Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ನ್ಯೂಸ್ ರೂಮ್

ಬಲಿಪ ಪರಂಪರೆಯ ಉತ್ತರಾಧಿಕಾರಿ ” ಬಲಿಪ ಪ್ರಸಾದ್ ಇನ್ನು ನೆನಪು ಮಾತ್ರ : ಕುಡ್ವ ರಿಂದ ನುಡಿ ನಮನ

Radhakrishna Anegundi by Radhakrishna Anegundi
April 12, 2022
in ನ್ಯೂಸ್ ರೂಮ್
Share on FacebookShare on TwitterWhatsAppTelegram

ಸುಪ್ರಸಿದ್ಧ ಭಾಗವತರಾದ ಬಲಿಪ ಪ್ರಸಾದ್ ಭಟ್ ನಿದನರಾದ ಆಘಾತಕಾರಿ ವರದಿ ಆವರ ಹಾಗೂ ಯಕ್ಷಗಾನದ ಅಭಿಮಾನಿಗಳಲ್ಲಿ ಶೋಕ ತಂದಿದೆ . ಅಲ್ಪ ಕಾಲದ ಅಸೌಖ್ಯದಿಂದಾಗಿ , ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ, ಇಂದು ಸಂಜೆ ನಿಧನರಾದ ವರದಿ , ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ತೀವ್ರ ಶೋಕವನ್ನು ತಂದಿದೆ .

Follow us on:


1976 ರಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರು ಹಾಗೂ ಜಯಲಕ್ಷ್ಮಿ ದಂಪತಿಗಳ ನಾಲ್ಕನೇ ಸುಪುತ್ರರಾಗಿ ಜನಿಸಿದ ಪ್ರಸಾದರು , ತಮ್ಮ ತಂದೆಯವರಿಂದಲೇ ಭಾಗವತಿಕೆ ಕಲಿತರು . ತಮ್ಮ ತಂದೆಯ ಬಲಿಪ ಶೈಲಿ ಯನ್ನು ಕರಗತ ಮಾಡಿ , ರಾಗ , ತಾಲ ಹಾಗೂ ಲಯದ ಸೂಕ್ಷ್ಮತೆಯನ್ನು ಕರಗತ ಮಾಡಿಕೊಂಡರು . 1996 ರಲ್ಲಿ ತಮ್ಮ 20ನೇ ವಯಸ್ಸಿನಲ್ಲೇ ಕಟೀಲು ಮೇಳ ಸೇರಿ , ಮುಂದೆ ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾದರು .‌ ಶ್ರೀದೇವಿ ಮಹಾತ್ಮೆ , ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ , ಲಲಿತೋಪಖ್ಯಾನ ಸಹಿತ ಹೆಚ್ಚಿನ ಎಲ್ಲಾ ಪೌರಾಣಿಕ ಪ್ರಸಂಗಗಳಲ್ಲಿ , ತಮ್ಮ ತಂದೆಯವರಂತೆಯೇ , ಹಿಡಿತ ಸಾಧಿಸಿ ಕಂಠಪಾಟದಿಂದಲೇ ಭಾಗವತಿಕೆ ಮಾಡುವ ಕೌಶಲ್ಯ ಸಾಧಿಸಿದ್ದರು . ಶ್ರಂಗಾರ , ಕರುಣ , ವೀರ , ಶಾಂತ ರಸಗಳ ಬಳಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪ್ರಸಂಗಗಳ ಯಶಸ್ಸಿಗೆ ಕಾರಣರಾಗಿದ್ದರು . ಕಂಚಿನ ಕಂಠ ಎಂದೇ ಹೇಳಬಹುದಾದ ಪ್ರಸಾದ್ ಬಲಿಪರು ಹಾಡುವ ಏರು ಸ್ವರದ ಪದ್ಯಗಳು ಶ್ರೋತೃಗಳ ಕಿವಿಗಳಲ್ಲಿ ಇನ್ನೂ ಅನುರುಣಿಸುತ್ತಿದೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು .

