ನವದೆಹಲಿ : ಕೊರೋನಾ ವಿರುದ್ಧದ ಸಮರದಲ್ಲಿ ಮಹತ್ತರ ಪ್ರಗತಿ ಸಾಧಿಸಿರುವ ನಡುವೆಯೇ ಬೂಸ್ಟರ್ ಡೋಸ್ ನೀಡುವ ಕುರಿತಂತೆ ಚರ್ಚೆಗಳು ನಡೆಯುತ್ತಿದೆ. ಕೆಲವು ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ನೀಡುವ ಕಾರ್ಯವೂ ಜಾರಿಯಲ್ಲಿದೆ.
ಈ ನಡುವೆ ಕೋವ್ಯಾಕ್ಸಿನ್ 2 ಡೋಸ್ ಪಡೆದ ಬಳಿಕ 6 ತಿಂಗಳ ಬಳಿಕ ಬೂಸ್ಟರ್ ಡೋಸ್ ನೀಡಬೇಕು ಎಂದು ಭಾರತ್ ಬಯೋಟೆಕ್ ಹೇಳಿದೆ. ಭಾರತ್ ಬಯೋಟೆಕ್ ನ ಮುಖ್ಯಸ್ಥ ಕೃಷ್ಣಾ ಎಲ್ಲಾ ಅವರೇ ಬೂಸ್ಟರ್ ಡೋಸ್ ಮಾತನಾಡಿರುವುದರಿಂದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜೊತೆಗೆ ಬೂಸ್ಟರ್ ಡೋಸ್ ಆಗಿ ಮೂಗಿನ ಮೂಲಕ ನೀಡುವ ಲಸಿಕೆ ಬಳಸುವುದು ಸೂಕ್ತ ಎಂದು ಕೃಷ್ಣಾ ಎಲ್ಲಾ ಅವರು ಪ್ರತಿಪಾದಿಸಿದ್ದು, ಇದರಿಂದ ವೈರಸ್ ಪ್ರಸರಣ ತಡೆಯಲು ಅನುಕೂಲ ಹಾಗೂ ಪರಿಣಾಮಕಾರಿಯಾಗಿರಲಿದೆ ಅಂದಿದ್ದಾರೆ.
Discussion about this post