ನವದೆಹಲಿ : ಕೊರೋನಾ ಲಸಿಕೆ ವಿಚಾರದಲ್ಲಿ ಅಪಪ್ರಚಾರ ನಡೆಸಿದ ಕಾರಣದಿಂದ ಲಸಿಕಾ ವಿತರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಜನ ಲಸಿಕೆ ಅಂದ್ರೆ ಭಯ ಪಡುತ್ತಿದ್ದಾರೆ.
ಹೀಗಾಗಿ ಜನರನ್ನು ಲಸಿಕಾ ಕೇಂದ್ರದತ್ತ ಆಕರ್ಷಿಸಲು ಅಧಿಕಾರಿಗಳು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಹಲವು ಆಫರ್ ಗಳನ್ನು ಕೂಡಾ ಈಗಾಗಲೇ ನೀಡಲಾಗಿದೆ.
ಈ ನಡುವೆ ಅರುಣಾಚಲದ ಗ್ರಾಮೀಣ ಪ್ರದೇಶವೊಂದರಲ್ಲಿ ಲಸಿಕೆ ಪಡೆಯುವುದನ್ನು ಉತ್ತೇಜಿಸಲು ಉಚಿತ ಅಕ್ಕಿಯ ಆಫರ್ ಕೊಡಲಾಗಿದೆ. ಲಸಿಕಾ ಕುರಿತ ವದಂತಿಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಘೋಷಣೆಯ ಬೆನ್ನಲ್ಲೇ 80ಕ್ಕೂ ಹೆಚ್ಚು ಜನ ಲಸಿಕಾ ಕೇಂದ್ರದತ್ತ ಆಗಮಿಸಿದ್ದಾರೆ.
ಅಂದ ಹಾಗೇ ಈ ಲಸಿಕೆಯ ಐಡಿಯಾ ಮಾಡಿದವರು ಸುಬನ್ಸಿರಿ ಜಿಲ್ಲೆಯ ಅಧಿಕಾರಿ ಕಾಶಿ ವಾಂಗ್ ಚುಕ್. ಇವರು ಕಾರ್ಯ ನಿರ್ವಹಿಸುವ ಯಜಾಲಿಯ ವೃತ್ತದಲ್ಲಿ 45 ವರ್ಷ ಮೇಲ್ಪಟ್ಟ 1399 ಮಂದಿ ಇದ್ದಾರೆ. ಆದರೆ ಲಸಿಕೆ ಘೋಷಣೆಯಾದ ಬಳಿಕ ಆರೋಗ್ಯ ಕೇಂದ್ರಕ್ಕೆ ಬಂದವರು ಕೆಲವೇ ಕೆಲವರು. ಹೀಗಾಗಿ ಈ ಆಫರ್ ಅನ್ನು ಘೋಷಿಸಲಾಗಿದೆ.
Discussion about this post