ರೆಸಿಪಿ : ಕುಸುಮಾ ಸತೀಶ್
ಬಿಟ್ರೋಟ್ ಕ್ಯಾರೆಟ್ ಪಲ್ಯವನ್ನ ಎಲ್ಲರೂ ಮಾಡ್ತಾರೆ. ಇವತ್ತು ಹೊಸ ರೀತಿಯ ಬಿಟ್ರೋಟ್ ಕ್ಯಾರೇಟ್ ಪಲ್ಯ ಓದುಗರಿಗಾಗಿ.
ಬೇಕಾದ ಸಾಮಗ್ರಿಗಳು
• ಬಿಟ್ರೋಟ್ ಮತ್ತು ಕ್ಯಾರೆಟ್ ತಲಾ 300ಗ್ರಾಂ
• ಟೊಮೇಟೋ
ಒಂದು ದೊಡ್ದದು
• ಈರುಳ್ಳಿ
ಒಂದು ದೊಡ್ಡದು
• ಹಸಿಮೆಣಸಿನಕಾಯಿ
ಒಂದು ಅಥವಾ ಎರಡು
• ಶುಂಠಿ
ಅರ್ಧ ಇಂಚು ತುರಿದದ್ದು
• ಕಾಯಿತುರಿ
ಅರ್ಧ ಬಟ್ಟಲು
• ಕೊತ್ತಂಬರಿ
ಸೊಪ್ಪು ಎರಡು ಚಮಚ
• ಒಗ್ಗರಣೆಗೆ
ಎಣ್ಣೆ, ಜೀರಿಗೆ ಸಾಸಿವೆ, ಅರಿಶಿನ
• ಅಚ್ಚ ಖಾರದ ಪುಡಿ ಒಂದು ಚಮಚ (ಸಿಹಿ ತರಕಾರಿ ಆದ್ದರಿಂದ ಬೇಕಾದಲ್ಲಿ ಹೆಚ್ಚು )
• ನಿಂಬೆ
ರಸ ಒಂದು ಚಮಚ
ಮಾಡುವ ವಿಧಾನ
1. ಬಿಟ್ರೋಟ್ ಮತ್ತು ಕ್ಯಾರೆಟ್ ಅನ್ನು ಸಣ್ಣದಾಗಿ ಕತ್ತರಿಸಿ ಕೊಳ್ಳಿ (ತುಂಬಾ ಸಣ್ಣದಾಗಿ ಬೇಡ)
2. ಸಮಯವಿಲ್ಲದಿದ್ದಲ್ಲಿ ಕುಕ್ಕರ್ ನಲ್ಲಿ ಬೇಕಿದ್ದರೇ ಬೀಯಿಸಿಟ್ಟು ಕೊಳ್ಳಬಹುದು
3. ಟೋಮ್ಯಾಟೋ , ಈರುಳ್ಳಿ , ಹಸಿಮೆಣಸಿನಕಾಯಿ ಹೆಚ್ಚಿಕೊಳ್ಳಿ
4. ಪ್ಯಾನ್ ಗೆ ಎಣ್ಣೇ ಹಾಕಿ ಅರಿಶಿನ , ಜೀರಿಗೆ, ಸಾಸಿವೆ, ಒಗ್ಗರಣೆ ಮಾಡಿ
5. ಇದಕ್ಕೆ ಮೊದಲು ಹಸಿಮೆಣಸಿನಕಾಯಿ ಹಾಕಿ ನಂತರ ಟೋಮ್ಯಾಟೋ, ಈರುಳ್ಳಿ ಹೋಳುಗಳನ್ನು ಹಾಕಿ ಬಾಡಿಸಿ
6. ಇದು ಮೆತ್ತಗಾದ ನಂತರ ಬಿಟ್ರೋಟ್ ಕ್ಯಾರೆಟ್ ಹೋಳು, ಉಪ್ಪು ,ಹಾಕಿ ಬೇಯಿಸಿ (ಕುಕ್ಕರ್ ನಲ್ಲಿ ಬೇಯಿಸಿದ್ದರೆ ಹಾಗೇ ಹಾಕಿ )
7. ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ ಒಂದೈದು ಸೌಟಾಡಿಸಿ
8. ಕೆಳಗಿಳಿಸಿ ಕಾಯಿತುರಿ ನಿಂಬೆ ಹಣ್ಣಿನ ರಸ ಹಾಕಿದರೆ ಪಲ್ಯ ರೆಡಿ
Discussion about this post