ಕಪ್ಪು ಮೂರು ಅಥವಾ ಬಿಳಿ ನಾಲ್ಕರ ಶ್ರುತಿಯಲ್ಲಿ ಹಾಡುವ ಪ್ರಸಾದರ ಭಾಗವತಿಕೆ ಆಸ್ವಾದಿಸುವುದೆಂದರೆ ಅದೊಂದು ಕರ್ಣಾನಂದಕರ . ಪೌರಾಣಿಕ ಕಥೆ , ಪ್ರಸಂಗದ ನಡೆ , ರಂಗ ಪ್ರಯೋಗಗಳ ಬಗ್ಗೆ ಅಪಾರ ಜ್ಞಾನ ಹೊಂದಿ , ಸಹ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು . ಸರಳ , ಸಜ್ಜನಿಕೆಯ ವ್ಯಕ್ತಿತ್ವದ ಪ್ರಸಾದರು , ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದರು . ಮಳೆಗಾಲದ ಯಕ್ಷಗಾನ ಪ್ರದರ್ಶನ , ನಾಟ್ಯ ವೈಭವಗಳ ಪ್ರದರ್ಶನಗಳಿಗೆ ಅತೀ ಬೇಡಿಕೆಯ ಭಾಗವತರಾಗಿದ್ದರು . ಯಕ್ಷಗಾನದ ಹಾಡುಗಳಿಗೆ ಛಂದಸ್ಸೇ ಪ್ರಧಾನ ಎಂಬ ಮನೋಭಾವದ ಪ್ರಸಾದರು , ತಮ್ಮ ತಂದೆಯಂತೆಯೇ , ಪ್ರಸಂಗದ ಹಾಡುಗಳ ಪದ ಛೇದ ಮಾಡದೇ , ಛಂದೋಬದ್ಧವಾಗಿಯೇ ಹಾಡಬೇಕು ಎಂದು ಸಾಧಿಸಿ ತೋರಿಸಿದ ಅಪ್ರತಿಮ ಭಾಗವತೋತ್ತಮರು ‌.

ಪರಂಪರೆಯ ಭಾಗವತಿಕೆ ಎಂದರೆ , ಅದೊಂದು ತಪಸ್ಸು , ಸಾಧನೆ ಎಂದು ನಿಷ್ಠವಾಗಿ ಅಳವಡಿಸಿದ ಸಾಧಕರು‌ . ಯಕ್ಷಗಾನದ ಹೆಸರಿನಲ್ಲಿ ಆಧುನಿಕ ಎಂದು ಹೆಸರಿಸಬಹುದಾದ ಪ್ರಕ್ರಿಯೆಗಳಿಗೆ ತಲೆ ಬಾಗದ ಶ್ರೇಷ್ಠ ಭಾಗವತರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಮುಂಜಾವದ ಕಾಲದಲ್ಲಿ ಕರ್ಣಾರ್ಜುನ ಕಾಳಗ ಪ್ರಸಂಗದ ಪ್ರದರ್ಶನ ಇತ್ತು . ಪ್ರಸಾದ್ ಬಲಿಪರು ಭಾಗವತಿಕೆಗೆ ಕುಳಿತು ಇತ್ತಲಾ ಕರ್ಣಾರ್ಜುನರಿಗೆ ಹತ್ತಿತು ಕಾಳಗ ಎಂಬ ಪದ್ಯ ಹಾಡಿದಾಗ , ನನಗೆ , ಪುರಭವನವೇ ಬಿರಿಯಿತೋ ಎಂಬ ಭಾಸವಾಗಿತ್ತು . ಅಂತಹ ಏರುಕಂಠ ಪ್ರಸಾದ್ ಬಲಿಪರದ್ದಾಗಿತ್ತು .

