Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

Radhakrishna Anegundi by Radhakrishna Anegundi
February 16, 2023
in ಟಾಪ್ ನ್ಯೂಸ್
balipa narayana bhagavatha no more

balipa narayana bhagavatha no more

Share on FacebookShare on TwitterWhatsAppTelegram

ಯಕ್ಷರಂಗದ ಭಾಗವತ ಭೀಷ್ಮ ಬಲಿಪಜ್ಜ ಇನ್ನಿಲ್ಲ Balipa narayana bhagavatha

ಕಳೆದ ಸುಮಾರು 15 ದಿನಗಳಿಂದ ತುಸು ಅಸ್ವಸ್ಥರಾಗಿದ್ದ ತೆಂಕು ತಿಟ್ಟಿನ ಮೇರು ಭಾಗವತರಾದ ಬಲಿಪ ನಾರಾಯಣ ಭಾಗವತರು ( Balipa narayana bhagavatha ) ಇಂದು ಸಂಜೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ನಿಧನರಾದರು.

ಬಲಿಪ ನಾರಾಯಣ ಭಾಗವತರ ಕುರಿತಂತೆ ಕೃಷ್ಣಪ್ರಕಾಶ ಉಳಿತ್ತಾಯ ಅವರು ಯಕ್ಷಪ್ರಭಾ ಪತ್ರಿಕೆಗಾಗಿ ಬರೆದ ಲೇಖನವೊಂದನ್ನು ಪ್ರಕಟಿಸುತ್ತಿದ್ದೇವೆ. ಇದು ಬಲಿಪಜ್ಜನಿಗೊಂದು ನುಡಿನಮನ. ( ಫೋಟೋ ಕೃಪೆ Sudhakara Jain Hosabettu Gutthu)

ಇದು ಭಾಗ್ಯ. ಬಲಿಪ ಮಾರ್ಗಕ್ಕೆ ಅಳಿವಿಲ್ಲ.

ಯಕ್ಷಗಾನದ ಮಹಾಭಾಗವತ ಶ್ರೀ ಬಲಿಪ ನಾರಾಯಣ ಭಾಗವತರ ಜತೆಗೆ ಮದ್ದಳೆವಾದಕನಾಗಿ ಪಡೆದ ಕಲಾ ಸ್ಪಂದನ ಮತ್ತು ಅನುಭವಗಳು ಈ ಬರಹದ ವಸ್ತು. ಅನುಭವಿ ಭಾಗವತರುಗಳಿಗೆ ಯಕ್ಷಗಾನದ ಪದ್ಯಗಳನ್ನು ಓದುವಾದ ಆ ಪದ್ಯಗಳು ಕೇವಲ ಅಕ್ಷರ ಸಮೂಹದಂತೆ ಕಾಣದೆ ಅದು ಕಾಲದ (ತಾಳದ) ಶಿಲ್ಪಾಕೃತಿಯಂತೆ ಕಾಣುತ್ತದೆ. ಹೀಗಿದ್ದುದರಿಂದ ಅವನ್ನು ಓದುವ ಕ್ರಿಯೆಯಲ್ಲೂ ತಾಳಬದ್ಧತೆ ಇರುತ್ತದೆ. ವಿದ್ವಾಂಸರೆನ್ನುವಂತೆ ಭಾಗವತನಿಗೆ ಮೊದಲು ಗೊತ್ತಾಗಿರಬೇಕಾದದ್ದು ಯಕ್ಷಗಾನ ಪದವನ್ನು ಹೇಗೆ ಓದಬೇಕು ಎಂಬ ಜ್ಞಾನ. ಆಗ ಗಾನದ ಕ್ರಿಯೆ ಸರಾಗ. ಶ್ರೀ ಬಲಿಪ ನಾರಾಯಣ ಭಾಗವತರಿಗೆ ( Balipa narayana bhagavatha) ಪದಗಳು ತಾಳ ಬದ್ಧ ಸಂಗೀತದಂತೆ ಕಾಣುತ್ತದೆ. ಹಾಗಾಗಿಯೇ ಅವುಗಳ ಛಂದೋವಿನ್ಯಾಸಕ್ಕೆ ಚ್ಯುತಿ ಇಲ್ಲದಂತೆ ಹಾಡುವುದು ಅವರ ಸಹಜವಾದ ಧರ್ಮವಾಗಿದೆ.

