ನವದೆಹಲಿ : ಹಣದ ಹೊಳೆ ಹರಿಸುವ ಐಪಿಎಲ್ ನಲ್ಲಿ ಈ ಬಾರಿ ಕೋಟಿ ಕೋಟಿ ಬಾಚಿಕೊಳ್ಳಲು ಬಿಸಿಸಿಐ ಉತ್ಸುಕವಾಗಿದೆ. ಈ ಬಾರಿ 2 ಹೊಸ ತಂಡಗಳು ಸೇರ್ಪಡೆಯಾಗಿರುವ ಕಾರಣ ಕಳೆದ ವರ್ಷಕ್ಕಿಂತ ಈ ಬಾರಿ ಬಂಪರ್ ಹೊಡೆಯವ ನಿರೀಕ್ಷೆ ಇದೆ.
ಇದರ ಮುಂದುವರಿದ ಭಾಗವಾಗಿ ಐಪಿಎಲ್ ಪ್ರಸಾರದ ಹಕ್ಕಿನಿಂದ 45 ಸಾವಿರ ಕೋಟಿ ಗಳಿಸುವ ಸಾಧ್ಯತೆಯಿದ್ದು, ಫೆಬ್ರವರಿ 10ಕ್ಕೆ ಬಿಡ್ ವಿತರಿಸುವ ಸಾಧ್ಯತೆಗಳಿದೆ. ಈ ಬಾರಿಯ ಪ್ರಸಾರದ ಹಕ್ಕು ಪಡೆಯಲು Sony sports, disney star network ಪೈಪೋಟಿ ನಡೆಸಿದ್ದು ಇವರಿಬ್ಬರನ್ನು ಸೋಲಿಸಿ ಬಿಡ್ ಪಡೆಯಲು reliance viacom 18 ಕೂಡಾ ಮುಂದಾಗಿದೆ. ಈ ಮೂವರನ್ನು ಸೋಲಿಸಲು ಅಮೆಝಾನ್ ಕೂಡಾ ಕಾಯುತ್ತಿದೆ.
ಈ ಹಿಂದೆ ಸೋನಿ ಪಿಕ್ಟರ್ ನೆಟ್ ವರ್ಕ್ 8,200 ಕೋಟಿಗೆ ಪ್ರಸಾರದ ಹಕ್ಕನ್ನು ಪಡೆದಿತ್ತು. ಆದಾದ ಬಳಿಕ 2018 – 22 ಅವಧಿಗೆ ಸ್ಟಾರ್ ಇಂಡಿಯಾ 16,347 ಕೋಟಿ ರೂಪಾಯಿ ಪಾವತಿಸಿ ಪ್ರಸಾರದ ಹಕ್ಕನ್ನು ಪಡೆದಿತ್ತು. ಈ ಬಾರಿ 2023 – 2027ರ ಅವಧಿಗೆ ಪ್ರಸಾರದ ಹಕ್ಕಿನ ಮೊತ್ತ 45 ಸಾವಿರ ಕೋಟಿಗೆ ಏರುವ ನಿರೀಕ್ಷೆ ಇದೆ.
Discussion about this post