ಮಂಡ್ಯದ ಜನರ ಆಕ್ರೋಶದ ಬಳಿಕ ಎಚ್ಚೆತ್ತುಕೊಂಡ ಸಂಸದೆ ಸುಮಲತಾ ( Sumalatha Ambareesh) ಇಂದು ನೇರವಾಗಿ ಫೀಲ್ಡ್ ಗೆ ಇಳಿಯಲು ಮುಂದಾಗಿದ್ದಾರೆ.
ಮಂಡ್ಯ : ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಸಾವಿರಾರು ಎಕರೆ ಬೆಳೆ ನಾಶವಾಗಿದೆ.ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಜನತೆಯ ಸಂಕಷ್ಟದಲ್ಲಿ ಜೊತೆಗಿರಬೇಕಾದ ಮಂಡ್ಯ ಸಂಸದೆ ಸುಮಲತಾ ( Sumalatha Ambareesh) ಫೇಸ್ ಬುಕ್ ನಲ್ಲಿ ಮಳೆ ಅವಾಂತರದ ವಿಡಿಯೋಗಳನ್ನ ಪೋಸ್ಟ್ ಮಾಡಿ ಎಚ್ಚರ ವಹಿಸಿ ಎಂದು ಜನತೆಗೆ ಮನವಿ ಮಾಡಿದ್ದರು.
ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ನಿಮ್ಮನ್ನ ಗೆಲ್ಲಿಸಿದ್ದು ಸಾರ್ವಜನಿಕರ ಕೆಲಸ ಮಾಡಲು ಹೊರತು ಮನೆಯಲ್ಲಿ ಕುಳಿತುಕೊಳ್ಳಲು ಅಲ್ಲ ಎಂದು ಕಿಡಿ ಕಾರಿದ್ದರು.
ಇದನ್ನು ಓದಿ : Ganesh Chaturthi : ಸಿದ್ದತೆ ಪೂರ್ಣಗೊಂಡ ನಂತ್ರ ನಿಯಮ ಹೇಳಿದ್ರೆ ಹೇಗೆ : BBMP & ಪೊಲೀಸರ ವಿರುದ್ಧ ಗರಂ
ಮತ ಕೇಳಲು ನೀವು ಬರ್ತಿರಿ, ಗೆದ್ದ ನಂತ್ರ ಮನೆಯಲ್ಲಿ ಕುಳಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡ್ತೀರಿ. ಇದು ಸರಿಯಲ್ಲ ಎಂದು ಜನ ಕಮೆಂಟ್ ಮಾಡಲಾರಂಭಿಸಿದ್ದರು. ಇದರ ಬೆನ್ನಲ್ಲೇ ಸಂಸದರು ಎಚ್ಚೆತ್ತುಕೊಂಡ ಸಂಸದರು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದ್ದು, ಬಳಿಕ 4 ಗಂಟೆಗೆ ಮೈಶುಗರ್ ಕಾರ್ಖಾನೆಗೆ ಭೇಟಿ ನಿಗದಿಯಾಗಿದೆ. ಆದರೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಆದ್ಯಾಕೋ ಪರಿಸ್ಥಿತಿ ಗಮನಿಸಿದರೆ ಸುಮಲತಾ ಅವರು ಮುಂದಿನ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸೋದಿಲ್ಲ ಅನ್ನುವ ಗಾಳಿ ಸುದ್ದಿ ಸತ್ಯವೇ ಅನ್ನುವಂತಿದೆ.
Discussion about this post