ಬಲಿಪರ ಗಾನ ಕ್ರಮವನ್ನು ಹೀಗೆ ಅಕ್ಷರೀಕರಿಸಬಹುದೇನೋ? ಅವರ ಹಾಡು ರಂಗವಲ್ಲಿಯಂತೆ. ಛಂದೋಬದ್ಧ ‘ ಮಾತು’ (ಸಾಹಿತ್ಯವು) ರಂಗವಲ್ಲಿಯ ಚುಕ್ಕಿಗಳಂತೆ ಪ್ರಮಾಣ ಬದ್ಧವಾದರೆ ಚುಕ್ಕಿಗಳನ್ನು ಸೇರಿಸುವುವ ‘ಧಾತು’( ರಾಗ ಮತ್ತು ಸಂಗೀತ ) ರಂಗವಲ್ಲಿಯ ಚುಕ್ಕಿಗಳನ್ನು ಸೇರಿಸುವ ನೇರ ಮತ್ತು ವಕ್ರ ರೇಖೆಗಳಂತೆ. ಪ್ರಮಾಣ ಬದ್ಧವಾದ ಸಾಹಿತ್ಯವೆಂಬ ರಂಗವಲ್ಲಿಯ ಚುಕ್ಕಿಗಳನ್ನು ಸೇರಿಸುವ ರಾಗ-ಸಂಗೀತವೆಂಬ ನೇರ ಮತ್ತು ವಕ್ರ ರೇಖೆಯಂತಹಾ ಗಾನ ಕ್ರಮ. ಇಡೀ ಪದ್ಯ ಪ್ರಸ್ತುತಿಯಲ್ಲಿ ಪ್ರಮಾಣ ಬದ್ಧವಾದ ಶಿಲ್ಪಾಕೃತಿಯನ್ನು ಶ್ರೀ ಬಲಿಪ ನಾರಾಯಣ ಭಾಗವತರಲ್ಲಿ ( Balipa narayana bhagavatha) ಕಾಣಬಹುದು. ಬಲಿಪರು ಹಾಡುವಾಗ ಅವರು ತಾಳ ಹಾಕಬೇಕೆನ್ನುವ ನಿರೀಕ್ಷೆಯೇ ಮದ್ದಳೆಗಾರನಲ್ಲಿ ಬಾರದು ಯಾಕೆಂದರೆ ಛಂದೋಬದ್ಧವಾಗಿ ಅವರು ಹಾಡುತ್ತಿರುವುದರಿಂದ ಛಂದಸ್ಸೇ ತಾಳ/ಕಾಲದೊಂದಿಗೆ ಮಿಳಿತವಾಗಿರುವುದಿಂದ ಹಾಡಿನಲ್ಲೇ ತಾಳ ಕಾಣಿಸಿಕೊಳ್ಳುತ್ತದೆ. ವಾದನ ಸರಾಗವಾಗಿ ಪದದೊಡನೆ ಮಿಳಿತವಾಗುತ್ತದೆ.

ಗಾನ ಮಾರ್ಗವೇ ವಾದನ ಮಾರ್ಗ.

ವಾದನವು ಗಾಯನದಿಂದ ಪ್ರೇರೇಪಿಸಲ್ಪಡುತ್ತದೆ. ಗಾಯನ ಮಾರ್ಗವೇ ವಾದನ ಮಾರ್ಗ. ಶ್ರೀ ಬಲಿಪ ನಾರಾಯಣ ಭಾಗವತರ ( Balipa narayana bhagavatha) ಗಾನದ ‘ಭಾಷೆ’ ಯ ಅರಿವಿದ್ದ ವಾದಕನಿಗೆ ಅವರ ಪದಕ್ಕೆ ಮದ್ದಳೆ ನುಡಿಸುವಾಗ ಯಾವುದೇ ಸಂಕರಗೊಂಡ ಮದ್ದಳೆಯ ಪಾಟಾಕ್ಷರಗಳು ಬಾರವು. ಬದಲಾಗಿ, ಮದ್ದಳೆಯ ಮೂಲ ಪಾಟಾಕ್ಷರಗಳೇ ಕ್ರಮಪಲ್ಲಟ-ಸಂಯೋಜನೆಗೊಂಡು ( permutation- combination) ಮೂಡಿಬರುತ್ತವೆ. ಉದಾಹರಣೆಗೆ: ಪ್ರಸಂಗದಲ್ಲಿ ಒಂದೇ ತಾಳದ ಪದ್ಯಗಳು ಬೆನ್ನು ಬೆನ್ನಿಗೆ ಇರುವುದು ಸಾಮಾನ್ಯ. ಹೀಗಿದ್ದಾಗ, ಸಂಪ್ರದಾಯ ಶರಣ ಪದಗಳನ್ನು ಹಾಡಿದಾಗ ವಾದನದಲ್ಲಿ ಬರುವ ಸಾಂಪ್ರದಾಯಿಕ ಕ್ರಮಪಲ್ಲಟಗೊಂಡ ನುಡಿತಗಳನ್ನು ಗಮನಿಸೋಣ.

