ನವದೆಹಲಿ : ಕೊರೋನಾ ಮೂರನೇ ಅಲೆಯಿಂದ ದೇಶ ಚೇತರಿಸಿಕೊಳ್ಳುತ್ತಿರುವಂತೆ ನಾಲ್ಕನೇ ಅಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಒಮಿಕ್ರೋನ್ ವೈರಸ್ ನ ಬಿಎ1 ಉಪತಳಿ ದೇಶದಲ್ಲಿ 3ನೇ ಅಲೆ ಸೃಷ್ಟಿಸಿದ ಬಳಿಕ ಒಮಿಕ್ರೋನ್ ಬಿಎ2 ತಳಿ ವಿಶ್ವದೆಲ್ಲೆಡೆ ಕಾಣಿಸಿಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಬಿಎ1 ಉಪತಳಿಗಿಂತ ಬಿಎ2 ಉಪತಳಿ ಹೆಚ್ಚು ಸೋಂಕುಕಾರಕವಾಗುವ ಸಾಧ್ಯತೆಗಳಿದೆ. ಇದರಿಂದ ಹೆಚ್ಚು ಸೋಂಕಿಗೆ ಕಾರಣವಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ 19 ತಾಂತ್ರಿಕ ಸಮಿತಿ ಮುಖ್ಯಸ್ಥೆ ಮರಿಯಾ ಹೇಳಿದ್ದಾರೆ.
ಆದರೆ ಈಗಾಗಲೇ ಒಮಿಕ್ರೋನ್ ನಿಂದ ಗುಣಮುಖರಾದವರಿಗೆ ಹೊಸ ಉಪತಳಿ ಅಪಾಯಕಾರಿಯೇ ಅನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಾಗಿದೆ ಎಂದು ಮರಿಯಾ ಹೇಳಿದ್ದಾರೆ.
ಮೂರು ಮದುವೆಯಾದ ಸರ್ಕಾರಿ ಶಿಕ್ಷಕ ಅಮಾನತು
ಯಾದಗಿರಿ : ಮೂರು ಮದುವೆಯಾದ ಕಾರಣಕ್ಕೆ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಯಾದಗಿರಿ ತಾಲೂಕಿನ ನೀಲಹಳ್ಳಿ ಸರ್ಕಾರಿ ಶಾಲೆಯ ಮೋಹನ ರೆಡ್ಡಿ (55) ಅಮಾನತುಗೊಂಡ ಶಿಕ್ಷಕ. ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾದ ರೆಡ್ಡಿ, ಇವರಿಬ್ಬರೂ ಗೊತ್ತಾಗದಂತೆ ಮೂರನೇ ಮದುವೆಯಾಗಿದ್ದ.
ಮೂರನೇ ಮದುವೆ ವಿಚಾರ ಯಾವಾಗ ಇಬ್ಬರಿಗೆ ಗೊತ್ತಾಯ್ತೋ, ಡಿಡಿಪಿಐಗೆ ದೂರು ನೀಡಿದ್ದರು. ಈ ವೇಳೆ ಪೋಹನ್ ರೆಡ್ಡಿ ಹಾಗೂ ಪತ್ನಿಯರ ನಡುವೆ ಜಗಳ ನಡೆದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ವಂಚನೆ ಆರೋಪದಡಿ ಪ್ರಕರಣ ಕೂಡಾ ದಾಖಲಾಗಿತ್ತು.
ಇದೀಗ ಈ ಎಲ್ಲಾ ಆಧಾರದಲ್ಲಿ ಮೋಹನ ರೆಡ್ಡಿಯನ್ನು ಮನೆಗೆ ಕಳುಹಿಸಲಾಗಿದೆ.
Discussion about this post