ಜೀವನೋಪಾಯಕ್ಕಾಗಿ ಒಂದು ಸಮಯದಲ್ಲಿ ಚಹಾ ಮಾರುತ್ತಿದ್ದ ಬಿಜೆಪಿ ಕಾರ್ಪೋರೇಟರ್ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದಾರೆ. ಸಿಂಗ್ ಈ ಸ್ಥಾನಕ್ಕೇರಿದ ಮೊದಲ ದಲಿತ ಸಿಖ್ ನಾಯಕರಾಗಿದ್ದಾರೆ.
ದಲಿತ ಸಿಖ್ ಸಮುದಾಯಕ್ಕೆ ಸೇರಿದ ಬಿಜೆಪಿ ಕಾರ್ಪೋರೇಟರ್ ಅವತಾರ್ ಸಿಂಗ್ ಮೇಯರ್ ಹುದ್ದೆಗೆ ಏರಿದ ಅಪರೂಪದ ಘಟನೆಯಾಗಿದೆ. ಉತ್ತರ ದೆಹಲಿಯ ಮೇಯರ್ ಸ್ಥಾನಕ್ಕೆ ಅವತಾರ್ ಸಿಂಗ್ ಅವರ ಹೆಸರನ್ನು ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸೂಚಿಸಿದ್ದರು.
ಮೇಯರ್ ಹುದ್ದೆ ಕಾಲಾವಧಿ ಒಂದು ವರ್ಷ ಆಗಿದ್ದು, ಈ ಅವಧಿಯಲ್ಲಿ ಮೇಯರ್ ಹುದ್ದೆ ಹಿಂದುಳಿದ ಜನಾಂಗಕ್ಕೆ ಮೀಸಲಿರಿಸಿದ್ದ ಕಾರಣ ಅವತಾರ್ ಸಿಂಗ್ಗೆ ಅವಕಾಶ ಒಲಿದುಬಂದಿದೆ ಎನ್ನಲಾಗುತ್ತಿದೆ.
ಮಾಹಿತಿ ಪ್ರಕಾರ ಕಾರ್ಪೋರೇಟರ್ ಅವತಾರ್ ಸಿಂಗ್ ಡೆಲ್ಲಿಯ ಪಂಚತಾರ ಹೋಟೆಲ್ ಒಂದರಲ್ಲಿ 1989 ರಿಂದ 91 ರ ತನಕ ಬೆಲ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ನಂತ್ರ ಆ ಕೆಲಸಕ್ಕೆ ಗುಡ್ ಬೈ ಹೇಳಿ ದೆಹಲಿಯಲ್ಲೇ ಚಿಕ್ಕದೊಂದು ಟೀ ಶಾಪ್ ತೆರೆದಿದ್ದರು.
Discussion about this post