ಏಕ ತಾಳ: ಬಿಡಿತದ ಸಂದರ್ಭ. ಸಾಧಾರಣವಾಗಿ ಬಿಡಿತದ ನಾಲ್ಕಾವರ್ತಕ್ಕೆ “ ಧಿದ್ದಾತಕಧಾ” ಈ ಮದ್ದಳಾಕ್ಷರವನ್ನು ನುಡಿಸುತ್ತಾರೆ. ಮುಂದಿನ ಪದವೂ ಇದೇ ತಾಳದಲ್ಲಿದ್ದರೆ ಮತ್ತು ಪದ ಸಂಪ್ರದಾಯಕ್ಕೆ ಬದ್ದವಾಗಿದ್ದರೆ ಇದೇ “ದಿದ್ದಾತಕಧಾ” ವು ಕ್ರಮಪಲ್ಲಟಗೊಂಡು “ ಧಿಂತಕತಕಧಾ” ಆಗಬಹುದು ಅಥವಾ “ ದಿಧಿನಕತಕಧಾ” ವೂ ಆಗಬಹುದು. ಈಗ ಅಷ್ಟ ತಾಳದ ಬಿಡಿತದ ಸಂದರ್ಭ ನೋಡೋಣ “ ಧೀತರಿಕಿಟಕಿಟತಕತಾಂ” ಮೂಲ ಬಿಡಿತ ಮದ್ದಳಾಕ್ಷರವಾದರೆ ಅದರದೇ ಇನ್ನೊಂದು ರೂಪ ಮತ್ತು ಮೂಲನಿಷ್ಠಟವಾದದ್ದು “ “ಧೀತರಿಕಿಟದ್ದಿದ್ದಿಂತಾಂ” . ಇದು ಯಕ್ಷಗಾನೀಯ ಗಾನ ಕ್ರಮದ ಶಕ್ತಿ. ಗಾನದಿಂದಾಗಿ ವಾದನದಲ್ಲಿ ಮೂಡುವ ಮನೋಧರ್ಮ.

ಯಕ್ಷಗಾನ ಪದಗಳ ಛಂದೋವೈವಿಧ್ಯವನ್ನು ಕಂಡಾಗ ಮತ್ತು ಅದರಂತೆ ಹಾಡಿದಾಗ ವಾದಕನಲ್ಲಿ ಪೂರಕವಾದ ಮನೋಧರ್ಮ ಬೆಳೆಯುತ್ತದೆ. ಶ್ರೀ ಬಲಿಪರ ಗಾನದಲ್ಲಿ ಇದನ್ನು ಕಾಣಬಹುದು. ಹಾಡುವ ತಾಳ ಒಂದೇ ಆದರೂ ಹಾಡಿನ ಆಕಾರ ತುಂಬಾ ವಿಭಿನ್ನವಾಗಿ ಇರುತ್ತದೆ. ಹಾಡು ಕಟ್ಟಲ್ಪಟ್ಟ ಛಂದಸ್ಸು ಮತ್ತು ಸಾಹಿತ್ಯದಿಂದಾಗಿ ಈ ರೀತಿಯ ವ್ಯತ್ಯಾಸವನ್ನು ಹಾಡಿನಲ್ಲಿ ಬಲಿಪರು ಕಾಣಿಸುತ್ತಾರೆ.

ತಾಳ ಬದಲಾವಣೆ ಮತ್ತು ಬಲಿಪರು.

