ಭಾರತದಲ್ಲಿ ಶಾಂತಿ ಕದಡಲು ಭಾರತದಲ್ಲೇ ಪ್ರಯತ್ನಗಳು ನಡೆಯುತ್ತಿದೆ. ಕೆಲ ದೇಶ ದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಮತ್ತೊಂದು ಕಡೆ ಇದಕ್ಕೆ ವಿದೇಶಿ ರಾಷ್ಟ್ರಗಳು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ.
ನವದೆಹಲಿ : ಭಾರತದ ಅಲ್ಲಲ್ಲಿ ನಡೆದಿರುವ ಕೋಮು ಸಂಘರ್ಷಗಳನ್ನು ದೊಡ್ಡದು ಮಾಡಿ ಭಾರತದ ಹೆಸರಿಗೆ ಮಸಿ ಬಳಿಯುವ ಕೆಲಸವೊಂದು ಸದ್ದಿಲ್ಲದೆ ಪ್ರಾರಂಭವಾಗಿದೆ. ಭಾರತದಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸಿ ದೇಶದಲ್ಲಿ ಕೋಮು ಸಾಮರಸ್ಯ ಕೆಡಿಸುವ ಅಭಿಯಾನ ಜಾಲತಾಣದಲ್ಲಿ ನಡೆಯುತ್ತಿದೆ.
ಪ್ರಮುಖವಾಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಟರ್ಕಿ ದೇಶಗಳಲ್ಲಿ #Indianmuslimunderattack ಅನ್ನುವ ಹ್ಯಾಶ್ ಟ್ಯಾಗ್ ನಡಿ ಸಾವಿರಾರು ಟ್ವೀಟ್ ಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಭದ್ರತಾ ಸಂಸ್ಥೆಗಳು ನಿಗಾವಹಿಸಿದ್ದು, ವಿದೇಶದಲ್ಲಿ ಕುಳಿತು ಭಾರತದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಿಂಬಿಸುವ ಕೆಲಸವಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದೆ.
ಜನರಲ್ಲಿ ಕೋಮುಪ್ರಚೋದನೆ ಉಂಟು ಮಾಡುವ ಫೋಟೋಗಳನ್ನು ಈ ಟ್ವೀಟ್ ಗಳಿಗೆ ಬಳಸಲಾಗಿದ್ದು, ಉರ್ದು ಟಿಪ್ಪಣಿ ಬರೆಯಲಾಗಿರುವ ಟ್ವೀಟ್ ಗಳನ್ನು ಪಾಕಿಸ್ತಾನ, ಆಫ್ಘಾನಿಸ್ತಾನದಿಂದ ಮಾಡಲಾಗಿದೆ. ಇನ್ನು ಟರ್ಕಿಯೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಭಾರತವನ್ನು ಮುಸಲ್ಮಾನ ವಿರೋಧಿ ಎಂದು ಬಿಂಬಿಸುವ ಕೆಲಸ ಈ ದೇಶದಲ್ಲೂ ಸಾಕಷ್ಟು ನಡೆದಿದೆ.
ಮತ್ತೊಂದು ಕಡೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಎಂ.ಎಸ್. ಸಾಜಿದ್ ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಹೀಗಾಗಿ ಮುಸ್ಲಿಮರು ಸ್ವಯಂ ರಕ್ಷಣೆಗೆ ಸಿದ್ದರಾಗಿ ಎಂದು ಕರೆ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ ನಡೆಸಲಾಗುತ್ತಿದೆ. ಹೀಗಾಗಿ ಮುಸ್ಲಿಮರು ತಮ್ಮ ಸಮುದಾಯವನನು ರಕ್ಷಿಸಿಕೊಳ್ಳಲು ಸಿದ್ದರಾಗಬೇಕು ಅಂದಿದ್ದಾರೆ.
Discussion about this post