ಸೆಲೆಬ್ರೆಟಿ ಆದ್ರೆ ಬದುಕು ಬಂಗಾರ ಅಂದುಕೊಳ್ಳುತ್ತೇವೆ. ಆದರೆ ಹಾಗಿಲ್ಲ. ಹೊರ ಜಗತ್ತಿಗೆ ಝಗಮಗಿಸುವ ಸೆಲೆಬ್ರೆಟಿಗಳ ಕಥೆಯೇ ಬೇರೆ ( Anupama gowda)
ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಕಹಿ ಸುದ್ದಿಗಳೇ ಬರುತ್ತಿದೆ. ಅದರಲ್ಲೂ ಕೊರೋನಾ ಬಳಿಕ ನಟಿಯರ ಆತ್ಮಹತ್ಯೆ ಸುದ್ದಿಗಳು ಕಂಗೆಡಿಸಿವೆ. ಅದಕ್ಕೆ ಕಾರಣ ಏನು ಅಂತಾ ಹುಡುಕಾಡಿದ್ರೆ ನೂರಾರು ಕಾರಣಗಳು ಸಿಕ್ಕಿವೆ. ( Anupama gowda)
ಈ ನಡುವೆ ಬಿಗ್ ಬಾಸ್ ಮನೆಯಿಂದ ಆತ್ಮಹತ್ಯೆ ವಿಚಾರವೊಂದು ಬಂದಿದೆ. ಹೌದು ನಟಿ , ನಿರೂಪಕಿ ಅನುಪಮಾ ಗೌಡ ( Anupama gowda ) ತಾವು ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ಕನ್ನಡಿಗರ ಮುಂದೆ ತೆರೆದಿಟ್ಟಿದ್ದಾರೆ. ಅದು ಕೂಡಾ ಹಳೆಯ ಕಥೆಯಲ್ಲ. ಈ ಹಿಂದೊಮ್ಮೆ ಬಿಗ್ ಬಾಸ್ ಮನೆಗೆ ಬಂದಿದ್ದ ವೇಳೆ ತಮ್ಮ ಪ್ರೇಮ ಪ್ರಸಂಗ, ಅದು ಮುರಿದು ಹೋದ ಕಥೆ, ಕೈ ಕೊಟ್ಟ ಬಾಯ್ ಫ್ರೆಂಡ್ ಸ್ಟೋರಿ ಎಲ್ಲವನ್ನೂ ಹೇಳಿದ್ದರು. ಈ ಮೂಲಕ ತಮ್ಮ ಮನಸ್ಸು ಹಗುರ ಮಾಡಿಕೊಂಡಿದ್ದರು.
ಇದನ್ನು ಓದಿ : BJP Meeting : ಕಾಂಗ್ರೆಸ್ ಗೆ ತನಿಖೆ ಬೆದರಿಕೆ : ಕೈ ನಾಯಕರ ಬಾಯಿ ಮುಚ್ಚಿಸಲು ಬಿಜೆಪಿ ಹೊಸ ನಾಟಕ
ಅದೆಲ್ಲವೂ ಮುಗಿದ ಬಳಿಕ ಹೊಸ ಬದುಕಿನೆಡೆಗೆ ಹೆಜ್ಜೆ ಹಾಕಿದ್ದ ಅನುಪಮಾ ( Anupama gowda) ಖುಷಿ ಖುಷಿಯಾಗಿದ್ರು. ಆದರೆ ಆದೇನಾಯ್ತೋ ಗೊತ್ತಿಲ್ಲ.
ಸ್ಪರ್ಧಿಗಳು ತಮ್ಮ ಮನಸ್ಸಿನಲ್ಲಿ ಇರುವ ಯಾವುದಾದರೂ ಒಂದು ಗುಟ್ಟು, ಯಾರೊಂದಿಗೂ ಇಲ್ಲಿಯವರೆಗೂ ಹಂಚಿಕೊಂಡಿರದ ರಹಸ್ಯವೊಂದನ್ನು ಹಂಚಿಕೊಳ್ಳಲು ‘ಬಿಗ್ ಬಾಸ್’ ಅವಕಾಶ ಕಲ್ಪಿಸಿದರು. ಈ ವೇಳೆ ಮಾತನಾಡಿದ ಅನುಪಮಾ ಒಂದೂವರೆ ವರ್ಷದ ಹಿಂದೆ ಹಲವು ಕಾರಣಗಳಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು. ನನ್ನ ಬಳಿ ಯಾರೂ ಇಲ್ಲ, ಏನೂ ಇಲ್ಲ ಅನ್ನಿಸುತ್ತಿತ್ತು. ಆಗ ನಾನು ಬದುಕಬಾರದು ಎಂದು ನಿರ್ಧಾರ ಮಾಡಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ. ನಾನು ಆತ್ಮಹತ್ಯೆಗೆ ಪ್ರಯತ್ನ ಪಟ್ಟ ವೇಳೆ ನೇಹಾ ನನ್ನ ಜೊತೆ ಇಡೀ ದಿನ ಇದ್ದು ನನ್ನ ಜೀವ ಉಳಿಸಿದಳು. ಆಕೆ ನನ್ನ ಆರೈಕೆ ಮಾಡಿದಳು, ಅವಳಿಂದ ನನಗೆ ಪುನರ್ ಜನ್ಮ ಸಿಕ್ತು ಎಂದು ಅನುಪಮಾ ಭಾವುಕರಾಗಿದ್ದಾರೆ.
ಇದನ್ನೂ ಓದಿ : ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)
ಆದರೆ ಈಗ ಹಾಗಿಲ್ಲ, ನಾನು ತುಂಬಾ ಸ್ಟ್ರಾಂಗ್ ಆಗಿದ್ದೇನೆ. ಸಣ್ಣ ಸಣ್ಣ ವಿಷಯಕ್ಕೆ ಹತಾಶೆಗೊಳ್ಳುವ ಪ್ರಶ್ನೆಯೇ ಇಲ್ಲ. ಈಗ ನನ್ನ ನಾನು ಪ್ರೀತಿಸುತ್ತಿದ್ದೇನೆ. ಇದೇ ನನ್ನ ಜೀವನದ ರಹಸ್ಯ ಅಂದಿದ್ದಾರೆ.
ಹೌದು ಕೆಲವೊಮ್ಮೆ ಸೋಲುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲದೆ ಹೋದಾಗ ಮನಸ್ಸು ಕಾನನವಾಗುತ್ತದೆ. ಒಂಟು ಅನ್ನಿಸಿದಾಗ ಕೆಟ್ಟ ಆಲೋಚನೆಗಳು ಮುತ್ತಿಕ್ಕುತ್ತದೆ. ಆತ್ಮಹತ್ಯೆ ಯೋಚನೆಗಳು ಬರುತ್ತವೆ. ಅವುಗಳಿಂದ ಪಾರಾಗಬೇಕಾದ್ರೆ ಉತ್ತಮ ಗೆಳೆಯನ್ನು ಸಂಪಾದಿಸಬೇಕು. ಒಂಟಿತನ ಕಾಡದಂತೆ ಪುಸ್ತಕಗಳನ್ನು ಸಂಗಾತಿಯನ್ನಾಗಿಸಬೇಕು. ಸೋಲೇ ಗೆಲುವಿನ ಮೆಟ್ಟಿಲು ಅನ್ನುವ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.
Discussion about this post