100 ಡೆಲಿವರಿ ಬಾಯ್ ಗಳನ್ನು ನೇಮಿಸಿಕೊಳ್ಳುವ ಸಲುವಾಗಿ ( amazon job) ಅಮೆಜಾನ್ ಸಂಸ್ಥೆ ಸಂದರ್ಶನಕ್ಕೆ ಆಹ್ವಾನ ನೀಡಿದೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ನಿರುದ್ಯೋಗಿ ಯುವಕರಿಗೆ ಇದೀಗ ಉದ್ಯೋಗದ ಅವಕಾಶವೊಂದು ಬಂದಿದೆ. ಅಮೆಜಾನ್ ಸಂಸ್ಥೆ ನೂರು ಡೆಲಿವರಿ ಬಾಯ್ ಗಳನ್ನು ( amazon job ) ಜಿಲ್ಲೆಯಲ್ಲಿ ನೇಮಿಸಿಕೊಳ್ಳಲು ಮುಂದಾಗಿದ್ದು, ಈ ಹುದ್ದೆಗಳಿಗೆ ಜುಲೈ 12 ರಂದು ಮಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ.
ಈ ಬಗ್ಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಜುಲೈ 12 ರಂದು ಮಂಗಳೂರಿನ ಉರ್ವಾ ಮಾರುಕಟ್ಟೆಯ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ.
ಮಾಹಿತಿಗಳ ಪ್ರಕಾರ ಡೆಲಿವರಿ ಬಾಯ್ ( amazon delivery boy) ಹುದ್ದೆಗೆ 26 ಸಾವಿರ ವೇತನವಿದ್ದು, ( ಅದಕ್ಕೆ ಇರುವ ನಿಬಂಧನೆಗಳು ಸಂದರ್ಶನ ಸಮಯದಲ್ಲಿ ಗೊತ್ತಾಗಲಿದೆ) ಯಾವುದೇ ವಿದ್ಯಾರ್ಹತೆ ಉಳ್ಳವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಇದನ್ನೂ ಓದಿ : kerala bomb blast : ಊಟದ ಬಾಕ್ಸ್ ಎಂದು ಟಿಫಿನ್ ತೆರೆದ್ರೆ ಸ್ಫೋಟಿಸಿದ್ದು ಬಾಂಬ್ : ಇಬ್ಬರು ಕಾರ್ಮಿಕರ ಸಾವು
ಉದ್ಯೋಗಾಕಾಂಕ್ಷಿಗಳು, ದ್ವಿಚಕ್ರ ವಾಹನ ಪರವಾನಿಗೆ, ಪಾನ್ ಕಾರ್ಡ್, ಬ್ಯಾಂಕ್ ಖಾತೆ, ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಹೊಂದಿರಬೇಕಾಗುತ್ತದೆ. ಈ ಎಲ್ಲಾ ದಾಖಲೆಗಳ ಜೊತೆಗೆ ಬೇರೆ ದಾಖಲೆಗಳನ್ನು ಸಂದರ್ಶನದಂದು ಒಯ್ಯುವಂತೆ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನದಲ್ಲಲ್ಲದೆ ಮತ್ತೆಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು : ಮಧ್ಯಪ್ರದೇಶ ಗೃಹ ಸಚಿವ
ಹನುಮಾನ್ ಚಾಲೀಸಾ ( Hanuman Chalisa Madhya Pradesh ) ಪಠಿಸಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಕಾಲೇಜೊಂದರ ವಿರುದ್ಧ ಮಧ್ಯಪ್ರದೇಶ ಸರ್ಕಾರ ಗರಂ ಆಗಿದೆ.
- ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಘಟನೆ
- ಅನುಮತಿಯಿಲ್ಲದೆ ಹಾಸ್ಟೆಲ್ ನಲ್ಲಿ ಹನುಮಾನ್ ಚಾಲೀಸಾ ಕಾರ್ಯಕ್ರಮ ಆಯೋಜನೆ
- ಏಳು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ದಂಡ
ಭೋಪಾಲ್ : ಅನುಮತಿ ಇಲ್ಲದೆ ಭೋಪಾಲ್ ನ ಕಾಲೇಜೊಂದರ ಹಾಸ್ಟೆಲ್ ನಲ್ಲಿ ( Hanuman Chalisa Madhya Pradesh ) ಹನುಮಾನ್ ಚಾಲೀಸಾ ಪಠಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿರುವ ಬಗ್ಗೆ ಮಧ್ಯಪ್ರದೇಶ ಸರ್ಕಾರ ಗರಂ ಆಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ದಂಡ ವಿಧಿಸಬಾರದು ಎಂದು ಸೂಚಿಸಿದ್ದು ಮಾತ್ರವಲ್ಲದೆ, ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದೆ.
ಭೋಪಾಲ್ ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಅನುಮತಿಯಿಲ್ಲದೆ ಹಾಸ್ಟೆಲ್ ನಲ್ಲಿ ಹನುಮಾನ್ ಚಾಲೀಸಾ ( Hanuman Chalisa ) ಕಾರ್ಯಕ್ರಮ ಆಯೋಜನೆ ಮಾಡಿದ್ದರ ವಿರುದ್ಧ ಕಾಲೇಜು ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿತ್ತು. ಏಳು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ದಂಡವನ್ನೂ ವಿಧಿಸಿ ಎಚ್ಚರಿಕೆ ನೀಡಲಾಗಿತ್ತು.
ಯಾವಾಗ ಈ ವಿಷಯ ರಾಜ್ಯ ಸರ್ಕಾರಕ್ಕೆ ತಲುಪಿತೋ, ಕಾಲೇಜು ಆಡಳಿತ ಮಂಡಳಿ ನಡೆಗೆ ಸರ್ಕಾರದಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶ ( Madhya Pradesh ) ಗೃಹ ಸಚಿವ ನರೋತ್ತಮ್ ಮಿಶ್ರಾ, ( narottam Mishra) ಹಿಂದೂಸ್ಥಾನದಲ್ಲಿ ಅಲ್ಲದೆ ಮತ್ತೆ ಎಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು ಎಂದು ಪ್ರಶ್ನಿಸಿದ್ದಾರೆ. ದಂಡ ವಿಧಿಸದಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿರುವ ಸಚಿವರು, ಮೊದಲು ವಿದ್ಯಾರ್ಥಿಗಳಿಗೆ ತಿಳಿ ಹೇಳಿ. ಅವರಲ್ಲಿ ಅರಿವು ಮೂಡಿಸಿ ಅಂದಿದ್ದಾರೆ.
ಇಲ್ಲಿ ಹನುಮಾನ್ ಚಾಲೀಸಾ ಪಠಿಸಿರುವುದಕ್ಕೆ ವಿರೋಧ ವ್ಯಕ್ತವಾಗಿಲ್ಲ. ಬದಲಾಗಿ ಶಬ್ಧದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಕೆಲ ವಿದ್ಯಾರ್ಥಿಗಳ ಪೋಷಕರು ದೂರು ನೀಡಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
Discussion about this post