ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸುವುದಷ್ಟೇ ಉದ್ದೇಶ ( BJP Meeting)
ಬೆಂಗಳೂರು : ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಎಲ್ಲಾ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಸಾಕಷ್ಟು ಹಗರಣಗಳು ನಡೆದಿದೆ. ಆದರೆ ರಾಜಕೀಯ ತೋಳ್ಬಲದ ಕಾರಣದಿಂದ ಅವೆಲ್ಲವೂ ಕೂಡಾ ಮುಚ್ಚಿ ಹೋಗಿದೆ. ಇನ್ನು ಹಗರಣಗಳನ್ನು ಹುಡುಕಿ ತೆಗೆಯಬೇಕಾದ ತನಿಖಾ ಸಂಸ್ಥೆಗಳನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿರುವ ಸರ್ಕಾರ ಜನತೆಯ ಕಣ್ಣಿಗೆ ಮಣ್ಣೆರಚಿದೆ.( BJP Meeting)
ಪ್ರತೀ ಸಲ ಸರ್ಕಾರ ಬದಲಾದ ವೇಳೆ ಈ ಹಿಂದಿನ ಸರ್ಕಾರದ ಭ್ರಷ್ಟಚಾರದ ತನಿಖೆ ಮಾಡಿಸುತ್ತೇವೆ ಅಂತಾರೆ, ಆದರೆ ಯಾರೊಬ್ಬರೂ ತನಿಖೆ ನಡೆಸುವ ಎದೆಗಾರಿಕೆ ತೋರಿಸುವುದಿಲ್ಲ. ಬದಲಾಗಿ ಬೆದರಿಸಿ ಅವರನ್ನು ಸೈಲೆಂಟ್ ಮಾಡಿಸಲಾಗುತ್ತಿದೆ. ಇದೀಗ ಮತ್ತೆ ಅದೇ ತಂತ್ರಕ್ಕೆ ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಈ ಮೂಲಕ ಕುಮಾರಸ್ವಾಮಿಯವರ ಹಿಟ್ ಅಂಡ್ ರನ್ ನೀತಿಯನ್ನು ಅಳವಡಿಸಕೊಳ್ಳಲು ನಿರ್ಧರಿಸಿದೆ.
ಇದನ್ನೂ ಓದಿ : Bangalore it companies : ಬೊಮ್ಮಾಯಿ ಆಡಳಿತದಿಂದ ಬೇಸತ್ತ ಐಟಿ ಕಂಪನಿಗಳು : ಬೆಂಗಳೂರು ತೊರೆಯುವುದಾಗಿ ಎಚ್ಚರಿಕೆ
ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ವಾಗ್ದಾಳಿಯನ್ನು ಎದುರಿಸಲು ಆಡಳಿತರೂಢ ಬಿಜೆಪಿ ಸಿದ್ದತೆ ನಡೆಸಿದೆ. ಭಾನುವಾರ ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ.
ಮಳೆ ಬಂದು ಬೆಂಗಳೂರು ಕೊಚ್ಚಿ ಹೋಗಿದ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಕಾಂಗ್ರೆಸ್ ಸದನದಲ್ಲಿ ಪ್ರಸ್ತಾಪಿಸಲಿದೆ. ಈ ವೇಳೆ ಮುಜುಗರದಿಂದ ತಪ್ಪಿಸಿಕೊಳ್ಳಲು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯ ಹಗರಣಗಳನ್ನು ಪ್ರಸ್ತಾಪಿಸುವುದು, ಅಗತ್ಯ ಬಿದ್ದರೆ ತನಿಖೆ ವಹಿಸುವ ಬಗ್ಗೆ ತೀರ್ಮಾನಿಸುವ ಬಗ್ಗೆ ಬಿಜೆಪಿ ನಾಯಕರ ಸಭೆ ನಿರ್ಧರಿಸಿದೆ.
ಸಪ್ಟಂಬರ್ 12 ರಿಂದ 10 ದಿನಗಳ ಕಾಲ ಸದನ ನಡೆಯಲಿದ್ದು, ಈ ವೇಳೆ 40 % ದಂಧೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಒಂದು ವೇಳೆ ಕಾಂಗ್ರೆಸ್ ಕೈ ಮೇಲಾದರೆ ಚುನಾವಣಾ ವರ್ಷದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಲು ಬಿಜೆಪಿ ಬೆದರಿಕೆ ತಂತ್ರಕ್ಕೆ ಮುಂದಾಗಿದೆ.
Discussion about this post