ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ತಳಮಟ್ಟದ ಅನೇಕ ಕಾರ್ಯಕರ್ತರು ಪಕ್ಷದ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಅಧಿಕಾರ ಸ್ಥಾನದಲ್ಲಿ ಕೂತ ಯಾರೊಬ್ಬರಿಗೂ ನೆಟ್ಟಾರು ಸಾವಿನ ಬಿಸಿ ತಟ್ಟಿಲ್ಲ.(Nalin kumar kateel) ಈ ನಡುವೆ ಕಾರ್ಯಕರ್ತರ ಮನವೊಲಿಕೆ ನಾಯಕರು ಮುಂದಾಗಿದ್ದಾರೆ
ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ ನಾಯಕರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. (Nalin kumar kateel)ನಮ್ಮ ಆಕ್ರೋಶ ಪಕ್ಷದ ವಿರುದ್ಧವಲ್ಲ, ಕೆಲವೇ ಕೆಲವು ನಾಯಕರ ನಡವಳಿಕೆ ವಿರುದ್ಧ. ನಮ್ಮ ಆಕ್ರೋಶ ಈ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಎಂದು ಸ್ಪಷ್ಟ ಪಡಿಸಿರುವ ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದಾರೆ.
ಈ ನಡುವೆ ಕರ್ನಾಟಕದಲ್ಲಿ ಪ್ರಾರಂಭವಾಗಿರುವ ರಾಜೀನಾಮೆ ಪರ್ವದ ಸುದ್ದಿ ದೆಹಲಿಗೂ ತಲುಪಿದ್ದು, ಕಾರ್ಯಕರ್ತರ ಆಕ್ರೋಶದ ಪರಿ ಕಂಡು ಹೈಕಮಾಂಡ್ ಕೂಡಾ ಗಾಬರಿಯಾಗಿದೆ. ಚುನಾವಣಾ ವರ್ಷದಲ್ಲಿ ರಾಜ್ಯ ನಾಯಕರು ಮಾಡಿಕೊಂಡ ಎಡವಟ್ಟಿನ ಬಗ್ಗೆ ಡೆಲ್ಲಿ ನಾಯಕರು ಕಿಡಿ ಕಾರಿದ್ದಾರೆ. ಜೊತೆಗೆ ತಕ್ಷಣ ಕಾರ್ಯಕರ್ತರ ಮನವೊಲಿಸಿ ಅಂದಿದ್ದಾರೆ.(Nalin kumar kateel)
ಇದನ್ನೂ ಓದಿ : ra ra rakkamma : ರಾ ರಾ ರಕ್ಕಮ್ಮ ತಂದಿಟ್ಲು ಸಂಕಷ್ಟ
ದೆಹಲಿಯ ಸೂಚನೆ ಹಿನ್ನಲೆಯಲ್ಲಿ ಕಾರ್ಯಕರ್ತರ ಮನವೊಲಿಕೆ ಪ್ರಾರಂಭಗೊಂಡಿದೆ. ಆದರೆ ನಾಯಕರ ಮನವೊಲಿಕೆಗೆ ತಂತ್ರಗಳು ಫಲ ನೀಡುವ ಲಕ್ಷಣಗಳಿಲ್ಲ. ಮೊದಲು ಪಕ್ಷಕ್ಕಾಗಿ ಪ್ರಾಣ ತೆತ್ತವರಿಗೆ ನ್ಯಾಯ ಕೊಡಿಸಿ ಆಮೇಲೆ ಉಳಿದ ಮಾತು ಅಂದಿದ್ದಾರೆ.
ಕರಾವಳಿಯಲ್ಲಿ ಇದಕ್ಕಿಂತ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ.ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರ ವೇಳೆ ನಡೆದ ಲಾಠಿ ಜಾರ್ಜ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳ ಅಥವಾ ಗೃಹ ಸಚಿವರ ಸೂಚನೆ ಇಲ್ಲದೆ ಲಾಠಿ ಜಾರ್ಜ್ ನಡೆದಿದ್ದು ಹೇಗೆ, ಕಾಸರಗೋಡಿನ ಹಿರಿಯ ನಾಯಕನನ್ನು ಬಿಡದೆ ಬಾಸುಂಡೆ ಬರುವಂತೆ ಬಾರಿಸಿದ್ದು ಯಾವ ನ್ಯಾಯ ಅನ್ನುವುದು ಇವರ ಪ್ರಶ್ನೆ.
ಇದನ್ನೂ ಓದಿ : Vinay guruji : ಟ್ರೋಲ್ ಪೇಜ್ ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ವಿನಯ್ ಗುರೂಜಿ
ಈ ನಡುವೆ ಸಂಸದ ನಳಿನ್ ಕುಮಾರ್ ಅವರು ಈ ಹಿಂದೆ ಕೊಟ್ಟ ಹೇಳಿಕೆಗಳ ವಿಡಿಯೋ ವೈರಲ್ ಆಗಲಾರಂಭಿಸಿದೆ. ಇದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಇಡೀ ಜಿಲ್ಲೆಯ ಬಿಜೆಪಿಯನ್ನು ನಳಿನ್ ನಿಯಂತ್ರಿಸುತ್ತಿದ್ದಾರೆ. ಶಾಸಕರು ಕೂಡಾ ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರ ಮಾತಿಗೆ ಬೆಲೆ ಇಲ್ಲದಂತಾಗಿದೆ ಅನ್ನುವ ಆಕ್ರೋಶ ವ್ಯಕ್ತವಾಗಿದೆ.

2024ಕ ಲೋಕಸಭಾ ಚುನಾವಣೆಯಲ್ಲಿ ನಳಿನ್ ಗೆ ಟಿಕೆಟ್ ಕೊಡುವುದಿಲ್ಲ ಅನ್ನುವ ಭರವಸೆ ಕೊಡಿ, ನಾವು ನಮ್ಮ ರಾಜೀನಾಮೆ ಹಿಂಪಡೆದು 2023ರ ಚುನಾವಣೆಗೆ ದುಡಿಯುತ್ತೇವೆ ಅನ್ನುವ ಮಾತನ್ನು ಕಡ್ಡಿ ತುಂಡು ಮಾಡಿದಂತೆ ಆಡಿದ್ದಾರೆ. ನಳಿನ್ ಅವರನ್ನೇ ಮತ್ತೆ ನೀವು ಚುನಾವಣೆಗೆ ನಿಲ್ಲಿಸುವುದಾದರೆ ಮಾತುಕತೆ ಬೇಡ ಅನ್ನುವುದು ಕೆಲ ಕಾರ್ಯಕರ್ತರ ಅಭಿಪ್ರಾಯ.
ಪರಿಸ್ಥಿತಿ ಗಮನಿಸಿದರೆ ಕಳೆದ ಬಾರಿಯಂತೆ ಈ ಬಾರಿಯೂ ನಳಿನ್ ಹಠಾವೋ ಅಂದೋಲನ ಅಬ್ಬರಿಸಿದರೂ ಅಚ್ಚರಿ ಇಲ್ಲ.
Discussion about this post