ಯಕ್ಷಗಾನದಲ್ಲಿನ ವಿಶಿಷ್ಠವಾದ ಚಾಲ್ತಿ ತಾಳ ಬದಲಾಯಿಸುವುದು. ಪ್ರಚಲಿತ ತೆಂಕುತಿಟ್ಟಿನಲ್ಲಿ ಏಕದಿಂದ ತಿತ್ತಿತ್ತೈ, ತ್ರಿವುಡೆಯಿಂದ ತಿತ್ತಿತ್ತೈ, ರೂಪಕದಿಂದ ಏಕ ಮತ್ತೆ ತಿತ್ತಿತ್ತೈ ಮುಂತಾದ ತಾಳ ಬದಲಾಯಿಸುವಿಕೆಯ ಕ್ರಮ ಇದೆ. ಇಲ್ಲಿ ಒಂದು ಸೂಕ್ಷ್ಮ ಇದೆ. ಏಕ ತಾಳದಿಂದ ತಿತ್ತಿತ್ತೈ ಗೆ ತಿರುಗುವಾಗ ರಾಗಾಲಾಪ ಮಾಡಿ ಮುಕ್ತಾಯಕ್ಕೆ (ಧಿದೋಕತನ ಧಿದೋಕತನ ಧಿದೋಕತನ) ಕ್ಕೆ ಎಡೆ ಬಿಟ್ಟು ಮತ್ತೆ ಪದ ತಿತ್ತಿತ್ತೈ ಯಲ್ಲಿ ಎತ್ತುಗಡೆ ಮಾಡುವುದು. ಆದರೆ ಬಲಿಪರು ಮಾತ್ರ ಹಿಂದಿನ ಕ್ರಮವನ್ನು ಬಿಟ್ಟಿಲ್ಲ. ಹಿಂದಿನ ಕ್ರಮದಂತೆ ತಾಳ ಬದಲಾಗುವ ಸಂದರ್ಭ ರಾಗಾಲಾಪ ಮಾಡಿ ಮುಕ್ತಯ ನುಡಿಸಲು ಎಡೆಬಿಡುವ ಸಂದರ್ಭ ಇರಲಿಲ್ಲ. ರಾಗಾಲಾಪದ ಸಂದರ್ಭದಲ್ಲೇ ವಿಚಕ್ಷಣ ಮದ್ದಳೆಗಾರ ಒಂದಾ ಎಡೆಮುಕ್ತಾಯಾ ನುಡಿಸಬೇಕು ಅಥವಾ ಭಾಗವತರು ತಿತ್ತಿತ್ತೈ ಗೆ ತಿರುಗಿ ಪದ ಹೇಳಿಯಾರು. ಈ ಸಾಂಪ್ರದಾಯಿಕ ಕ್ರಮವನ್ನು ಬಲಿಪರಲ್ಲಿ ನಾವು ಕಾಣಬಹುದು. ಏಕತಾಳಕ್ಕೆ ಹೊಂದಿ ಹಾಡುವಾಗಿನ ಛಂದಸ್ಸಿನ ರೂಪ ಅಥವಾ ಅಕ್ಷರಗಳ ತಾಳ ಬಂಧ ಹಂಚೋಣ ತಿತ್ತಿತ್ತೈ ಗೆ ತಿರುಗಿದಾಗ ಪುನರ್ಸಂಯೋಜನೆಗೊಂಡು ಹಾಡುವಾಗಿನ ಅದರ ರೂಪ ತಾಳಕ್ಕೆ ಅಕ್ಷರಗಳ ಹಂಚುವಿಕೆ ಅತ್ಯಂತ ಆಕರ್ಷಣೀಯ. ವಾದಕನು ಇವನ್ನು ಗಮನಿಸಿದಾಗ ಹೊಸ ಹೊಸ ಕ್ರಮಪಲ್ಲಟಗೊಂಡ ಸಂಯೋಜನೆಗೊಂಡ ಮದ್ದಳಾಕ್ಷರಗಳು ಮೂಡುತ್ತವೆ. ಇದು ಬಲಿಪರ ಗಾನಕ್ಕಿರುವ ಶಕ್ತಿ.

ತಿತ್ತಿತ್ತೈ ಮತ್ತು ಬಲಿಪರು.

ನರ್ತನ ತಾಳವೆಂದು ಕರೆಯಲ್ಪಡುವ ತಿತ್ತಿತ್ತೈ ತಾಳದ ಕುರಿತಾಗಿ ಅನೇಕ ರೀತಿಯ ಚರ್ಚೆಗಳು ನಡೆದಿವೆ. ಅವು ಪೂರ್ಣ ತಾಳ ಹೌದೋ ಅಲ್ಲವೋ ಎಂಬಿತ್ಯಾದಿ. ಬಲಿಪರು

ತಿತ್ತಿತ್ತೈ ಯ ಪದದ ಅದರ ಮೂಲ ಲಯವಾದ ತಕದಿಮಿತಕಿಟ ಕ್ಕೆ ನಿಷ್ಟವಾಗಿ ಸಂಚರಿಸುತ್ತಾ ಹಾಡುತ್ತಾರೆ. ತೈಯ್ಯತದಿಂದತ್ತೈ

ತೊಂತನದಿಂದತ್ತೈ

ತೈಯ್ಯತ ತೈಯ್ಯತ

ತೈಯತ ದಿಂದತ್ತೈ.

