ಹಕ್ಕಿ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕ ದೆಹಲಿಯಲ್ಲಿ ಮಂಗಳವಾರ ಮೃತಪಟ್ಟಿದ್ದಾನೆ. ದೇಶದಲ್ಲಿ ಹಕ್ಕಿ ಜ್ವರದಿಂದ ಈ ವರ್ಷ ಉಂಟಾದ ಮೊದಲ ಸಾವು ಇದಾಗಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ಜುಲೈ 2ರಂದು 11 ವರ್ಷದ ಬಾಲಕನನ್ನು ದಾಖಲು ಮಾಡಲಾಗಿತ್ತು.
![chicken far4](https://torrentspree.com/wp-content/uploads/2021/07/chicken-far4.png)
ಇದೀಗ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿಯ ಎಮ್ಸ್ ನ ಎಲ್ಲಾ ಸಿಬ್ಬಂದಿಗಳನ್ನು ಐಸೋಲೇಷನ್ ಗೆ ಒಳಪಡಿಸಲಾಗಿದೆ. ಇದರಲ್ಲಿ ವೈದ್ಯರು, ದಾದಿಯರು ಸೇರಿದ್ದಾರೆ. ಅವರಲ್ಲಿ ಹಕ್ಕಿ ಜ್ವರದ ಯಾವುದಾದರೂ ಲಕ್ಷಣ ಕಾಣಿಸಿಕೊಂಡರೆ ಅವರಿಗೂ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
![chicken far3](https://torrentspree.com/wp-content/uploads/2021/07/chicken-far3.png)
ಇನ್ನು ಈ ಕುರಿತಂತೆ ಮಾತನಾಡಿರುವ ಎಮ್ಸ್ ವೈದ್ಯರೊಬ್ಬರು ಬಾಲಕ ಲ್ಯುಕೋಮಿಯಾ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಅಂದಿದ್ದಾರೆ. ಹಕ್ಕಿ ಜ್ವರದ ವೈರಸ್ ಹಕ್ಕಿಗಳಲ್ಲಿ, ಕೋಳಿಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮನುಷ್ಯರಿಗೆ ತಗುಲುದು ಬಲು ಅಪರೂಪ. ಒಂದು ವೇಳೆ ತಗುಲಿದರೆ ಸಾವಿನ ಸಾಧ್ಯತೆ ಶೇ 60ರಷ್ಟು ಎನ್ನಲಾಗಿದೆ.
![chicken far2](https://torrentspree.com/wp-content/uploads/2021/07/chicken-far2.png)
ಪ್ರತೀ ವರ್ಷದ ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣಗಳಲ್ಲಿ ಈ ಪ್ರಕರಣ ಅತೀ ಹೆಚ್ಚು ಎನ್ನಲಾಗಿದೆ.
Discussion about this post