ಒಂದೇ ದಿನ ಸುರಿದ ಮಳೆಯಿಂದ ( Bangalore it companies) ಐಟಿ ಕಂಪನಿಗಳು 255 ಕೋಟಿ ನಷ್ಟ ಅನುಭವಿಸಿದೆ
ಬೆಂಗಳೂರು : ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಿಂದ ಕೇವಲ ಜನ ಸಾಮಾನ್ಯರು ಮಾತ್ರ ಬೇಸತ್ತಿಲ್ಲ. ಬೊಕ್ಕಸಕ್ಕೆ ದೊಡ್ಡ ಮಟ್ಟದಲ್ಲಿ ಆದಾಯ ತಂದುಕೊಡುವ ಐಟಿ ಕಂಪನಿಗಳು ( Bangalore it companies ) ಕೂಡಾ ಅಸಮಾಧಾನ ಹೊರ ಹಾಕಿದೆ.
ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಗೆ ಸಿಲುಕಿರುವ ಬಿಜೆಪಿ ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ರಸ್ತೆಗಳು ಗುಂಡಿ ಬಿದ್ದಿದೆ. ಜನರಿಗೆ ಅದ್ಯಾವ ಯೋಜನೆಗಳು ದಕ್ಕುತ್ತಿಲ್ಲ ಹೀಗೆ ಸಾಲು ಸಾಲು ಆರೋಪಗಳು ಸರ್ಕಾರದ ಮೇಲಿದೆ.
ಇದನ್ನೂ ಓದಿ : Mysuru crime : ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ : ಪ್ರಿಯಕರನ್ನು ಬಂಧಿಸಿದ ಪೊಲೀಸರು
ಈ ನಡುವೆ ಸರ್ಕಾರದ ಆಡಳಿತ ಕಾರ್ಯವೈಖರಿಯಿಂದ ಬೇಸತ್ತಿರುವ ಐಟಿ ಕಂಪನಿಗಳು ಬೆಂಗಳೂರಿಂದ ವಲಸೆ ಹೋಗುವುದಾಗಿ ಎಚ್ಚರಿಕೆ ನೀಡಿವೆ. ಈ ಸಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೊರವರ್ತುಲ ರಸ್ತೆಗಳ ಕಂಪನಿಗಳ ಅಸೋಸಿಯೇಷನ್ ಪತ್ರ ಬರೆದು ಹೂಡಿಕೆ ವಾಪಸ್ ತೆಗೆದುಕೊಳ್ಳಬೇಕಾಗುತ್ತದೆ ಅಂದಿದೆ.
Memorandum Submitted by ORRCA to CM @BSBommai : pic.twitter.com/BgTgL4r2tJ
— ORRCA (@Namma_ORRCA) September 1, 2022
ಆಗಸ್ಟ್.30ರಂದು ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಐಟಿ ಕಂಪನಿಗಳ ಒಳಭಾಗಕ್ಕೆ ನೀರು ಬಂದಿತ್ತು. ರಸ್ತೆಯಲ್ಲಿ ನೀರು ತುಂಬಿದ ಕಾರಣ ಐದು ಗಂಟೆ ಕಾಲ ಹೊರವರ್ತುಲ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್ನಲ್ಲಿ ಬಾಕಿಯಾಗಿದ್ದರು. ಈ ಕಾರಣದಿಂದ ಏನಿಲ್ಲ ಅಂದರೂ ಕೆಲವೇ ಗಂಟೆಗಳಲ್ಲಿ 255 ಕೋಟಿ ರೂಪಾಯಿ ನಷ್ಟಕ್ಕೆ ಐಟಿ ಕಂಪನಿಗಳು ತುತ್ತಾಗಿದೆ.
ಇದರಿಂದ ಕೆರಳಿರುವ ಐಟಿ ಕಂಪನಿಗಳು 2019ರಲ್ಲಿ CM ಭೇಟಿ ನೀಡಿ ಹೊರವರ್ತುಲ ಅಭಿವೃದ್ಧಿ ಬಗ್ಗೆ ಭರವಸೆ ಕೊಟ್ಟಿದ್ದರು. ಅದು ಈಡೇರಿದಂತಿಲ್ಲ. ಐಟಿ ಕಾರಿಡಾರ್ನಲ್ಲಿ ಯಾವ ಮೂಲಭೂತ ಸೌಕರ್ಯಗಳ ಕೊಡಲಾಗಿದೆ ಮಾಹಿತಿ ಕೊಡಿ ಎಂದು ಆಗ್ರಹಿಸಿರುವ ಒಕ್ಕೂಟ ಸಂಚಾರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡ ಕ್ರಮ ಏನು ಎಂದು ಪ್ರಶ್ನಿಸಿದೆ.
ಜೊತೆಗೆ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಬ್ರೇಕ್ ಹಾಕದಿದ್ದಲ್ಲಿ ಅನಿವಾರ್ಯವಾಗಿ ಬೇರೆ ಕಡೆ ನಾವು ವಲಸೆ ಹೋಗಬೇಕಾಗುತ್ತೆ. ಬಂಡವಾಳ ಹೂಡಿಕೆ ವಾಪಸ್ ತೆಗೆದುಕೊಳ್ಳಬೇಕಾಗುತ್ತೆ ಅಂದಿದೆ.
Discussion about this post