ರಾಜ್ಯಕ್ಕೆ ಉತ್ತಮ ಪೊಲೀಸ್ ಅಧಿಕಾರಿಗಳನ್ನು ಕೊಡಬೇಕಾಗಿದ್ದ Amrit Paul, ಭ್ರಷ್ಟರನ್ನು, ಕಳ್ಳರನ್ನು, ಕ್ರಿಮಿನಲ್ ಗಳನ್ನು ಇಲಾಖೆಗೆ ಸೇರಿಸಲು ಮುಂದಾಗಿದ್ದರು. ಈ ಕಾರಣದಿಂದಲೇ PSI Scam : AGDP- Recruitment Amrit Paul arrest ಆಗಿದ್ದಾರೆ.
ಬೆಂಗಳೂರು : ಪೊಲೀಸ್ ನೇಮಕಾತಿ ಹಗರಣದಲ್ಲಿ ( PSI Scam ) ADGP ಅಮೃತ್ ಪೌಲ್ ( Amrit Paul ) ಅವರನ್ನು ಸಿಐಡಿ ಬಂಧಿಸಿದೆ.( PSI Scam Amrit Paul arrest) ಕಳೆದ ಹಲವು ದಿನಗಳಿಂದ ಸಿಐಡಿ ವಿಚಾರಣೆಗೆ ಹಾಜರಾಗುತ್ತಿದ್ದ ಅಮೃತ ಪೌಲ್, ( Amrit Paul ) ಕಳೆದ ನಾಲ್ಕು ದಿನಗಳಿಂದ ಸತತ ವಿಚಾರಣೆ ಎದುರಿಸಿದ್ದರು. ಇಂದು ವಿಚಾರಣೆ ಅಂತ್ಯಗೊಳಿಸಿದ ಸಿಐಡಿ, AGDP- Recruitment ಆಗಿದ್ದ ಅಮೃತ್ ಪೌಲ್ ರನ್ನು ಬಂಧಿಸಿದೆ. ಈ ಮೂಲಕ ಶಿಸ್ತಿಗೆ ಹೆಸರು ವಾಸಿಯಾಗಿರುವ ಕರ್ನಾಟಕ ಪೊಲೀಸ್ ದೇಶದ ಮುಂದೆ ತಲೆ ತಗ್ಗಿಸುವಂತಾಗಿದೆ.
ಇದೀಗ ಅಮೃತ್ ಪೌಲ್ ಬಂಧನವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ದೃಢಪಡಿಸಿತ್ತು. ಹೌದು ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಅಂದಿದ್ದಾರೆ.
ಇದನ್ನೂ ಓದಿ : Assamese actor Kishor Das : ಕ್ಯಾನ್ಸರ್ ರೋಗಕ್ಕೆ ಬಲಿಯಾದ ಅಸ್ಸಾಂನ ಖ್ಯಾತ ನಟ
545 ಪಿಎಸ್ಐ ನೇಮಕಾತಿ ಸಂದರ್ಭದಲ್ಲಿ ಡೀಲ್ ಗೆ ಇಳಿದಿದ್ದ ಅಮೃತ್ ಪೌಲ್ 25 ಜನರಿಂದ ತಲಾ 30 ಲಕ್ಷ ವಸೂಲಿ ಮಾಡಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ. ಮತ್ತೊಬ್ಬ ಅಧಿಕಾರಿ ಶಾಂತಕುಮಾರ್ ಅಮೃತಾ ಪೌಲ್ ಕಾಸು ಪಡೆದ ಬಗ್ಗೆ ಬಾಯಿ ಬಿಟ್ಟಿದ್ದರು. ಜೊತೆಗೆ ಅಮೃತ್ ಪೌಲ್ ಪರವಾಗಿ ಶಾಂತಕುಮಾರ್ ವಸೂಲಿ ಮಾಡಿದ್ದರು ಅನ್ನುವ ಸಾಕ್ಷಿಯೂ ಸಿಐಡಿಗೆ ಸಿತ್ತಿದೆ.
ಒಟ್ಟು 25 ಜನರಿಂದ ತಲಾ 30 ಲಕ್ಷದಂತೆ 5 ಕೋಟಿ ಪಡೆದಿರುವ ಮಾಹಿತಿ ಈಗ ಸಿಕ್ಕಿದೆ. ಈ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.
Discussion about this post