2023ರ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ… ( Aravind Limbavali )
ಬೆಂಗಳೂರು : ಕೆಲ ತಿಂಗಳ ಹಿಂದಷ್ಟೇ ಶಾಸಕ ಅರವಿಂದ ಲಿಂಬಾವಳಿ ( Aravind Limbavali) ಪುತ್ರಿ ಪೊಲೀಸರು ಮತ್ತು ಮಾಧ್ಯಮಗಳ ಮುಂದೆ ಬೀದಿ ರಂಪ ಮಾಡಿ ಸುದ್ದಿಯಾಗಿದ್ದರು. ಮಾಧ್ಯಮಗಳ ಕ್ಯಾಮಾರ ಕಿತ್ತುಕೊಳ್ಳಲು ಬಂದು ದರ್ಪ ತೋರಿದ್ದರು.
ಇದೀಗ ತಂದೆ ಅರವಿಂದ ಲಿಂಬಾವಳಿ ಸರದಿ. ಬೆಂಗಳೂರಿನ ವರ್ತೂರು ಕೆರೆ ವೀಕ್ಷಣೆಗೆ ತೆರಳಿದ್ದ ಶಾಸಕ ಅರವಿಂದ ಲಿಂಬಾವಳಿಗೆ ಮಹಿಳೆಯೊಬ್ಬರು ಸಮಸ್ಯೆ ಬಗ್ಗೆ ಮನವಿ ಪತ್ರ ನೀಡಲು ಬಂದಿದ್ದರು. ಈ ವೇಳೆ ಮಹಿಳೆಯ ಮೇಲೆ ಏರಿ ಹೋದ ಶಾಸಕರು ಬೈದು ಅವಾಜ್ ಹಾಕಿದ್ದಾರೆ.
ಇದನ್ನೂ ಓದಿ : Sumalatha Ambareesh :ಮಂಡ್ಯದ ಜನತೆಗೆ ಫೇಸ್ ಬುಕ್ ನಲ್ಲೇ ಸಾಂತ್ವಾನ… ಮತದಾರರ ಆಕ್ರೋಶಕ್ಕೆ ನಡುಗಿದ ಸಂಸದೆ ಸುಮಲತಾ
ನಿನಗೆ ಮಾನ ಮರ್ಯಾದೆ ಇದೆಯೇ, ನಾಚಿಕೆ ಆಗಲ್ವ, ನಿನಗೆ ಮರ್ಯಾದೆ ಬೇರೆ ಕೊಡಬೇಕಾ ಹೀಗೆ ಮಹಿಳೆಯೊಬ್ಬಳ ಜೊತೆಗೆ ಮಾತನಾಡುತ್ತೇನೆ ಅನ್ನುವುದನ್ನು ಮರೆತು ಹಾರಾಡಿದ್ದಾರೆ.

ಅಷ್ಟು ಮಾತ್ರವಲ್ಲದೆ ಪೊಲೀಸರನ್ನು ಕರೆಸಿ ಎಳೆದುಕೊಂಡು ಹೋಗಿ ಎಂದು ಬೇರೆ ಆದೇಶ ಬೇರೆ ಕೊಟ್ಟಿದ್ದಾರೆ. ಲಿಂಬಾವಳಿಯವರ ವರ್ತನೆ ಗಮನಿಸಿದರೆ, ಮುಂದಿನ ಬಾರಿ ಮೋದಿ ಮುಖ ನೋಡಿಯೂ ಜನ ಓಟು ಕೊಡುವುದು ಅನುಮಾನ.
Discussion about this post