ಅರ್ಜುನ್ ರಾಜಕೀಯ ನಾಯಕನಾಗಿ ಬೆಳೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿ, ಅವರ ದರ್ಪ ಡಿಕ್ಟೆಟರ್ ಶಿಪ್ ನೋಡಿದ್ರೆ He is fit to it ( Bigg Boss Kannada Ott)
Bigg Boss Kannada Ott ಸೀಸನ್ ಈಗ ಕಲರ್ ಪುಲ್ ಆಗ ತೊಡಗಿದೆ. ವಾರ ಎರಡಾಗುತ್ತಿದ್ದಂತೆ ಸ್ಪರ್ಧಿಗಳ ಮುಖವಾಡ ಕಳಚಿ ಬೀಳಲಾರಂಭಿಸಿದೆ. ಸಭ್ಯರಂತೆ ಕಾಣಿಸಿಕೊಂಡವರೆಲ್ಲಾ ಹೇಗೆ ಅನ್ನುವುದು ಗೊತ್ತಾಗುತ್ತಿದೆ. ಹೊರಗಡೆನೂ ಹೀಗೆ ಒಳಗಡೆಯೂ ಹಾಗೇ ಅಂದವರು, ನಾನು ಅದಲ್ಲ ಅನ್ನುವುದನ್ನು ಸಾಬೀತು ಮಾಡುತ್ತಿದೆ. ಅದರಲ್ಲಿ ಮೊದಲ ಹೆಸರು ಅರ್ಜುನ್.
ಎಲ್ಲವನ್ನು ಬಲ್ಲವರಂತೆ ಮನೆಗೆ ಬಂದ ಅರ್ಜುನ್, ನೇರ ನಡೆ ನುಡಿಗಳ ಮೂಲಕ ಗಮನ ಸೆಳೆದಿದ್ದರು. ಇಬ್ಬರು ಹೆಂಡಿರ ಮುದ್ದಿನ ಗಂಡ ಅನ್ನುವುದನ್ನು ಬಹಿರಂಗವಾಗಿ ಹೇಳುವ ಮೂಲಕ ಎದೆಗಾರಿಕೆ ತೋರಿದ್ದರು. ಆ ಮಟ್ಟಿಗೆ ಅರ್ಜುನ್ ಇಷ್ಟವಾಗಿದ್ದರು. ಅವರ ಕ್ರೀಡಾ ಮನೋಭಾವನೆ ಇಷ್ಟವಾಗಿತ್ತು.
ಇದನ್ನು ಓದಿ : shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ
ಆದರೆ ದಿನ ಕಳೆದಂತೆ ಅದು ಅರ್ಜುನ್ ಅಲ್ಲ ಅನ್ನುವುದು ಭಾಸವಾಗುತ್ತಿದೆ. ಅದರಲ್ಲೂ ಕ್ಯಾಪ್ಟನ್ ಆದ ಮೇಲೆ, ಓಟು ಪಡೆದು ಗೆದ್ದ ಮೇಲೆ ವರ್ತಿಸುವ ರಾಜಕಾರಣಿಯಂತೆ ಗೋಚರಿಸುತ್ತಿದ್ದಾರೆ.
ಕ್ಯಾಪ್ಟನ್ ಆದ ಬೆನ್ನಲ್ಲೇ ಸಹ ಸ್ಪರ್ಧಿ ಕಿರಣ್ ಅವರಿಗೆ ಬೆಡ್ ರೂಮ್ ವಿಚಾರದಲ್ಲಿ ಕೊಟ್ಟ ಎಚ್ಚರಿಕೆಯನ್ನು ಗಮನಿಸಿದರೆ ನಾಯಕನಾದ್ರೆ ಮೇಲೆ ಬದಲಾಗುವ ಗುಣ ಇರೋದು ರಾಜಕಾರಣಿಗೆ ಮಾತ್ರ ಅನ್ನುವುದು ಸ್ಪಷ್ಟವಾಗಿದೆ.
ಈ ನಡುವೆ ಚಪಾತಿ ಎಸೆದ ವಿಷಯಕ್ಕೆ ಸಂಬಂಧಿಸಿದಂತೆ ರೂಪೇಶ್ ಮೇಲೆ ಅರ್ಜುನ್ ಎಗರಾಡಿದ್ದಾರೆ. ನನಗೆ ತಿನ್ನಲು ಸಾಧ್ಯವಾಗಿಲ್ಲ ಹೀಗಾಗಿ ಎಸೆದೆ ಅನ್ನುವ ಪ್ರಾಮಾಣಿಕ ಉತ್ತರವನ್ನು ರೂಪೇಶ್ ಕೊಟ್ಟಿದ್ದಾರೆ. ನಾಯಕನಾದವನು ಕನಿಷ್ಟ ಪಕ್ಷ ಯಾಕೆ ಎನಾಗಿತ್ತು ಅನ್ನಬಹುದಿತ್ತು, ನಾನು ಅದನ್ನೇ ತಿಂದೆ ತಾನೇ ಎಂದು ಪ್ರಶ್ನಿಸಿಬಹುದಿತ್ತು, ಉಳಿದವರು ಅದನ್ನೇ ತಿಂದಿಲ್ವಾ ಅಂತ ಕೇಳಬಹುದಿತ್ತು. ಅದ್ಯಾವುದನ್ನು ಮಾಡದೆ ಹೊರಗಡೆ ಅದೆಷ್ಟೋ ಜನ ಊಟ ಇಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಮತ ಗಳಿಸುವ ಮಾತುಗಳನ್ನಾಡಿದ್ದಾರೆ. ಈ ಡೈಲಾಗ್ ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ಅರ್ಜುನ್ ಹಾಗೂ ರೂಪೇಶ್ ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ.
ಟೀ ನರಸೀಪುರದಲ್ಲಿ ಬಿಜೆಪಿಯಿಂದ ಗೆದ್ದು ಪುರಸಭಾ ಸದಸ್ಯರಾಗಿರುವ ಅರ್ಜುನ್ ಸಮಾಜಮುಖಿ ಕೆಲಸಗಳ ಮುಖ ಗುರುತಿಸಿಕೊಂಡಿದ್ದರು. ಹೆಣ್ಣು ಮಕ್ಕಳ ಶಾಲೆಯೊಂದಕ್ಕೆ ಶೌಚಾಲಯ ಕಟ್ಟಿ ಕೊಟ್ಟ ಕೆಲಸ ಗಮನ ಸೆಳೆದಿತ್ತು.
Discussion about this post