ಹೀಗೆ ಸಂಚರಿಸುದು ಕ್ರಮ. ತಾಳದ ಉತ್ತರಾರ್ಧದಲ್ಲಿ ತಿತ್ತಿತ್ತೈ ಯ ಲಕ್ಷಣಗಳವಾದ ಜಾರುವಿಕೆ ಅಥವಾ ‘ಷಾಯ್ಪು’ (ಚಾಪು) ವಿಕೆಯನ್ನು ಕಾಣಿಸುವುದು ಬಹು ಮುಖ್ಯವಾದ ಸಂಗತಿ. ಈ ಜಾರುವಿಕೆ ಬಲಿಪರ ಗಾಯನದಲ್ಲಿ ಕಾಣುತ್ತೇವೆ. ಇದು ಪದದ ಅಕ್ಷರಗಳು ಜಾರುವಿಕೆಯೂ ಹೌದು ಮತ್ತು ತಾಳದ ಜಾರುವಿಕೆಯೂ ಹೌದು. ಇದು ಸ್ಪಷ್ಟವಾಗಿ ಕಾಣಿಸಬೇಕಾದದ್ದು ಧರ್ಮ.

ತಿತ್ತಿತ್ತೈ ತಾಳದಲ್ಲಿ ಸಮಗ್ರಹ, ಅನಾಗತ ಗ್ರಹ ಮತ್ತು ಅತೀತ ಗ್ರಹವೆಂಬ ಗ್ರಹ ಬೇಧ ಮಾಡಿ ಹಾಡುವ ಕ್ರಮವಿದೆ ಯಕ್ಷಗಾನದಲ್ಲಿ. ಬಲಿಪರು ಗ್ರಹಬೇಧ ಮಾಡಿ ಹಾಡುವಲ್ಲಿ ತೋರುವ ವೈದುಷ್ಯ ಅನನ್ಯ. ಬಲಿಪರ ಶಿಷ್ಯರಾದ ಪಟ್ಲ ಸತೀಶ ಶೆಟ್ಟರಲ್ಲೂ ಕೂಡ ಈ ರೀತಿಯ ಗ್ರಹ ಬೇಧದಿಂದ ತಿತ್ತಿತ್ತೈ ಹಾಡುವಿಕೆಯ ಕ್ರಮವನ್ನು ಕಾಣಬಹುದು. ಪದದ ಸಾಹಿತ್ಯಗಳು ತಾಳದ ಮೊದಲ ಎರಡನೆಯ ಮತ್ತು ಮೂರನೆಯ ಘಾತವಲ್ಲದೆ ಮೊದಲ ಘಾತ ಮತ್ತು ಎರಡನೆಯ ಘಾತದ ನಡುವೆ ಪದ ತೆಗೆಯುವಂತಹಾ (ಎಡುಪ್ಪು) ಕ್ರಮ ಇವನ್ನೆಲ್ಲ ಬಲಿಪರ ಈ ನರ್ತನ ತಾಳದಲ್ಲಿ ಕಾಣಬಹುದು. ಗ್ರಹಬೇಧ ಮಾಡಿ ಹಾಡಲು ತೊಡಗುವ ಮುನ್ನ ಕಂಚಿನ ತಾಳಕ್ಕೆ ಬಲವಾದ ಘಾತವನ್ನಿಕ್ಕಿ ಹಾಡಲು ತೊಡಗುವುದು ಬಲಿಪರ ರೂಢಿ. ಈ ಕ್ರಮ ಬಲಿಪರ ಮಗ-ಶಿಷ್ಯ ಶ್ರೀ ಪ್ರಸಾದ ಬಲಿಪರಲ್ಲೂ ಮತ್ತು ಶಿಷ್ಯ ಪಟ್ಲ ಸತೀಶ ಶೆಟ್ಟರಲ್ಲೂ ಕಾಣಬಹುದು. ಗ್ರಹಬೇಧದ ಸಂದರ್ಭ ಮದ್ದಳೆವಾದಕನ ಏಕಾಗ್ರತೆ ಮತ್ತು ಚುರುಕುತನ ಸವಾಲಿಗೆ ಒಳಪಡುತ್ತದೆ. ವಾದಕನೂ ಗ್ರಹಬೇಧ ಮಾಡಿ ನುಡಿಸಿದರೆ ಮಾತ್ರ ಪದ್ಯದ ಸೊಗಸಿಗೆ ಮತ್ತಷ್ಟು ಚಿತ್ತಾರ.