25 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಪ್ರಸಾದ್ ಬಲಿಪರು ಕಳೆದ ವರ್ಷದ ತಿರುಗಾಟದ ನಂತರ ವಿಧಿಯ ಕ್ರೂರ ದೃಷ್ಟಿಯಿಂದಾಗಿ ಅಸೌಖ್ಯಕ್ಕೆ ಒಳಗಾಗಿ , ಈ ವರ್ಷದ ತಿರುಗಾಟ ಮಾಡಿರಲಿಲ್ಲ .
ಆದರೂ , ಕಟೀಲಿನಲ್ಲಿ ಕಳೆದ ಅಷ್ಟಮಿಯ ಯಕ್ಷಗಾನದ ಪ್ರದರ್ಶನಕ್ಕೆ ಸ್ವಲ್ಪ ಭಾಗವತಿಕೆ ಹಾಗೂ ಮೊನ್ನೆಯ ದಸರಾ ಸಂದರ್ಭದಲ್ಲಿ ಮೂಡಬಿದಿರೆಯ ಶ್ರೀ ಮಹಾಮ್ಮಾಯೀ ದೇವಸ್ಥಾನದಲ್ಲಿ ಮೂರ್ನಾಲ್ಕು ಭಜನೆಗಳನ್ನು ಹಾಡಿ , ಚೇತರಿಸುವ ಲಕ್ಷಣ ತೋರಿದ್ದುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು . ದೇಶ ವಿದೇಶಗಳಲ್ಲೂ ತಮ್ಮ ಭಾಗವತಿಕೆಯ ಕಂಪನ್ನು ಹರಡಿಸಿದ ಪ್ರಸಾದ್ ಬಲಿಪರು ನೂರಾರು ಸಂಮಾನಗಳನ್ನು ಪಡೆದಿದ್ದರು .

+++++++++++++++++++++++++++++++++++++++++++++

ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ನಮ್ಮ ಮೂಡುಬಿದಿರೆಯ ಯಕ್ಷಸಂಗಮದ ಸಂಮಾನ – ಕೂಟ ನಡೆದಿರಲಿಲ್ಲ . ಆದರೂ , ಈ ವರ್ಷ ನಾವು ಕೂಟ ನೆರವೇರಿಸದಿದ್ದರೂ , ಯಕ್ಷಸಂಗಮದ ವತಿಯಿಂದ ಬಲಿಪ ಪ್ರಸಾದ್ ಬಲಿಪರಿಗೆ ಅವರ ಸ್ವಗೃಹದಲ್ಲೇ , ತಂದೆಯವರೊಂದಿಗೆಯೇ ಅವರಿಗೆ ಸಂಮಾನ ಮಾಡಿದ್ದೆವು . ಆಗ ತುಂಬಾ ಉತ್ಸಾಹದಿಂದ ನಮ್ಮನ್ನು ಸ್ವಾಗತಿಸಿ , ಆದರಿಸಿ ,ಸತ್ಕರಿಸಿದ ಪ್ರಸಾದರು , ತಾವೇ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ , ತಮ್ಮ ಮನೆಯಲ್ಲಿ ನೆಟ್ವರ್ಕ್ ಸಮಸ್ಯೆಯಿದ್ದ ಕಾರಣ , ಮನೆಯ ಹತ್ತಿರದ ಎತ್ತರದ ಪ್ರದೇಶಕ್ಕೆ ಹೋಗಿ , ಆ ಫೋಟೋಗಳನ್ನು ನನಗೆ ವಾಟ್ಸಾಪ್ ಮೂಲಕ ಕೂಡಲೇ ಹಂಚಿ ಸಂಭ್ರಮಿಸಿದ ಆ ಕ್ಷಣಗಳು ಈಗಲೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ .

