ಬ್ಯಾಗ್ ಕೊಟ್ಟು ಶಿಲ್ಪಾ ಶೆಟ್ಟಿಯನ್ನು ಪಟಾಯಿಸಿದ್ದ ಕುಂದ್ರಾ

ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿ ಹ್ಯಾಪಿಯಾಗಿರುವ ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ತಮ್ಮ ಪ್ರೀತಿಯ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಬಾಲಿವುಡ್ ನಲ್ಲಿ ಸಾಕಷ್ಟು ಪ್ರಚಲಿತದಲ್ಲಿದ್ದ ಸಂದರ್ಭದಲ್ಲೇ, ಹುಡುಗನೊಬ್ಬನ ಪ್ರೀತಿಯ ಬಲೆಯಲ್ಲಿ ಶಿಲ್ಪಾ ಬಿದ್ದಿದ್ದರು.
ಶಿಲ್ಪಾ ನಿಜವಾಗಿಯೂ ಪ್ರೀತಿಯಲ್ಲಿದ್ದರೆ, ಹುಡುಗ ಮಾತ್ರ ಬೆಟ್ಟಿಂಗ್ ಸಲುವಾಗಿ ಪ್ರೀತಿಸುತ್ತಿದ್ದಾನೆ ಅನ್ನುವ ಸತ್ಯ ಗೊತ್ತೇ ಇರಲಿಲ್ಲ.

ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ.ಆತ ಕೇವಲ ಬೆಟ್ಟಿಂಗ್ಗಾಗಿ ನನ್ನೊಂದಿಗೆ ಸಂಬಂಧ ಬೆಳೆಸಿದ್ದ. ನನ್ನ ಸ್ನೇಹಿತೆಯರು ನನ್ನೊಂದಿಗೆ ಸಂಬಂಧ ಬೆಳೆಸುವಂತೆ ಹುಡುಗನೊಬ್ಬನಿಗೆ ಬೆಟ್ಟಿಂಗ್ ಮಾಡಿದ್ದರು. ಇದೊಂದು ಸಿನಿಮಾ ಶೈಲಿಯಲ್ಲಿತ್ತು. ನಂತರ ಅದು ನಿಜವಾದ ಪ್ರೀತಿಗೆ ತಿರುಗಿತ್ತು. ಆದರೆ, ಕೊನೆಯಲ್ಲಿ ಬೆಟ್ಟಿಂಗ್ನಲ್ಲಿ ಗೆಲ್ಲುವ ಉದ್ದೇಶದಿಂದ ಸಂಬಂಧ ಬೆಳೆಸಿದೆ ಎಂದು ಹೇಳುವ ಮೂಲಕ ಹುಡುಗ ಪ್ರೀತಿಗೆ ಕೊನೆಯಾಡಿದ. ಈ ವೇಳೆ ನಾನು ಖಿನ್ನತೆಗೆ ಒಳಗಾದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ,ಆ ಕ್ಷಣ ನಾನು ಹೃದಯಾಘಾತಕ್ಕೆ ಒಳಗಾದೆ ಎಂದು ಶಿಲ್ಪಾ ಹೇಳಿದ್ದಾರೆ.

ಆಗೋದೆಲ್ಲ ಒಳ್ಳೆಯದಕ್ಕೆ ಎಂಬಂತೆ ಕೊನೆಯಲ್ಲಿ ರಾಜ್ ಕುಂದ್ರಾ ನನ್ನ ಬಾಳಿನಲ್ಲಿ ಬಂದರು. ಕುಂದ್ರಾ ಜತೆಗಿನ ಪ್ರೀತಿ ಆರಂಭವಾದ ಬಗ್ಗೆ ತಿಳಿಸಿದ ಶಿಲ್ಪಾ, ಕುಂದ್ರಾ ಅವರು ಲಂಡನ್ನಿಂದ ಮುಂಬೈಗೆ ಪ್ರಯಾಣ ಬೆಳಸಿದಾಗಲೆಲ್ಲ ನನಗಾಗಿ ಕೆಲವು ವಸ್ತುಗಳನ್ನು ನೀಡುತ್ತಿದ್ದರು. ಮೊದಲ ದಿನ ಬಣ್ಣಬಣ್ಣದ ಬ್ಯಾಗ್ ಒಂದನ್ನು ಕಳುಹಿಸಿದರು. ಅದರ ಮುಂದಿನ ದಿನ ಮತ್ತೊಂದು ಬ್ಯಾಗ್ ಕಳುಹಿಸಿಕೊಡುತ್ತಿದ್ದರಂತೆ.

ಈ ವೇಳೆ ಕುಂದ್ರಾ ಪ್ರೀತಿಸುತ್ತಿದ್ದಾರೆ ಅನ್ನುವದು ಸತ್ಯ ಗೊತ್ತಾದ ತಕ್ಷಣ, ಮತ್ತೊಮ್ಮೆ ಪ್ರೀತಿಯಲ್ಲಿ ಸಿಲುಕಿ ವಿಚಲಿತರಾಗಲು ಶಿಲ್ಪಾ ಅವರಿಗೆ ಇಷ್ಟವಿರಲಿಲ್ಲ. ತಕ್ಷಣವೇ ಕುಂದ್ರಾ ಅವರಿಗೆ ಫೋನ್ ಮಾಡಿದ ಶಿಲ್ಪಾ, ನಮ್ಮಿಬ್ಬರ ನಡುವೆ ಏನು ಸಂಭವಿಸಿಲ್ಲ. ನನಗೆ ಮುಂಬೈನಿಂದ ಲಂಡನ್ ಗೆ  ಸ್ಥಳಾಂತರಗೊಳ್ಳುವ ಆಸಕ್ತಿಯಿಲ್ಲ ಅಂದರಂತೆ. ಆದರೆ, ನಿಮಗೆ ಇಷ್ಟ ಬಂದ ಕಡೆ ನೆಲೆಸೋಣ ಎಂದು ಹೇಳಿ ಕುಂದ್ರಾ ಅವರು ಮುಂಬೈನ ವಿಳಾಸ ನೀಡಿ ಭೇಟಿಯಾಗುವಂತೆ ಕೇಳಿಕೊಂಡಿದ್ದರು. ಅಂದು ನಮ್ಮ ಮೊದಲು ಡೇಟಿಂಗ್ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: