ಕಾಂಗ್ರೆಸ್ ಸೋಲಿಗೆ ಈ ರಾಹುಲ್ ಗಾಂಧಿ ನೀಡುತ್ತಿರುವ ಹೇಳಿಕೆಗಳೇ ಸಾಕು. ಇದೀಗ ಬ್ರಿಟನ್ ನಲ್ಲಿ ಕೂತು ಭಾರತರದ ಸ್ಥಿತಿ ಸರಿಯಿಲ್ಲ ಅಂದಿದ್ದಾರೆ.
ಲಂಡನ್ : ಇಡೀ ದೇಶದಲ್ಲಿ ಸೀಮೆಎಣ್ಣೆ ಚೆಲ್ಲಿದೆ. ಒಂದೇ ಒಂದು ಕಿಡಿ ಬಿದ್ದರೂ ಸಾಕು ಬೆಂಕಿ ಹತ್ತಿಕೊಳ್ಳುತ್ತದೆ. ಭಾರತದ ಸ್ಥಿತಿ ಈಗ ಸರಿಯಿಲ್ಲ, ಪ್ರಧಾನಿ ನರೇಂದ್ರ ಮೋದಿ ಯಾರ ಮಾತು ಕೇಳುವುದಿಲ್ಲ. ಇದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹೇಳಿಕೆ. ಹಾಗಂತ ಈ ಹೇಳಿಕೆಯನ್ನು ಭಾರತದಲ್ಲಿ ಹೇಳಿದ್ದರೂ ಪರವಾಗಿರಲಿಲ್ಲ. ಆದರೆ ಈ ಹೇಳಿಕೆ ಕೊಟ್ಟಿರುವುದು ಲಂಡನ್ ನೆಲದಲ್ಲಿ.
ಲಂಡನ್ ನಲ್ಲಿ ಆಯೋಜಿಸಿದ್ದ ಐಡಿಯಾಸ್ ಫಾರ್ ಇಂಡಿಯಾ ಅನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, RSS ನವರು ಭಾರತವನ್ನು ಚಿನ್ನದ ಹಕ್ಕಿ ಅಂತಾ ತಿಳಿದಿದ್ದಾರೆ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿದೇಶಿ ನೆಲದಲ್ಲಿ ಭಾರತಕ್ಕೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ಸಿಪಿಎಂನ ಸೀತಾರಾಂ ಯಚೂರಿ, RJDಯ ತೇಜಸ್ವಿ ಯಾದವ್, ಮತ್ತು ಟಿಎಂಸಿಯ ಮೊಹುವಾ ಮೊಯಿತ್ರಾ ಪಾಲ್ಗೊಂಡಿದ್ದರು.
ರಾಹುಲ್ ಗಾಂಧಿ ಹೇಳಿದ್ದೇನು…?
- ಪ್ರಧಾನಿ ನರೇಂದ್ರ ಮೋದಿ ಯಾರ ಮಾತನ್ನೂ ಕೇಳುವುದಿಲ್ಲ
- ಬಿಜೆಪಿ ಜೋರಾಗಿ ಕಿರುಚಿ ಬೇರೆಯವರ ಬಾಯಿ ಮುಚ್ಚಿಸುತ್ತದೆ
- ಭಾರತ ಮತ್ತು ಉಕ್ರೇನ್ ಗೆ ಸಾಕಷ್ಟು ಸಾಮ್ಯತೆಯಿದೆ.
- ಭಾರತದಲ್ಲಿ ಲಡಾಖ್ ಮತ್ತು ಡೋಕ್ಲಾಂನಲ್ಲಿ ಚೀನಾ ಸೇನೆ ಬಂದು ನೆಲೆಸಿದ್ದು, ಅರುಣಾಚಲ ಪ್ರದೇಶದ ಜಿಲ್ಲೆಗಳು ತನ್ನದು ಅನ್ನುತ್ತಿದೆ.
Discussion about this post