ಪಂಜಾಬ್ : ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ರಾಜ್ಯದ ಗಡಿಯಲ್ಲಿರುವ ಕಥುವಾ ಜಿಲ್ಲೆಯ ರಂಜಿತ್ ಸಾಗರ್ ಡ್ಯಾಂ ಬಳಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಫ್ಟರ್ ಪತನಗೊಂಡಿರುವ ಸ್ಥಳ : ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದೆ ಎಂದು ಸೇನಾ ಮೂಲಗಳು ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಠಾಣ್ಕೋಟ್ನಿಂದ ವೆಪನ್ ಸಿಸ್ಟಮ್ ಇಂಟಿಗ್ರೇಟೆಡ್ ಹೆಲಿಕಾಪ್ಟರ್ ಬೆಳಗ್ಗೆ 10:20 ಕ್ಕೆ ಟೇಕಾಫ್ ಆಗಿತ್ತು. ಇದಾದ ಕೆಲವೇ ಹೊತ್ತಿನಲ್ಲಿ 10.43ರ ಸುಮಾರಿಗೆ ರಂಜಿತ್ ಸಾಗರ್ ಡ್ಯಾಂ ಪ್ರದೇಶದಲ್ಲಿ ಹೆಲಿಕಾಪ್ಟರ್ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಪಠಾಣ್’ಕೋಟ್ ನ ಎಸ್ ಪಿ ಸುರೇಂದ್ರ ಲಂಬಾ, ಸಾಗರ್ ಡ್ಯಾಂ ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿರುವ ಕುರಿತು ಮಾಹಿತಿ ಬಂದಿತ್ತು, ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಗುತ್ತಿದೆ ಅಂದಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ಸೇನೆಯ 254 AA ಹೆಲಿಕಾಫ್ಟರ್ ಪತನವಾಗಿದ್ದು, ಪೈಲೆಟ್ ಹಾಗೂ ಕೋ ಪೈಲೆಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ಗೊತ್ತಾಗಿದೆ.
Discussion about this post