ಏರುಪದಗಳ ಸೊಗಸು ಮತ್ತು ಅಲ್ಲಿ ಬಲಿಪರು ಮೂಡಿಸುವ ಗಮಕಗಳು ವೇಷಕ್ಕೆ ಆವೇಶ ವನ್ನು ಭರಿಸುವಂತಹಾದ್ದು. ತಾಳಬದ್ದವಾದ ಏರುಪದದ ಗಮಕ. ತಾಳಾವರ್ತದ ಘಾತಕ್ಕೆ ಆಲಾಪದ ನಿಲ್ಲುವಿಕೆ ಮತ್ತು ತೊಡಗುವಿಕೆ ಇವು ವಾದಕರಿಗೂ ನರ್ತಕರಿಗೂ ಕೊಡುವ ಉತ್ತೇಜನ ಅವರ್ಣನೀಯ. ಏರುಪದದ ಸಂದರ್ಭವೇಷವನ್ನು ಗಮನಿಸಿಸಿ ಲಯನಿರ್ಣಯ ಬಲಿಪರ ಕ್ರಮ.

ನೂರಕ್ಕೂ ಮಿಕ್ಕಿ ಪ್ರಸಂಗಗಳು ಕಂಠಸ್ಥ, ಪ್ರಸಂಗಕರ್ತರಾಗಿಯೂ, ಅವಶ್ಯಕತೆ ಬಿದ್ದಾಗ ರಂಗಸ್ಥಳದಲ್ಲಿ ತುಂಡು ಪದಗಳನ್ನು ಹೆಣೆಯುತ್ತಾ ಪ್ರಸಂಗವನ್ನು ಕೊಂಡೊಯ್ಯುವ ವಿಚಕ್ಷಣತೆ ಇವೆಲ್ಲಾ ಈಗ ಕಿರಿಯ ಕಲಾವಿದರಲ್ಲಿಯೂ ರಸಿಕರಲ್ಲಿಯೂ ಬೆರಗನ್ನು ಹುಟ್ಟಿಸುತ್ತದೆ.

ಬದಲಾವಣೆಯ ಪರ್ವದಲ್ಲಿ ತನ್ನ ತನವನ್ನ ಪರಂಪರೆಯನ್ನು ಕಾಪಿಟ್ಟುಕೊಂಡ ಧೀಮಂತ ವ್ಯಕ್ತಿ ಮಾತ್ರವಲ್ಲ ಸಾಂಸ್ಕೃತಿಕ ವಾಗಿ ಇವರ ಈ ಕೊಡುಗೆ ಬಲು ಮೌಲಿಕವಾದದ್ದು. ಬಲಿಪರ ಬಹುದೊಡ್ಡ ಕೊಡುಗೆಯೆಂದರೆ ತಮ್ಮ ಹಾಡಿಕೆಯ ಶೈಲಿಯನ್ನು ಮುಂದಿನ ಪೀಳಿಗೆಗೆ ಕೊಟ್ಟದ್ದು. ಅಗಾಧವಾದ ಪ್ರಭಾವವನ್ನು ಬೀರಿದುದು. ಯಕ್ಷಗಾನ ಶೈಲಿಯೆಂದರೆ ಬಲಿಪ ಶೈಲಿಯೆನ್ನುವಂತೆ ಹೇಳಿಸಿಕೊಂಡದ್ದು. ಬಲಿಪ ಶಿವಶಂಕರ, ಬಲಿಪ ಪ್ರಸಾದ್, ಪುಂಡಿಕಾಯ್ ಗೋಪಾಲಕೃಷ್ಣ ಭಟ್ ,ಪೊಳಲಿ ದಿವಾಕರ ಆಚಾರ್ಯ ಮತ್ತು ಭಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಮೊದಲಾದ ಯುವ ಭಾಗವತರುಗಳಲ್ಲಿ ಬಲಿಪ ಶೈಲಿಯು ಜೀವಂತವಾಗಿದೆ.

Tags: FEATURED
ShareTweetSendShare

Discussion about this post

Related News

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Latest News

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್