ಈ ಬಾರಿ ಭಾರತದ ನೆಲ್ಲದಲ್ಲೇ ನಿಂತು ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ Youtube ಖಾತೆಗಳನ್ನು ಟಾರ್ಗೇಟ್ ಮಾಡಲಾಗಿದೆ
ನವದೆಹಲಿ : ದೇಶ ವಿರೋಧಿ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ 8 ಯೂ ಟ್ಯೂಬ್ ( Youtube) ಮತ್ತು 1 ಫೇಸ್ ಬುಕ್ ಖಾತೆಗಳನ್ನು ರದ್ದು ಮಾಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ. ಈ ಪೈಕಿ 7 ಯೂ ಟ್ಯೂಬ್ ಚಾನೆಲ್ ಭಾರತದ ನೆಲದಿಂದ ಕಾರ್ಯಾಚರಿಸುತ್ತಿತ್ತು. ಒಂದು ಪಾಕಿಸ್ತಾನಕ್ಕೆ ಸೇರಿದ ಯೂಟ್ಯೂಬ್ ಆಗಿದೆ.
ಈ ಎಲ್ಲಾ ಯೂಟ್ಯೂಬ್ ಚಾನೆಲ್ ಗಳು ದೇಶದ ಸಾಮರಸ್ಯ ಕೆಡಿಸುವ ಕೆಲಸವನ್ನು ಮಾಡುತ್ತಿತ್ತು. ಧರ್ಮಗಳ ನಡುವೆ ವಿಷಯ ಬೀಜ ಬಿತ್ತುವ ಕೆಲಸ ಮಾಡುತ್ತಿತ್ತು. ಅಷ್ಟೇ ಅಲ್ಲದೆ ದಾರಿ ತಪ್ಪಿಸುವ ಕೆಲಸವನ್ನು ಈ ವಾಹಿನಿಗಳು ಮಾಡುತ್ತಿತ್ತು.
ಭಾರತ ಸರ್ಕಾರ ಧಾರ್ಮಿಕ ಕಟ್ಟಡ ಉರುಳಿಸಲು ಆದೇಶಿಸಿದೆ, ಭಾರತದಲ್ಲಿ ಧಾರ್ಮಿಕ ಯುದ್ದಕ್ಕೆ ಕರೆ ಹೀಗೆ ವಿವಿಧ ಹೆಡ್ ಲೈನ್ ಗಳನ್ನು ಕೊಟ್ಟು ದೇಶದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಈ ವಾಹಿನಿಗಳನ್ನು ಮಾಡುತ್ತಿತ್ತು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.
ಇನ್ನು ಈ ವಾಹಿನಿಗಳು ಜನಾಕರ್ಷಣೆ ಪಡೆಯುವ ನಿಟ್ಟಿನಲ್ಲಿ ಸುದ್ದಿ ವಾಹಿನಿಗಳ ಸುದ್ದಿವಾಚಕರ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿತ್ತು ಅನ್ನುವುದು ಗೊತ್ತಾಗಿದೆ.
Discussion about this post