ಸೆಲೆಬ್ರೆಟಿ ದಂಪತಿಗಳು ನಿಂತರೂ ಸುದ್ದಿ, ಕುಂತರೂ ಸುದ್ದಿ. ಜಗಳವಾಡಿದರೂ ಸುದ್ದಿ, ಕಾಲೆಳೆದರೂ ಸುದ್ದಿ.
ಇದೀಗ ಸುದ್ದಿಯಲ್ಲಿರುವುದು ಶಿಲ್ಪಾ ಶೆಟ್ಟಿ ದಂಪತಿ.
ಇತ್ತೀಚೆಗೆ ಡಿಫರೆಂಡ್ ವಿನ್ಯಾಸದ ಬಟ್ಟೆ ಧರಿಸಿ ಕಾರ್ಯಕ್ರಮವೊಂದಕ್ಕೆ ಶಿಲ್ಪಾ ಶೆಟ್ಟಿ ಹಾಜರಾಗಿದ್ದರು. ಇದೇ ಕಾರ್ಯಕ್ರಮದ ಫೋಟೋ ಒಂದನ್ನು ಶಿಲ್ಪಾ ಶೆಟ್ಟಿ ತಮ್ಮ ಸಾಮಾಜಿಕ ಜಾಲ ತಾಣದಲ್ಲೂ ಹಂಚಿಕೊಂಡಿದ್ದರು.
ಇದನ್ನು ನೋಡಿದ ಪತಿ ರಾಜ್ ಕುಂದ್ರಾ “ನೀನು ಮನೆಗೆ ಮರಳಿದ ಬಳಿಕ ಆ ಕರ್ಟನ್ ತಂದು, ಮತ್ತೆ ಸೇಮ್ ಪ್ಲೇಸ್ನಲ್ಲಿ ನೇತಾಕು. ಮೈ ಡಾರ್ಲಿಂಗ್ ಏಂಜೆಲ್” ಎಂದು ಟ್ವಿಟರ್ನಲ್ಲಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದರು.
ಅಷ್ಟೇ ಸೈಲೆಂಟ್ ಆಗಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಲು ಪ್ರಾರಂಭಿಸಿದರು. ಅತ್ತ ಗಂಡ ಕಾಲೆಳೆದು ಟ್ವೀಟ್ ಮಾಡುತ್ತಿದ್ದಂತೆ, ” ಕರ್ಟನ್ ಜೊತೆಗೆ ನಿಮ್ಮನ್ನೂ ಕೂಡ ನೇತಾಕುತ್ತೇನೆ” ಅಂದಿದ್ದಾರೆ.
ದಂಪತಿಯ ತಮಾಷೆಯ ಕಮೆಂಟ್ ಇದೀಗ ಜನರ ಗಮನ ಸೆಳೆಯುತ್ತಿದೆ.
ಇನ್ನು ಕೆಲವರು ಗಂಡ ಹೆಂಡತಿಯ ಕಿತ್ತಾಟ ನೋಡಿ, ಅಯ್ಯೋ ಇದನ್ನು ಮನೆಯೊಳಗೆ ನಡೆಸಬಹುದಿತ್ವಲ್ಲ ಅಂದಿದ್ದಾರೆ.
Discussion about this post