ಆ ಸಂದರ್ಭ ಈಗಲೂ ನನ್ನ ಸ್ಮ್ರತಿಪಟಲದಲ್ಲಿ ಸ್ಥಾಯಿಯಾಗಿದೆ . ಸರಳ ವ್ಯಕ್ತಿತ್ವದ ಪ್ರಸಾದರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೂ ಇಲ್ಲ . ತಮ್ಮ ತಂದೆ 85 ವರ್ಷದ ಯಕ್ಷರಂಗದ ದಂತಕಥೆ , ಯಕ್ಷರಂಗದ. ಅಪೂರ್ವ ಸಂಪನ್ಮೂಲ ವ್ಯಕ್ತಿ ಎನಿಸಿದ ಬಲಿಪ ನಾರಾಯಣ ಭಾಗವತರು , ತಮ್ಮ ಧರ್ಮಪತ್ನಿ , ಮೂವರು ಹೆಣ್ಣು ಮಕ್ಕಳು , ಮಾಧವ ಬಲಿಪ , ಶಿವಶಂಕರ ಬಲಿಪ ( ಇವರೂ ಭಾಗವತರು ) , ಶಶಿಧರ ಬಲಿಪ ಮೂವರು ಸಹೋದರರು ಸಹಿತ ಬಂಧು ಬಳಗ ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿರುವ ಪ್ರಸಾದ್ ಬಲಿಪರಿಗೆ ದಿವ್ಯ ಸಾಯುಜ್ಯ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಈ ವಿಷಾದದ ಸುದ್ದಿಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಯಕ್ಷಸಂಗಮ ಮೂಡುಬಿದಿರೆ ಹಾಗೂ ಸರ್ವ ಕಲಾಭಿಮಾನಿಗಳ ಪರವಾಗಿ ಕಲಾಮಾತೆ ಹಾಗೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .

  • ಡಾ. ಶಾಂತರಾಮ ಕುಡ್ವ
Tags: FEATURED
ShareTweetSendShare

Discussion about this post

Related News

Saudi authorities seize rainbow toys in crackdown on homosexuality

ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗೆ ಬೆಂಕಿ : ಹೊತ್ತಿ ಉರಿದ ಒಕಿನಾವ ಸಂಸ್ಥೆಯ ಶೋ ರೂಂ

ಪತ್ನಿ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನ : ಬಾವಿಯಲ್ಲೇ ಪ್ರಾಣ ಬಿಟ್ಟ ಮೂವರು ಮಕ್ಕಳು

ಟಾಟಾ ನೆಕ್ಸಾನ್ ಎಲೆಕ್ಟಿಕ್ ಕಾರಿಗೆ ಬೆಂಕಿ :  ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಶರವಣ ಮಗಳೂ ಜೆಡಿಎಸ್ ನಲ್ಲಿ ಕೆಲಸ ಮಾಡಲಿ : ವಿನಯ್ ಗುರೂಜಿ

Latest News

Saudi authorities seize rainbow toys in crackdown on homosexuality

ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

mangalore ullal man-died-electrick-shock-plucking-mango

ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ : ಮರದಲ್ಲಿ ಮೃತಪಟ್ಟ ಯುವಕ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

famous-five-rupees-doctor-shankaregowda-from-mandya-recovers-in-fortis-hospital-in-bangalore

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

naveen sajju house warming ceremony in mysore

ಮೈಸೂರಿನಲ್ಲಿ ಭರ್ಜರಿ ಮನೆ ಕಟ್ಟಿಸಿ ಸದ್ದಿಲ್ಲದೆ ಗೃಹ ಪ್ರವೇಶ ಮಾಡಿದ ಗಾಯಕ ನವೀನ್ ಸಜ್ಜು

veteran-odia-actor-raimohan-parida-found-dead-at-home-in-bhubaneswar-police-begins-probe

ಮನೆಯಲ್ಲಿ ಶವವಾಗಿ ಪತ್ತೆಯಾದ ಹಿರಿಯ ನಟ ರೈ ಮೋಹನ್

pm-modi-pats-mla-ramdas-remembers-the-gifts-by-the-mlas-late-mother Ramdas Narendra modi relationship

ರಾಮದಾಸ್ ಜೊತೆಗಿನ ನರೇಂದ್ರ ಮೋದಿ ಫ್ರೆಂಡ್ ಶಿಫ್ ಕಥೆ ಕೇಳಿ ದಂಗಾದ ಬಿಜೆಪಿ ನಾಯಕರು

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್