OTTಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ (BIGG BOSS KANNADA) ಕಾರ್ಯಕ್ರಮ ಪ್ರಾರಂಭವಾಗಿದ್ದು, ಸ್ಪರ್ಧಿಗಳು ಈಗಾಗಲೇ ಇನ್ನೋವೆಟಿವ್ ಫಿಲ್ಮಂ ಸಿಟಿ ಸೇರಿಕೊಂಡಿದ್ದಾರೆ
ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ನ (BIGG BOSS KANNADA ) OTT ಆವೃತಿಗೆ ಚಾಲನೆ ದೊರೆತಿದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ OTT ಸೀಸನ್ ನಡೆಯುತ್ತಿದ್ದು, ಬಿಗ್ ಬಾಸ್ ಮುಖ್ಯ ಕಾರ್ಯಕ್ರಮಕ್ಕೆ ಯಾವುದೇ ಕಡಿಮೆ ಇಲ್ಲದಂತೆ ನಿರ್ಮಿಸಲಾಗುತ್ತಿದೆ. ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ ಅನ್ನುವುದನ್ನು ಬಿಟ್ರೆ ಮತ್ತೆಲ್ಲವೂ ಕೂಡಾ ಅದೇ ಬಿಗ್ ಬಾಸ್ ಖದರ್.
ಇನ್ನು OTT BIGG BOSS KANNADA ಆವೃತ್ತಿಗೆ ಸೆಲೆಬ್ರೆಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕಾಮನ್ ಮ್ಯಾನ್ ಗಳಿಗೆ ಪ್ರವೇಶ ನೀಡಲಾಗಿಲ್ಲ. ಸೆಲೆಬ್ರೆಟಿಗಳಿದ್ದರೆ ವೀಕ್ಷಕರನ್ನು ಸೆಳೆಯೋದು ಸುಲಭ ಹೀಗಾಗಿ ಚಿತ್ರರಂಗ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರದ ಮಂದಿಯನ್ನು ಮನೆಗೆ ಕರೆಸಿಕೊಳ್ಳಲಾಗಿದೆ.
ಇದನ್ನು ಓದಿ : Araga jnanendra amit shah : ನಿಮಗೆ ಆಗೋದಿಲ್ಲ ಅಂದ್ರೆ ಹೇಳಿ : ಆರಗ ಜ್ಞಾನೇಂದ್ರಗೆ ಅಮಿತ್ ಶಾ ಕ್ಲಾಸ್
ಇನ್ನು ಪತ್ರಕರ್ತ ಖೋಟಾದಿಂದ ನ್ಯೂಸ್ ಫಸ್ಟ್ ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ(Somanna Machimada) ಮನೆ ಪ್ರವೇಶಿಸಲಿದ್ದಾರೆ. ಕೊಡಗು ಮೂಲಕ ಸೋಮಣ್ಣ ಮೈಸೂರಿನಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದ್ದರು. ಬಳಿಕ ಟಿವಿ9 ಸೇರಿದ ಅವರು ಇದೀಗ ನ್ಯೂಸ್ ಫಸ್ಟ್ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Discussion about this post